ಕೊರಾನ ಸಂಕಷ್ಟದ ದಿನಗಳಲ್ಲಿ ಖಾಸಾಗಿ ಶಾಲೆಗಳಿಂದ ಆನ್ ಲೈನ್ ಪಾಠದ ಹೆಸರಿನಲ್ಲಿ ಹಣ ಸುಲಿಗೆ; ರಾಜ್ಯಾದ್ಯಕ್ಷ ಗೋ.ರಮೇಶ್ ಗೌಡ ಆರೋಪ

ಶಿವಮೊಗ್ಗ; ಕೊರೋನದಿಂದ ಜನರ ಜೀವನ ಬದುಕು ಕಷ್ಟವಾಗಿದೆ.ಇಂತಹ ಕೊರಾನ ಸಂಕಷ್ಟದ ದಿನಗಳಲ್ಲಿ ಖಾಸಗಿ ಶಾಲೆಗಳು ಆನ್ ಲೈನ್  ಪಾಠದ ಹೆಸರಿನಲ್ಲಿ ಫೊಷಕರಿಂದ ಹಣ ಸುಲಿಗೆ ಮಾಡುತ್ತಿವೆ. ಇದನ್ನ  ಜಿಲ್ಲಾಡಳಿತ  ತಡೆಯಲು ವಿಫಲವಾಗಿದೆ,  ಇದನ್ನು  ತಡೆಯಲು ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ನವಕರ್ನಾಟಕ ನಿರ್ಮಾಣ ವೇದಿಕೆ ಬೀದಿಗಿಳಿದು ಹೋರಾಟ ಮಾಡಲಿದೆ ಎಂದು ವೇದಿಕೆಯ ರಾಜ್ಯಾದ್ಯಕ್ಷ  ಗೋ.ರಮೇಶ್ ಗೌಡ ಹೇಳಿದರು.

ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ವೇದಿಕೆಯ Covid-19 ಹಿನ್ನಲೆಯಲ್ಲಿ ಪೋಷಕರು ಕೆಲಸ ಕಳೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಶಾಲೆಗಳು ಸಹ ಬಂದ್ ಮಾಡಲಾಗಿದೆ. ಆದರೆ ಖಾಸಗಿ ಶಾಲೆಗಳು ಶಾಲೆ ತೆರೆಯಲು ಸಾಧ್ಯವಾಗದಿದ್ದರೂ ಪೋಷಕರಿಂದ ಫೀಸ್ ತೆಗೆದುಕೊಳ್ಳಲು ಮುಂದಾಗಿದೆ. ಆದರೆ ಜಿಲ್ಲಾಡಳಿತ ಕಣ್ಣುಮುಚ್ಚಿ ಕುಳಿತಿದೆ ಎಂದು ಆರೋಪಿಸಿದರು.

ಖಾಸಗಿ ಶಾಲೆಗಳು ವ್ಯಾಪಾರಿ ಮನೋಭಾವನೆಯಿಂದ ಶುಲ್ಕಭರಿಸಲು ಪೋಷಕರಿಗೆ ಒತ್ತಾಯಿಸುತ್ತಿದೆ. ಈ ಹಿನ್ನಲೆಯಲ್ಲಿ ಸರ್ಕಾರ ಪೋಷಕರು ಹಣ ಭರಿಸಬೇಕೋ ಬೇಡವೋ ಎಂಬುದನ್ನ ಸ್ಪಷ್ಟಪಡಿಸಬೇಕು.

ಕೆಲ ಶಾಲೆಗಳು ಕೆಲವು ಶಿಕ್ಷಕರನ್ನ ಮಾತ್ರ ಬಳಸಿಕೊಂಡು ಆನ್ ಲೈನ್ ಪಾಠಕ್ಕೆ ಮುಂದಾಗಿವೆ. ಖಾಸಗಿ ಶಾಲೆಗಳು ಈ ಆನ್ ಲೈನ್ ವಿಷಯದಲ್ಲಿ ಎಷ್ಟು ಹಣ ತುಂಬಬೇಕು ಎಂಬುದು ಸರ್ಕಾರ ನಿಲುವು ಪ್ರಕಟಿಸಬೇಕು. 
ಈ ಕುರಿತು ಪೋಷಕರಲ್ಲಿ ಜಾಗೃತಿ ಮೂಡಿಸಿ ಸರ್ಕಾರ ಕ್ರಮ ಜರುಗಿಸಬೇಕೆಂದು ರಮೇಶ್ ಗೌಡ ಆಗ್ರಹಿಸಿದ್ದಾರೆ.

ಒಂದು ವೇಳೆ ಸರ್ಕಾರ ಇದಕ್ಕೆ ಕಡಿವಾಣ ಹಾಕಲು ಆಗದಿದ್ದರೆ, ಖಾಸಗಿ ಶಾಲೆಗಳು ಹಣ ಸುಲಿಗೆ ನಿಲ್ಲಿಸದಿದ್ದರೆ ನವಕರ್ನಾಟಕ ನಿರ್ಮಾಣ ವೇದಿಕೆ ಬೀದಿಗಿಳಿದು ಹೋರಾಡಲಿದೆ ಎಂದು ಎಚ್ಚರಿಸಿದರು.
ಈ ಸಂಧರ್ಭದಲ್ಲಿ ವೇದಿಕೆಯ ಪ್ರಮುಖರು ಹಾಜರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.