ಭದ್ರಾ ಡ್ಯಾಂ ಫುಲ್ ಇಂದು 4 ಗೇಟ್ ಓಪನ್, 1751 ಕ್ಯೂಸೆಕ್ಸ್ ಭದ್ರಾ ನದಿಗೆ ನೀರು ಬಿಡುಗಡೆ.. ವಿಡಿಯೋ ನೋಡಿ

ಶಿವಮೊಗ್ಗ;ಭದ್ರಾ ನದಿಗೆ ನಾಲ್ಕು ಗೇಟ್ ತೆರೆದು ನದಿಗೆ ನೀರುಬಿಡಲಾಗಿದೆ. 186 ಅಡಿ ಎತ್ತರದ  ಭದ್ರಾ ಡ್ಯಾಂನಿಂದ ಇಂದು 1751 ಕ್ಯೂಸೆಕ್ಸ್ ನೀರನ್ನ ನದಿಗೆ ಹರಿಸಲಾಗಿದೆ.
ಇಂದು ಮಧ್ಯಾಹ್ನ  ಸಮಯದಲ್ಲಿ ನಾಲ್ಕು ಗೇಟ್ ತೆರೆದು ಡ್ಯಾಂಗೆ ನೀರು ಹರಿಸಲಾಯಿತು. 173 ಟಿಎಂಸಿ ಸಂಗ್ರಹದ ಡ್ಯಾಂನಲ್ಲಿ ಮೂರು ಇಂಚು ಗೇಟನ್ನ ತೆರೆದು 1751 ಕ್ಯೂಸೆಕ್ಸ್ ನೀರು ಭದ್ರನದಿಗೆ ಬಿಡಲಾಗಿದೆ.
ಹೈಡ್ರಾಲಿಕ್ ಬಟನ್ ಒತ್ತುವ ಮೂಲಕ ತೆರೆಯಲಾಗಿದ್ದು, 8453 ಕ್ಕೂ ಹೆಚ್ಚು ಕ್ಯೂಸೆಕ್ಸ್ ನೀರು ನದಿಯ ಸದ್ಯದ ಒಳಹರಿವಿದೆ. ಭದ್ರ ನದಿಗೆ, ಪವರ್ ಪ್ರಾಜೆಕ್ಟ್ ಎಡದಂಡೆ, ಬಲದಂಡೆ ಅಪ್ಪರ್ ಭದ್ರ ಹಾಗೂ ವಾಣಿವಿಲಾಸ್ ಸಾಗರಕ್ಕೆ ಎಲ್ಲಾ ಸೇರಿ ಒಟ್ಟು 3
ಸಾವಿರಕ್ಕೂ ಹೆಚ್ಚು ಕ್ಯೂಸೆಕ್ಸ್ ನೀರು ಡ್ಯಾಂನಿಂದ  ಹರಿಸಲಾಗುತ್ತಿದೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.