ಕಾಚಿನಕಟ್ಟೆಯ ಬಳಿ ಕಾರು ಮರಕ್ಕೆ ಡಿಕ್ಕಿ ಇಬ್ಬರು ಯುವಕರ ಸಾವು

ಶಿವಮೊಗ್ಗದಿಂದ ಎನ್ ಆರ್ ಪುರಕ್ಕೆ ತೆರಳುತ್ತಿದ್ದ ಸೆಲೆರಿಯೋ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದು ಅಪಘಾತದಲ್ಲಿ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ಶಿವಮೊಗ್ಗದಲ್ಲಿ ಶಿವಪ್ಪ ನಾಯಕನ ಮಾಲ್ ನಲ್ಲಿ ಶಾಪಿಂಗ್ ಮುಗಿಸಿಕೊಂಡು  ಎನ್ಆರ್ ಪುರಕ್ಕೆ ಕೆಎ18 Z 4890ಕ್ರಮ ಸಂಖ್ಯೆಯ ಸೆಲೆರಿಯೋ ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಕಾಚಿನಕಟ್ಟೆಯಲ್ಲಿ ವಾಹನವೊಂದನ್ನ ಹಿಂದೆ ಹಾಕಲು ಹೋದಾಗ ಎನ್ ಆರ್ ಪುರದ ಯುವಕರಿದ್ದ ಕಾರು ಮರವೊಂದಕ್ಕೆ ಡಿಕ್ಕಿ ಹೊಡೆದಿದೆ.  

ಜೈಸನ್(20) ಹಾಗೂ ಅನುರಾಗ್(21) ಎಂಬುವರು ಸಾವನ್ನಪ್ಪಿದ್ದಾರೆ. ಸಮೀತ್ ಸುಕಮಾರ್ ಹಾಗೂ ಸಮೀತ್ ಎಂ ಜೇಮ್ಸ್ ಎಂದು ತಿಳಿದುಬಂದಿದೆ. ಮರಕ್ಕೆ ಹೊಡೆದು ನಂತರ ಎಲೆಕ್ಟ್ರಿಕಲ್ ಪೋಲ್ ಗೆ ಡಿಕ್ಕಿ ಹೊಡೆದಿದ್ದಾರೆ. ಇವರೆಲ್ಲಾ ಎನ್ ಆರ್ ಪುರದ ನಿವಾಸಿಗಳಾಗಿದ್ದು, ಇವರೆಲ್ಲರೂ ಸ್ನೇಹಿತರು ಎಂದು ತಿಳಿದುಬಂದಿದೆ. ಸಮೀತ್ ಸುಕುಮಾರ್ ಮತ್ತು ಸಮೀತ್ ಎಂ.ಜೇಮ್ಸ್ ಇವರಿಬ್ಬರನ್ನ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.