ಶಿವಮೊಗ್ಗ ತಾಲ್ಲೂಕು ಕೊರಾನ updates ನೋಡಿ.. ಮತ್ತೆ ಮಲ್ಬಾರ್ ಗೋಲ್ಡ್ ಶೋರೂಂ ನಲ್ಲಿ 4 ಜನರಿಗೆ ಕೊರಾನ, ಗುಡ್ಡದ ಹರಕೆರೆ ಪೊಲೀಸ್ ಲೇಔಟ್ ನಲ್ಲಿ 6 ಜನರಿಗೆ ಕೊರಾನ, ಚೆನ್ನಪ್ಪ ಲೇಔಟ್ ನಲ್ಲಿ 4 ಜನರಿಗೆ ಕೊರಾನ ಸೋಂಕು..

ಶಿವಮೊಗ್ಗ ತಾಲ್ಲೂಕಿನಲ್ಲಿ ಕೊರಾನ ದಿನೇ ದಿನೇ ಹೆಚ್ಚಾಗುತ್ತಿದೆ. ಕಡಿಮೆ ಯಾಗುವ ಸೂಚನೆಗಳು ಕಂಡುಬರುತ್ತಿಲ್ಲ. ಕೊರಾನ ಜೊತೆಯಲ್ಲಿ ನಾವೆಲ್ಲರೂ ಬದುಕುವುದನ್ನು ಕಲಿಯಬೇಕು. ಕೊರಾನ ಬಗ್ಗೆ ಜಾಗ್ರತೆ, ಎಚ್ಚರಿಕೆ ಇರಲಿ,ಭಯ ಆತಂಕ ಬೇಡ. ಏನು ಆಗಲ್ಲ. ಕೊರಾನ ಸೋಂಕಿತರು ಗಳ ಬಗ್ಗೆ ಮಾಹಿತಿ ತಿಳಿದುಕೊಂಡು ಜಾಗ್ರತೆಯಿಂದ ಇರಲು ಪ್ರಯತ್ನಿಸಿ ಎಂಬುದು ನಮ್ಮ ಹಲೋ ಶಿವಮೊಗ್ಗ ದಿನ ಪತ್ರಿಕೆಯ. ವಿನಂತಿ

ಶಿವಮೊಗ್ಗ ಹೊರವಲಯದ ಗುಡ್ಡದಹರಕೆರೆ ಪೆಸಿಟ್ ಕಾಲೇಜ್ ಎದುರುಗಡೆ ಇರುವ ಪೋಲಿಸ್ ಲೇಔಟ್ ನಲ್ಲಿರುವ. 65 ವರ್ಷದ ಪುರುಷ,30 ವರ್ಷದ ಮಹಿಳೆ,42 ವರ್ಷದ ಪುರುಷ,33 ವರ್ಷದ ಮಹಿಳೆ,30 ವರ್ಷದ ಪುರುಷ,11 ವರ್ಷದ ಹುಡುಗ  ಒಟ್ಟು 6 ವ್ಯಕ್ತಿ ಗಳಿಗೆ ಕೊರಾನ ಸೋಂಕು ತಗುಲಿದೆ ಎನ್ನಲಾಗಿದೆ.

 ಶಿವಮೊಗ್ಗದಲ್ಲಿ ಚೆನ್ನಪ ಲೇಔಟ್ ನಲ್ಲಿ 47 ವರ್ಷದ ಪುರುಷ,11 ವರ್ಷದ ಹುಡುಗ,65 ವರ್ಷದ ಮಹಿಳೆ,72 ವರ್ಷದ ಪುರುಷ ವ್ಯಕ್ತಿ ಗಳಿಗೆ  4 ಜನರಿಗೆ ಕೊರಾನ ಸೋಂಕು ತಗುಲಿದೆ.

ಮತ್ತೆ ಮಲ್ ಬಾರ್ ಗೋಲ್ಡ್ ಮತ್ತು ಡೈಮಂಡ್ ಶೋರೂಂ ನಲ್ಲಿ ಕೆಲಸ ಮಾಡುವ 32 ವರ್ಷದ ಪುರುಷ,27 ವರ್ಷದ ಪುರುಷ,36 ವರ್ಷದ ಪುರುಷ,29 ವರ್ಷದ ಪುರುಷ ವ್ಯಕ್ತಿ ಗಳಿಗೆ ಒಟ್ಟು 4 ಜನರಿಗೆ ಕೊರಾನ ಸೋಂಕು ತಗುಲಿದೆ.

ಶರಾವತಿನಗರ ದ ಪೋಸ್ಟಲ್ ಕ್ವಾಟ್ರಸ್ ನಲ್ಲಿ 3 ಜನರಿಗೆ,ಅಶೋಕನಗರ ಪೊಲಿಸ್ ಕ್ವಾಟ್ರಸ್, ಕೆ.ಎಸ್.ಆರ್.ಪಿ. ಪೊಲೀಸ್ ಕ್ವಾಟ್ರಸ್, ಸಿಮ್ಸ್ ಕ್ವಾಟ್ರಸ್ ಗೆ ಕೊರಾನ ಹೆಜ್ಜೆ ಇಟ್ಟಿದೆ.ಕೆಲವು ವ್ಯಕ್ತಿ ಗಳಿಗೆ ಕೊರಾನ ಸೋಂಕು ವ್ಯಕ್ತವಾಗಿದೆ.

ಆದರ್ಶಕಾಲೋನಿ ಬೊಮ್ಮನಕಟ್ಟೆ, ಮೆಗ್ಗಾನ್ ಕಾಂಪೌಂಡ್, ಮಲವಗೊಪ್ಪ,ಗಾಡಿಕೊಪ್ಪ, ಕಡೇಕಲ್,ಸಿಗೇಹಟ್ಟಿ, ಅಶೋಕರಸ್ತೆ, ವಿವೇಕಾನಂದ ಬಡಾವಣೆ, ಗಾಂಧೀಬಜಾರ್, ಗೋಪಿಶೆಟ್ಟಿಕೊಪ್ಪ,ಕುಂಬಾರಬೀದಿ,ವೆಂಕಟೇಶ ನಗರ,ಕಾಶೀಪುರ, ಬುದ್ದನಗರ,ಹಕ್ಕಿಪಿಕ್ಕಿ ಕ್ಯಾಂಪ್,ವಿದ್ಯಾನಗರ,ಬುದ್ದನಗರ,ಹೊಳೆಹನಸವಾಡಿ,
ಗೋಪಾಳ ಗೌಡ ಬಡಾವಣೆ,ಕ್ಯಾತಿನಕೊಪ್ಪ ಮುಂತಾದ ಕಡೆಗಳಲ್ಲಿ ಕೊರಾನ ಹೆಜ್ಜೆಗಳನ್ನು ಇಟ್ಟಿದೆ. ಸದರಿ ಏರಿಯಾ ದಲ್ಲಿನ ಕೆಲವು ವ್ಯಕ್ತಿ ಗಳಿಗೆ ಕೊರಾನ ಸೋಂಕು ತಗುಲಿದೆ ಎನ್ನಲಾಗಿದೆ.
ಮೇಲ್ಕಂಡ ಸೋಂಕಿತರು ವಾಸವಿರುವ ಮನೆಯನ್ನು ಮತ್ತು ಅಂಗಡಿಗಳ ನ್ನು ಸೀಲ್ ಮಾಡುವ ಸಾದ್ಯತೆ ಇದೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.