ಕೊರೋನಾ ಶವವನ್ನು ಸುಡಲು ನಿಯೋಜಿಸಲಾಗಿದ್ದ ಪಾಪನಾಯಕ್ ಕೊರೋನಾಗೆ ಬಲಿ
ಶಿವಮೊಗ್ಗ; ಮಹಾನಗರ ಪಾಲಿಕೆಯ ವಿದ್ಯಾನಗರದಲ್ಲಿರುವ ಚಿತಾಗಾರದಲ್ಲಿ ಮಹಾನಗರಪಾಲಿಕೆ ವತಿಯಿಂದ ಕೋವಿಡ್ ಸೋಂಕಿಗೆ ತುತ್ತಾದ ಶವವನ್ನು ಸುಡಲು ಮೂರು ಜನ ನೌಕರರನ್ನು ನಿಯೋಜಿಸಲಾಗಿತ್ತು. ಅದರಲ್ಲಿ ಪಾಪನಾಯಕ್ ಎಂಬುವ ವ್ಯಕ್ತಿಯು ಕೋವಿಡ್ ಸೋಂಕಿತ ಹೆಣವನ್ನು ಪ್ರತಿನಿತ್ಯ ಸುಡುವ ಕಾರ್ಯದಲ್ಲಿ ತೊಡಗಿಸಿ ಕೊಂಡಿದ್ದರು.
ಮಹಾನಗರ ಪಾಲಿಕೆಯಿಂದ ಗ್ಯಾಸ್ ಕ್ರಿಮಿಟೋರಿಯಂ ಶುರುವಾದಾಗಿನಿಂದ ಕೋವಿಡ್ ಬಾಡಿ ಗಳನ್ನು ಸುಡುತ್ತಾ ಬಂದಿರುತ್ತಾರೆ, ಹಗಲು-ರಾತ್ರಿಯೆನ್ನದೆ ಕೆಲಸ ಮಾಡುತ್ತ ಕಳೆದ ಮೂರ್ನಾಲ್ಕು ದಿನದಿಂದ ಪಾಪನಾಯ್ಕ ಅವರು ಕೊರೊನಾ ಸೋಂಕಿಗೆ ತುತ್ತಾಗಿದ್ದು, ಭಾನುವಾರ ದಿನ ಮೃತಪಟ್ಟಿರುತ್ತಾರೆ.
ಶಿವಮೊಗ್ಗ ನಗರದ ಜನತೆ ಪರವಾಗಿ ಹಾಗೂ ಜಿಲ್ಲೆಯ ಜನತೆ ಪರವಾಗಿ ಹಾಗೂ ಕಾಂಗ್ರೆಸ್ ಪಕ್ಷದ ಮಹಾನಗರಪಾಲಿಕೆಯ ಎಲ್ಲಾ ಸದಸ್ಯರ ಪರವಾಗಿ
ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಮೃತರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲೆಂದು ಎಂದು ಪಾಲಿಕೆ ವಿರೋಧ ಪಕ್ಷದ ನಾಯಕರಾದ ಹೆಚ್ ಸಿ ಯೋಗೇಶ್ ರವರು ಪ್ರಾರ್ಥಿಸಿದ್ದಾರೆ.
ನಮ್ಮ ಪತ್ರಿಕೆ ಸಹ ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಮೃತರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುವ..

Leave a Comment