ದೊಡ್ಡಪೇಟೆ ಪೋಲೀಸರ ಕಾರ್ಯಾಚರಣೆ; ದರೋಡೆ,ಸುಲಿಗೆ ಮಾಡಲು ಹೊಂಚು ಹಾಕಿ ಕುಳಿತಿದ್ದ ನಾಲ್ವರು ಆರೋಪಿಗಳ ಬಂದನ
ಶಿವಮೊಗ್ಗ; ನಗರದಲ್ಲಿ ದರೋಡೆ, ಸುಲಿಗೆಗೆ ಹೊಂಚು ಹಾಕಿ ಕುಳಿತ್ತಿದ್ದ ನಾಲ್ವರು ದರೋಡೆಕೋರರನ್ನ ದೊಡ್ಡಪೇಟೆ ಪೊಲೀಸರು ಇಂದು ಬೆಳಿಗ್ಗೆ ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳ ನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂದರ್ಭದಲ್ಲಿ ಓರ್ವ ವ್ಯಕ್ತಿ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ.
ಒಂಟಿ ಮಹಿಳೆಯರೇ ಇವರಿಗೆ ಟಾರ್ಗೆಟ್, ಹೆದರಿಸಿ ಬೆದರಿಸಿ ಅವರ ಬಳಿಯಿರುವ ಚಿನ್ನಾಭರಣ, ದುಡ್ಡನ್ನ ಕಸಿದುಕೊಳ್ಳುವುದು, ಕೊಡದಿದ್ದರೆ ಸಾಯಿಸಿ ಬಿಡುವುದಾಗಿ ಹೆದರಿಸುವುದೇ ಇವರ ಕಾಯಕವಾಗಿತ್ತು.
ಈ ಎಲ್ಲಾ ಮಾಹಿತಿಯನ್ನ ಕಲೆಹಾಕಿದ್ದ ದೊಡ್ಡಪೇಟೆ ಪೊಲೀಸ್ ಠಾಣೆಯ ಸಿಪಿಐ ವಸಂತ್ ಕುಮಾರ್, ಪಿಎಸ್ಐ ಶಂಕರಮೂರ್ತಿ, ಅಪರಾಧಿದಳದ ಪಿಎಸ್ಐ ಮಂಜಮ್ಮನವರನ್ನೊಳಗೊಂಡ ಸಿಬ್ವಂದಿಗಳ ತಂಡ ರಚಿಸಲಾಗಿತ್ತು.
ಇಂದು ಬೆಳಗ್ಗೆ ಶರಾವತಿ ನಗರ ತುಂಗ ಚಾನಲ್ ಮೇಲೆ ಮುರಾದ್ ನಗರದ ನಿವಾಸಿ ಮಹ್ಮದ್ ಫರ್ಧಿನ್ ಶೇಕ್, ಮಹ್ಮದ್ ರಾಹಿಲ್, ಉಂಬ್ಳೆಬೈಲಿನ ಆಲ್ದೂರಿನ ಆಕಾಶ್.ವಿ, ಇಲಿಯಾಜ್ ನಗರದ ಫಯಾಜ್ ಖಾನ್ ಹಾಗೂ ಹೊಸನಗರದ ಶೇಕ್ ಮಹಮ್ಮದ್ ಸೈಫ್ ಹೊಂಚುಹಾಕಿ ಕುಳಿತ್ತಿದ್ದು ಖಚಿತ ಮಾಹಿತಿ ಮೇರೆಗೆ ದೊಡ್ಡಪೇಟೆಯ ಪೊಲೀಸರ ತಂಡ ದಾಳಿ ನಡೆಸಿದೆ.
Leave a Comment