ಜಿಲ್ಲಾ ಮಟ್ಟದ ಆನ್‌ಲೈನ್ ಗೀತಗಾಯನ ಸ್ಪರ್ಧೆಯಲ್ಲಿ ನಗರದ ಐಸಿರಿ ಪ್ರಥಮ ಬಹುಮಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆ
ಶಿವಮೊಗ್ಗ: ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಆಯೋಜಿಸಿದ್ದ ಜಿಲ್ಲಾ ಮಟ್ಟದ ಆನ್‌ಲೈನ್ ಗೀತಗಾಯನ ಸ್ಪರ್ಧೆಯಲ್ಲಿ ನಗರದ ಐಸಿರಿ ಪ್ರಥಮ ಬಹುಮಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ಧಾಳೆ.ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲೂ ಕೂಡ ಪ್ರಥಮ ಬಹುಮಾನ ಪಡೆದಿದ್ದ ಐಸಿರಿ ಶಿವಪ್ರಸಾದ್ ಮತ್ತು ಸೌಮ್ಯ ಅವರ ಪುತ್ರಿಯಾಗಿದ್ದಾಳೆ. ಈಗಾಗಲೇ ತಾಲ್ಲೂಕು ಜಿಲ್ಲಾ ಮಟ್ಟದ ವಿವಿಧ ಹಾಡುಗಾರಿಕೆ ಸ್ಪರ್ಧೆಗಳಲ್ಲಿ ಹಲವು ಬಹುಮಾನಗಳನ್ನು ಪಡೆದಿದ್ದಾಳೆ.
ಜಿಲ್ಲಾಮಟ್ಟದ ಕಬ್ ವಿಭಾಗದಲ್ಲಿ ಗೋಕುಲ ಪ್ರಥಮಬಹುಮಾನ, ತೇಜಸ್ವಿ ದ್ವಿತೀಯ ಬಹುಮಾನ ಪಡೆದರೆ ಬುಲ್ ಬುಲ್ ವಿಭಾಗದಲ್ಲಿ ನಿಖಿತ, ಅನನ್ಯ, ಸ್ಕೌಟ್ ವಿಭಾಗದಲ್ಲಿ ವೀರನರಸಿಂಹರಾವ್, ಮನೋಜ್, ರೇಂಜರ್ಸ್ ವಿಭಾಗದಲ್ಲಿ ಬಿಂದುಶ್ರೀ, ಚಿನ್ಮು ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಬಹುಮಾನ ಪಡೆದಿದ್ದಾರೆ. ವಿಜೇತರೆಲ್ಲರಿಗೂ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಅಭಿನಂದನೆ ಸಲ್ಲಿಸಿ ರಾಜ್ಯಮಟ್ಟದಲ್ಲೂ ಕೂಡ ಜಯಶೀಲರಾಗಲೆಂದು ಹಾರೈಸಿದೆ.
Leave a Comment