ಮಕ್ಕಳಿಗೆ ಟೆಲಿ ಕೌನ್ಸಿಲಿಂಗ್ ಸೌಲಭ್ಯ ಪ್ರಾರಂಭ; ಟೋಲ್ ಫ್ರೀ ಸಂಖ್ಯೆ 14499

ಶಿವಮೊಗ್ಗ, : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಮಕ್ಕಳ ಪರಿಸ್ಥಿತಿ ಉತ್ತಮ ಪಡಿಸಲು ಮಕ್ಕಳು ಮತ್ತು ಪೋಷಕರಿಗೆ ಆಪ್ತ ಸಮಾಲೋಚನೆಗಾಗಿ ಉಚಿತ ಟೆಲಿಕೌನ್ಸಿಲಿಂಗ್ ಸೌಲಭ್ಯವನ್ನು ಪ್ರಾರಂಭಿಸಿದೆ.ಆಪ್ತ ಸಮಾಲೋಚನಾ ಸೌಲಭ್ಯವನ್ನು ಪಡೆಯಬಯಸುವವರು ಟೋಲ್ ಫ್ರೀ ಸಂಖ್ಯೆ 14499 ಕ್ಕೆ ವಾರದ ಎಲ್ಲಾ 7 ದಿನಗಳಲ್ಲಿ ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರಿಗೆ ಕರೆ ಮಾಡಬಹುದಾಗಿದೆ. 


ಕೋವಿಡ್-19ರ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಮಕ್ಕಳಿಗೆ ಯಾವುದೆ ಹೊರಾಂಗಣ ಚಟುವಟಿಕೆಗಳಿಲ್ಲದೇ ಮನೆಯಲ್ಲಿಯೇ ಇದ್ದು, ಕಂಪ್ಯೂಟರ್ ಮತ್ತು ಮೊಬೈಲ್‍ನಲ್ಲಿ ಹೆಚ್ಚಿನ ಸಮಯ ಕಳೆಯುತ್ತಿರುವುದರಿಂದ ಮಾನಸಿಕ ಖಿನ್ನತೆ, ಹಠಮಾರಿತನ ಹಾಗೂ ಇನ್ನಿತರೆ ಸಮಸ್ಯೆಗಳಿಗೆ ಒಳಗಾಗುವ ಸಾಧ್ಯತೆಯಿದ್ದು, ಇಂತಹ ಪರಿಸ್ಥಿತಿಯಲ್ಲಿ ಕೆಲವು ಪೋಷಕರು ಮಕ್ಕಳನ್ನು ನೋಡಿಕೊಳ್ಳುವುದರಲ್ಲೂ ಸವಾಲುಗಳನ್ನು ಎದುರಿಸುತ್ತಿರುವುದನ್ನು ಮನಗಂಡು ಇಲಾಖೆಯು ಈ ಆಪ್ತ ಸಮಾಲೋಚನೆಯನ್ನು ಆರಂಭಿಸುತ್ತಿದೆ. 

ಮಾನಸಿಕ ಖಿನ್ನತೆ ಹಾಗೂ ಮತ್ತಿತರ ಸಮಸ್ಯೆಗಳನ್ನು ಎದುರಿಸುತ್ತಿರುವ ಮಕ್ಕಳ ಪೋಷಕರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಜಿ.ಜಿ. ಸುರೇಶ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. 

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.