ಜಯನಗರ ರಿಟೈರ್ಡ್ ಪಿಎಸ್ಐ ಬಸವರಾಜ್ ಫೇಸ್ ಬುಕ್ ಹ್ಯಾಕ್ ,10 ಸಾವಿರ ಹಣ ಕೊಡಲು ಮನವಿ
ಏನಿದು ಪ್ರಕರಣ; ರಿಟೈರ್ಡ್ ಪಿಎಸ್ಐ ಬಸವರಾಜ್ ರವರ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ಸೃಷ್ಟಿ ಮಾಡಿ ಅವರ ಎಲ್ಲಾ ಫೋಟೋಗಳನ್ನು ಅಪ್ ಲೋಡ್ ಮಾಡಿಕೊಂಡು ನನಗೆ ಅರ್ಜೆಂಟ್ ಹಣ ಬೇಕಾಗಿದೆ. ಅಕೌಂಟ್ ಗೆ 10 ಸಾವಿರ ಹಣ ಕಳುಹಿಸಿ ಎಂದು ಸಂಭಂದಿಕರಿಗೆ ಪೇಸ್ ಬುಕ್ ಹ್ಯಾಕರ್ಗಳು ಮನವಿ ಮಾಡಿದ ಪ್ರಕರಣ ವರದಿಯಾಗಿದೆ..
ಇದನ್ನು ನೋಡಿ ಅವರ ಸಂಭಂದಿಕರುಗಳು ಮತ್ತು ಪ್ತೆಂಡ್ಸ್ ರಿಟೈರ್ಡ್ ಪಿಎಸ್ಐ ಬಸವರಾಜ್ ರವರಿಗೆ ಪೋನ್ ಮೂಲಕ ಸಂಪರ್ಕ ಮಾಡಿದಾಗ ಫೇಸ್ ಬುಕ್ ಹ್ಯಾಕ್ ಆಗಿರುವ ವಿಷಯ ಬೆಳಕಿಗೆ ಬಂದಿದೆ.
ಇದೀಗ ಇವರು ನನಗೆ ಹಣದ ಅವಶ್ಯಕತೆ ಇಲ್ಲ. ಹ್ಯಾಕರ್ಸ್ ಗಳು ಈ ರೀತಿ ಮನವಿ ಮಾಡಿದ್ದಾರೆ ಯಾರಿಗೂ ಹಣ ಸಂದಾಯ ಮಾಡಬೇಡಿ ಎಂದು ತಮ್ಮ ಫೇಸ್ ಬುಕ್ ನಲ್ಲಿ ಮನವಿ ಮಾಡಿದ್ದಾರೆ.
ಮಹಿಳಾ ಠಾಣೆಯ ಇನ್ಸ್ಪೆಕ್ಟರ್ ಅಭಯಪ್ರಕಾಶ್ ಪ್ರಕಾಶ್ ಸೋಮನಾಳ್ ರವರ ಫೇಸ್ ಬುಕ್ ಖಾತೆ ಸಹ ಹ್ಯಾಕ್ ಆಗಿದ್ದ ಇದೀಗ ಮತ್ತೊಂದು ಪ್ರಕರಣ ವರದಿಯಾಗಿದೆ.
Leave a Comment