ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಗ್ರಸ್ಥಾನ ದಲ್ಲಿದ್ದು ಪ್ರಸಕ್ತ ವರ್ಷ ದಲ್ಲಿ 19 ಕೋಟಿ ಲಾಭ ಗಳಿಸಿದೆ: ಅದ್ಯಕ್ಷ ಆರ್ ಎಂ ಮಂಜುನಾಥ ಗೌಡ
ಶಿವಮೊಗ್ಗ: ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಗ್ರಸ್ಥಾನ ದಲ್ಲಿದ್ದು ಪ್ರಸಕ್ತ ವರ್ಷ ದಲ್ಲಿ 19 ಕೋಟಿ ಲಾಭ ಗಳಿಸಿದೆ ಎಂದು ಬ್ಯಾಂಕ್ ನ ಅದ್ಯಕ್ಷ ಆರ್ ಎಂ ಮಂಜುನಾಥ ಗೌಡ ಹೇಳಿದರು
ಅವರು ಇಂದು ಕೇಂದ್ರ ಡಿಸಿಸಿ ಬ್ಯಾಂಕ್ ಅವರಣದಲ್ಲಿ ಆಯೋಜಿಸಿದ್ದ ಮುಖ ಮಂಟಪ,ಮೇಲ್ಛಾವಣಿ, ಹಾಗು ಅತಿಥಿ ಗೃಹ ಲೋಕಾರ್ಪಣೆ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತಾನಾಡುತ್ತಿದ್ದರು.
ಡಿಸಿಸಿ ಬ್ಯಾಂಕ್ ತನ್ನ ಅಗ್ರಸ್ಥಾನವನ್ನು ಉಳಿಸಿಕೊಂಡು ಬಂದಿದೆ ಆರ್‌ಬಿಐ ನಿಯಮಗಳ ನಡುವೆಯೂ ರೈತರ ಹಿತ ಕಾಯ್ದುಕೊಂಡು ಬಂದಿದೆ. ಸುಮಾರು 900 ಕೋಟಿ ಸಾಲವನ್ನು 1.10 ಲಕ್ಷ ರೈತರಿಗೆ ನೀಡಿದ್ದೆವೆ,ಇದರಲ್ಲಿ700 ಕೋಟಿ ಸಾಲವನ್ನುರೈತರಿಗೆ ಬಡ್ಡಿರಹಿತವಾಗಿ ಕೊಟ್ಟಿದ್ದೆವೆ ಎಂದರು.
ಕೊರೋನಾ ನೆರೆ ಹಾವಳಿಗಳಿಂದ ಸಂಕಷ್ಟದಲ್ಲಿ ಸಿಲುಕಿದ್ದ ರೈತರಿಗೆ ಡಿಸಿಸಿ ಬ್ಯಾಂಕ್ ನೆರವು ನೀಡಿದೆ. ಹೊಸ ರೈತರಿಗೆ ಸಾಲ ನೀಡಿದೆ. ಕೇವಲ ರೈತರಿಗಷ್ಟೆ ಅಲ್ಲದೇ ಉಪಕಸುಬು ಮಾಡಿಕೊಂಡು ಬರುತ್ತಿದ್ದವರಿಗೂ ಕೂಡ ಸಾಲ ನೀಡಲಾಗಿದೆ. ಕೃಷಿಯೇತರ ಸಾಲಗಳನ್ನು ನೀಡಿ ಬ್ಯಾಂಕ್ ಲಾಭದತ್ತ ಸಾಗುವಂತೆ ಮಾಡಿದೆ. ಕಳೆದ 25 ವರ್ಷಗಳ ಅವಧಿಯಲ್ಲಿ ಡಿಸಿಸಿ ಬ್ಯಾಂಕ್ ಒಂದು ಮಾದರಿ ಸಹಕಾರ ಸಂಸ್ಥೆಯಾಗಿ, ಬಹುದೊಡ್ಡದಾಗಿ ಬೆಳೆದುಬಂದಿದೆ ಎಂದರು.
ಬ್ಯಾಂಕಿನಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಗ್ರಾಹಕರನ್ನು ಹೊಂದಿದೆ ಇಪ್ಪತ್ತೆಂಟು ಶಾಖೆಗಳಿವೆ 900 ಸಹಕಾರಿ ಸಂಸ್ಥೆಗಳಿವೆ. ಇವುಗಳ ಮೂಲಕ ಕೃಷಿ ಸಾಲವಲ್ಲದೆ ಕೃಷಿಯೇತರ ಸಾಲ ನೀಡಿದ್ದೆವೆ. ಸರ್ಕಾರದ ಯೋಜನೆಗಳ ಪ್ರಾಮಾಣಿಕವಾಗಿ ತಲುಪಿಸಿದ್ದೆವೆ. ಹಲವು ಪ್ರಥಮಗಳ ಇತಿಹಾಸವನ್ನು ಬ್ಯಾಂಕ್ ಹೊಂದಿದೆ ಎಂದರು.
ಮಹಿಳೆಯರ ಸ್ವಾವಲಂಬನೆಗೆ ಬ್ಯಾಂಕ್ ಯಾವಾಗಲೂ ಆದ್ಯತೆ ನೀಡಿದೆ.ಅರ್ಥಿಕ ನೆರವು ನೀಡಿದೆ. ಈಗ ಬ್ಯಾಂಕ್ ಅವರದಲ್ಲಿ ಮುಖ ಮಂಟಪ ಮೇಲ್ಛಾವಣಿ, ಅತಿಥಿ ಗೃಹ ಉದ್ಘಾಟನೆ ಆಗಿದೆ ಇದು ಬ್ಯಾಂಕ್‌ನ ಮತ್ತೊಂದು ಹೆಮ್ಮೆ ಎಂದರು.
ಬಸವ ಕೇಂದ್ರದ ಶ್ರೀ ಮರಳುಸಿದ್ದ ಸ್ವಾಮೀಜಿಗಳು ಕಟ್ಟಡಗಳ ಲೋಕಾರ್ಪಣೆಗೊಳಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂಪತ್ತು ಅನರ್ಥವಾಗಿ ಎಲ್ಲಿಯೂ ಒಟ್ಟುಗೂಡಬಾರದು. ಅದು ಹಂಚಿಕೆಯಾಗಬೇಕು. ಆಗಮಾತ್ರ ಉಪಯೋಗಕ್ಕೆ ಬರುತ್ತದೆ. ಹಣ ಇದ್ದವರು ಬ್ಯಾಂಕಿನಲ್ಲಿ ಠೇವಣಿ ಇಟ್ಟರೆ ಅದು ಇತರೆ ಕಾರ್ಯಗಳಿಗೆ ಅನುಕೂಲವಾಗುತ್ತದೆ ಎಂದರು.
ಡಿಸಿಸಿ ಬ್ಯಾಂಕ್ ನಂಬಿಕೆ ಉಳಿಸಿಕೊಂಡು ರೈತರ ಜೀವನಾಡಿಯಾಗಿ ದೇಶಕ್ಕೆ ಮಾದರಿ ಸಹಕಾರ ಸಂಸ್ಥೆಯಾಗಿ ಹೊರಹೊಮ್ಮಲಿ. ಇದರ ಪ್ರಯೋಜನ ಎಲ್ಲ ರೈತರಿಗೆ, ಕಾರ್ಮಿಕರು, ಮಹಿಳೆಯರಿಗೆ ದೊರಕಲಿ ಎಂದ ಅವರು, ಕೊರೋನಾ ಈ ಸಂದರ್ಭದಲ್ಲಿ ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ. ಆದರೆ ಎಚ್ಚರಿಕೆ ಇರಲಿ ಎಂದು ಕಿವಿಮಾತು ಹೇಳಿದರು.
ವೇದಿಕೆಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಚನ್ನವೀರಪ್ಪ, ಪ್ರಮುಖರಾದ ಕೆ.ಪಿ.ದುಗ್ಗಪ್ಪಗೌಡ, ಎನ್.ಹೆಚ್. ಶ್ರೀಪಾದ್, ಅಗಡಿ ಅಶೋಕ್, ಬಸವಾನಿ "ಜಯದೇವ್, ಜೆ.ಪಿ. ಯೋಗೀಶ್, ಎಸ್.ಪಿ. ದಿನೇಶ್, ಹೆಚ್.ಎಲ್.ಷಡಾಕ್ಷರಿ, ಬಿ.ಡಿ.ಭೂಕಾಂತಪ್ಪ, ಜೆ.ಎನ್.ಸುಧೀರ್, ಸಿ.ರಾಜಣ್ಣ ರೆಡ್ಡಿ, ಆನಂದ್, ಹೆಚ್.ಕೆ.ವೆಂಕೇಶ್ ಸೇರಿದಂತೆ ಹಲವರಿದ್ದರು.
Leave a Comment