ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ 54 ನೇ ಅಂತರರಾಷ್ಟ್ರೀಯ ಸಾಕ್ಷಾರತಾ ದಿನಾಚರಣೆ
ಶಿವಮೊಗ್ಗ: ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ 54 ನೇ ಅಂತರರಾಷ್ಟ್ರೀಯ ಸಾಕ್ಷಾರತಾ ದಿನಾಚರಣೆಯನ್ನು ಆಚರಿಸಲಾಯಿತು.
ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳ ಕಚೇರಿ, ಜಿಲ್ಲಾ ಸಾಕ್ಷಾರತಾ ಸಮಿತಿ ಹಾಗೂ ಕೇಂದ್ರ ಕಾರಾಗೃಹದ ಸಹೋಗದಲ್ಲಿ ನಡೆದ ಕಾರ್ಯಕ್ರಮವನ್ನು ಜಲ್ಲಾ ಪಂಚಾಯತ್ ಸಿಇಒ ಶ್ರೀಮತಿ ವೈಶಾಲಿರವರು ದೀಪ ಬೆಳಗಿಸಿ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಜಿಲ್ಲಾ ಕಾರಾಗೃಹದಲ್ಲಿ ಸಾಕ್ಷಾರತಾ ದಿನಾಚರಣೆ ನಡೆಸುತ್ತಿರುವುದು ಸಂತೋಷದ ವಿಚಾರವಾಗಿದೆ. ಇಂದು ಸಾಕ್ಷರತೆಗಾಗಿ ಇಂದು 112 ಕ್ಕೂ ಹೆಚ್ಚು ಕೈದಿಗಳು ನೊಂದಣಿ ಮಾಡಿಸಿ ಕೊಂಡಿದ್ದಾರೆ. ಇದನ್ನು ನೋಡಿದ್ರೆ, ನಮ್ಮಲ್ಲಿ ಇನ್ನೂ ಅನಕ್ಷರಸ್ಥರು ಎಷ್ಟು ಜನ ಇದ್ದಾರೆ ಎಂಬುದು ತಿಳಿಯುತ್ತಿದೆ ಎಂದರು.
ಸಾಕ್ಷರತೆಗೆ ಸೇರಿದವರಿಗೆ ಕಲಿಕೋಪಕರಣಗಳನ್ನು ವಿತರಿಸಲಾಯಿತು.
ಕಳೆದ ಭಾರಿ 160 ಜನ ಸಾಕ್ಷಾರತಾ ಆಂದೋಲನದಲ್ಲಿ ಸಾಕ್ಷರತರಾಗಿದ್ದಾರೆ ಎಂದು ತಿಳಿದು ಸಂತೋಷವಾಯಿತು ಎಂದರು. ಕಳೆದ ವರ್ಷ ಸಾಕ್ಷರತಾರಾದವರಿಗೆ ಕಲಿಕ ಪತ್ರವನ್ನು ವಿತರಿಸಲಾಯಿತು.
ಸಾಕ್ಷರತೆಗೆ ಸೇರಿಕೊಂಡವರಿಗೆ ಜೈಲ್ ನಲ್ಲಿ ಕಲಿಕೆಗೆ ಬೇಕಾದ ಎಲ್ಲಾ ಸೌಲಭ್ಯವನ್ನು ಒದಗಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಮಹಿಳಾ ಕೇಂದ್ರ ಕಾರಾಗೃಹದ ಅಧಿಕ್ಷಕಿ ಅನಿತಾ ಹಿರೇಮನಿ , ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಅನ್ಸರ್ ಆಲಿ ಬೇಗ್ ಹಾಜರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಂದ್ರ ಕಾರಾಗೃಹದ ಮುಖ್ಯ ಅವಹಿಸಿದ್ದರು.ಪಿ.ರಂಗನಾಥ್ ರವರು ವಹಿಸಿದ್ದರು.

Leave a Comment