ಹೋಟೆಲ್ ಉದ್ಯಮಿ ಸ್ನೇಹ ಜೀವಿ ಕೃಷ್ಣ ಹೊಳ್ಳ ಇನ್ನಿಲ್ಲ


ಶಿಕಾರಿಪುರ: ದ. ಕ .ಜಿಲ್ಲೆ ಯಿಂದ ಬಂದು ಶಿಕಾರಿಪುರದಲ್ಲಿ ನೆಲೆಸಿ ಅನೇಕ ದಶಕಗಳೇ ಕಳೆದವು. ಗುರುಪ್ರಸಾದ್ ಎಂಬ ಹೆಸರಿನ ಹೋಟೆಲ್ ಉದ್ಯಮ ಪ್ರಾರಂಭಿಸಿ  ಹೋಟೆಲ್ ಉದ್ಯಮದ ಹಿರಿಯ ಚೇತನ ಗೋಪಾಲಕೃಷ್ಣ ಹೊಳ್ಳ (81) ಬುಧವಾರ  ನಿಧನ ಹೊಂದಿ ದ್ದಾರೆ.

ಅವರು  ಹೋಟೆಲ್ ಉದ್ಯ ಮ ತ್ಯಜಿಸಿ ಬಹಳ ಸಮಯ ದಿಂದ ಗುರುಪ್ರಸಾದ್ ಕಾಫಿಪುಡಿ ಅಂಗಡಿಯನ್ನು ನಡೆಸುತ್ತಿದ್ದು, ಚಿಕ್ಕ ಮಕ್ಕಳು ಪರಿಚಯಸ್ಥರು ಅಂಗಡಿಗೆ ಬಂದಾಗ ಪ್ರೀತಿ ಯಿಂದ ಮಾತನಾಡಿಸಿ ಚಾಕ ಲೇಟ್ ನೀಡಿ ಹಾಸ್ಯ ಮಾಡುವ ಪ್ರವೃತ್ತಿಯವರಾಗಿದ್ದರು.

 ಮೊನ್ನೆ ಕರೋನಾ ಸಮಯದಲ್ಲಿ ವಾರಿಯರ್ಸ್ ಗಳಾದ ಆರಕ್ಷಕರು  ಹಾಗೂ ಪುರಸಭೆಯ ಸಿಬ್ಬಂದಿಗಳಿಗೆ. ಅವರ ಕೆಲಸ ಮೆಚ್ಚಿ ಸಿಹಿ ಹಾಗು ಕಾರದ ತಿಂಡಿಗಳನ್ನು  ಹಂಚಿದ್ದ  ಈ ಗೋಪಾಲಕೃಷ್ಣ ಹೊಳ್ಳರು ದಕ್ಷಿಣ ಭಾರತ ದ ಗಂಡು ಮೆಟ್ಟಿನ ಕಲೆ ಎಂದೇ ಪ್ರಖ್ಯಾತ ವಾದ  ಯಕ್ಷಗಾನ ಅಭಿಮಾನಿ ಗಳು ಹೌದು. ಎಲ್ಲಾದರೂ ಯಕ್ಷಗಾನ  ಪ್ರಸಂಗಗಳು ನಡೆ ದರೂ ಅವರು ಅಲ್ಲಿ ಪ್ರತ್ಯಕ್ಷರಾಗಿ  ವೀಕ್ಷಿಸುತ್ತಿದ್ದ    ಇವರು ಕಲಾ ಭಿಮಾನಿ, ಧರ್ಮ ಧಾರ್ಮಿ ಕತೆಯ ಬಗ್ಗೆ ಅಪಾರ ನಂಬಿಕೆಯುಳ್ಳ ಮಹನೀಯ. 


ಜಾತ್ರಾ ವೈಭವದ ಸಂದರ್ಭ ಗಳಲ್ಲಿ ಮಕ್ಕಳೊಂದಿಗೆ  ಛಾಯಾ ಚಿತ್ರ ಗಳು ಆಟಿಕೆ ವೀಕ್ಷಿಸುವ  ಹವ್ಯಾಸದ ಮುಗ್ದ ಮನಸ್ಸಿನ ವ್ಯಕ್ತಿತ್ವದ ಕೈಗನ್ನಡಿಯಾಗಿದ್ದರು. ಅವರ ನಿಧನದಿಂದಾಗಿ ಹೋೆಲ್ ಉದ್ಯಮ  ಬಡವಾಗಿದೆ. ಅವರಿಗೆ ಇಬ್ಬರು ಪುತ್ರರು, ಮೊಮ್ಮಕ್ಕಳು ಹಾಗೂ ಅಪಾರ ಸಂಬಂಧಿಕರನ್ನು ಬಿಟ್ಟು ಅಗಲಿದ್ದಾರೆ.

ಭಗವಂತನು ಅವರ ಆತ್ಮಕ್ಕೆ ಶಾಂತಿ ದೊರಕಿಸಲೆಂದು ಹೋಟೆಲ್ ಉದ್ಯಮಿಗಳು,  ಛಾಯಾಗ್ರಾಹಕರು  ಕರಾವಳಿ ಸಂಘ, ಬ್ರಾಹ್ಮಣ ಸಮುದಾಯ ಮತ್ತು ಮಾಧ್ಯಮದ ಸ್ನೇಹಿತರು ಪ್ರಾರ್ಥಿಸಿದ್ದಾರೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.