ವೀರಶೈವ ಲಿಂಗಾಯತ ಎನ್ನುವ ಬದಲು ಲಿಂಗಾಯತ ಎಂದು ಜಾತಿ ಪ್ರಮಾಣಪತ್ರ ನೀಡಬೇಕು: ರಾಷ್ಟ್ರೀಯ ಬಸವದಳ ಟ್ರಸ್ಟ್ ಒತ್ತಾಯ
ಶಿವಮೊಗ್ಗ: ವೀರಶೈವ ಲಿಂಗಾಯತ ಎನ್ನುವ ಬದಲು ಲಿಂಗಾಯತ ಎಂದು ಜಾತಿ ಪ್ರಮಾಣಪತ್ರ ನೀಡಬೇಕು ಎಂದು ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ರಾಷ್ಟ್ರೀಯ ಬಸವದಳ ಟ್ರಸ್ಟ್ ಒತ್ತಾಯಿಸಿದೆ.
ಸಮಾಜದ ವಿದ್ಯಾರ್ಥಿ ಸಮುದಾಯಕ್ಕೆ ಉಂಟಾಗುತ್ತಿರುವ ತೊಂದರೆ ಮತ್ತು ಅನ್ಯಾಯವನ್ನು ಸರಿಪಡಿಸಲು ಹಾಗೂ ಜಾತಿ ಪ್ರಮಾಣಪತ್ರವನ್ನು ಲಿಂಗಾಯತ ಎಂದು ನೀಡಲು ಕಂದಾಯ ಇಲಾಖೆಗೆ ಸೂಚನೆ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಲಿಂಗಾಯತ ಸಮುದಾಯದ ವಿದ್ಯಾರ್ಥಿಗಳು ಜಾತಿಪ್ರಮಾಣ ಪತ್ರ ಕೇಳಿದರೆ ಕಂದಾಯ ಇಲಾಖೆುಂದ ವೀರಶೈವ ಲಿಂಗಾಯತ ಎಂದು ಉಲ್ಲೇಖಿಸಲಾಗುತ್ತಿದೆ. ಇದರಿಂದ ಸಾವಿರಾರು ನವೋದಯ ಪ್ರವೇಶಾತಿ ವಿದ್ಯಾರ್ಥಿಗಳು ಪ್ರವೇಶಾತಿಯಿಂದ ವಂಚಿತರಾಗಿದ್ದಾರೆ. ಇದರಿಂದ ಸಮಾಜದವರಿಗೆ ಅಪಾರವಾದ ನೋವುಂಟು ಮಾಡಿದೆ. ಕಂದಾಯ ಇಲಾಖೆಯಲ್ಲಿ ಉಂಟಾಗಿರುವ ಈ ಲೋಪದೋಷ ಸರಿಪಡಿಸಲು ವೀರಶೈವ ಲಿಂಗಾಯತ ಬದಲಿಗೆ ಲಿಂಗಾಯತ ಎನ್ನುವ ಜಾತಿ ಪ್ರಮಾಣ ಪತ್ರ ಒದಗಿಸುವುದರ ಮೂಲಕ ಸಮಾಜದ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕನ್ನು ಉಜ್ವಲ ಗೊಳಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಹಿರಣ್ಣಯ್ಯ, ಯೋಗೀಶ್, ಮೂಲಿಮನಿ, ಬಾಲಾನಂದ, ಶಿವಣ್ಣ ಇನ್ನಿತರರು ಹಾಜರಿದ್ದರು.
Leave a Comment