ಶಿವಮೊಗ್ಗ ತಾಲ್ಲೂಕು ಕೊರಾನ updates,ವೆಂಕಟೇಶ ನಗರದಲ್ಲಿ 13 ಜನರಿಗೆ,ಸೋಗಾನೆ ಗ್ರಾಮದಲ್ಲಿ 8 ಜನರಿಗೆ,ಮತ್ತೆ ಮಲ್ ಬಾರ್ ಗೋಲ್ಡ್ ಶೋರೂಂನ 6 ಜನರಿಗೆ Covid-19 ಸೋಂಕು ಕ್ಲಿಕ್ ಮಾಡಿ ನೋಡಿ

ಶಿವಮೊಗ್ಗ ಜಿಲ್ಲೆಯಲ್ಲಿ ಕೊರಾನ ಅಟ್ಟಹಾಸ ಮೆರೆದಿದೆ, ನಿನ್ನೆ ಒಂದೇ ದಿವಸ ಜಿಲ್ಲೆಯಲ್ಲಿ 430 ಜನರಿಗೆ ಕೊರಾನ ಸೋಂಕು ತಗುಲಿದೆ. ಶಿವಮೊಗ್ಗ ನಗರದಲ್ಲಿ 176 ಜನರಿಗೆ ಕೊರಾನ ಸೋಂಕು ತಗುಲಿದೆ ಇದು ಜಿಲ್ಲಾಡಳಿತ ದ ಅಧಿಕೃತ ಬುಲೆಟಿನ್ ನಲ್ಲಿ ಪ್ರಕಟವಾಗಿದೆ. ಕೊರಾನ ಬಗ್ಗೆ ಭಯ ಆತಂಕ ಬೇಡ ಆದರೆ ಜಾಗ್ರತೆ, ಎಚ್ಚರಿಕೆ ಇರಲಿ..

ಶಿವಮೊಗ್ಗ ನಗರದ ವೆಂಕಟೇಶ ನಗರದಲ್ಲಿ  2 ನೇಕ್ರಾಸ್, ಮತ್ತು 3 ನೇಕ್ರಾಸ್ ನಲ್ಲಿ ಸುಮಾರು 13 ಜನರಿಗೆ ಕೊರಾನ ಸೋಂಕು ತಗುಲಿದೆ  ಎನ್ನಲಾಗಿದೆ. ಸೋಂಕಿತರು ವಾಸವಿರುವ ಮನೆಯನ್ನು ಸೀಲ್ ಡೌನ್ ಮಾಡುವ ಸಾದ್ಯತೆ ಇದೆ.

ಮತ್ತೆ ಮಲ್ ಬಾರ್ ಗೋಲ್ಡ್ ಶೋರೂಂ ನ 6 ಜನರಿಗೆ ಕೋರಾನ ಸೋಂಕು ತಗುಲಿದೆ. ಮಲ್ ಬಾರ್ ಗೋಲ್ಡ್ ಗೆ ಕಳೆದ ಮೂರುದಿವಸದಿಂದ ಪ್ರತಿದಿನ 5-6 ಜನರು ಕೊರಾನ ಸೋಂಕಿಗೆ ಒಳಗಾಗುತ್ತಿದ್ದಾರೆ.ಗೋಲ್ಡ್ ಖರೀದಿ ಮಾಡಿ ಮೈಮೇಲೆ ಧರಿಸಿದ ಮಹಿಳೆಯರಲ್ಲಿ  ಭಯ ಆತಂಕ ಶುರುವಾಗಿದೆ. ನಮಗೆಲ್ಲಿ ಕೊರಾನ ಸೋಂಕು ಬಂದು ಬಿಡುತ್ತಾ, ನಮ್ಮ ಬಂಗಾರವನ್ನೆಲ್ಲ ಸ್ವಚ್ಚಗೋಳಿಸಬೇಕಾ? ಅಂತಾ ಕೊರಗು ಶುರುವಾಗಿದೆ.

ಸೊಗಾನೆ ಗ್ರಾಮದಲ್ಲಿ 8 ಜನರಿಗೆ ಕೊರಾನ ಸೋಂಕು ತಗುಲಿದೆ ಎನ್ನಲಾಗಿದೆ. ಸದರಿ ಸೋಂಕಿತ ರ ಮನೆಯನ್ನು ಸೀಲ್ ಡೌನ್ ಮಾಡುವ ಸಾದ್ಯತೆ ಇದೆ.

ಸಾಗರ ರೋಡ್  ಗುಡ್ಡದಹರಕೆರೆ ಹತ್ತಿರ ಪೆಸಿಟ್ ಕಾಲೇಜ್ ಕ್ವಾಟ್ರಸ್ ನಲ್ಲಿನ ‌38 ವರ್ಷದ ಮಹಿಳೆ,43 ವರ್ಷದ ವ್ಯಕ್ತಿ ಗೆ  ಇಬ್ಬರಿಗೆ  ಕೊರಾನ ಸೋಂಕು ತಗುಲಿದೆ ಎನ್ನಲಾಗಿದೆ.

ಸುಬ್ಬಯ್ಯ ಮೆಡಿಕಲ್ ಕಾಲೇಜ್ ಕ್ವಾಟ್ರಸ್ ನಲ್ಲಿರುವ 71 ವರ್ಷದ ವೈದ್ಯ ರಿಗೆ ಕೊರಾನ ಸೋಂಕು ತಗುಲಿದೆ ಎನ್ನಲಾಗಿದೆ.

ಕೃಷಿ ನಗರ, ಮಲವಗೊಪ್ಪ, ಹೊಸಮನೆ, ಮೇಲಿನ ತುಂಗಾನಗರ, ಹರಮಗಟ್ಟ, ಮಾವಿನ ಕೊಪ್ಪಲು ಆಯನೂರು, ಮಂಜುನಾಥ ಬಡಾವಣೆಯಲ್ಲಿ Ksrtc ಉದ್ಯೋಗಿಗೆ ,ಬೀರನಕೆರೆ,ಕೊರಲಹಳ್ಳಿ,ಬಸವನಗುಡಿ, ವಿನೊಬನಗರ, ಹೊಸಕೊಪ್ಪ,ತಿಮ್ಮಪ್ಪನ ಕೊಪ್ಪಲು,ಅಶ್ವತ್ ನಗರ,ಚಾಣುಕ್ಯನಗರ,ಗೋಪಾಳ,ಸಿದ್ದೇಶ್ವರ ನಗರ,ಮಲ್ಲಿಗೆನಹಳ್ಳಿ, ವಿದ್ಯಾನಗರ,ಗುತ್ಯಪ್ಪಕಾಲೋನಿ,ಬಾಪೂಜಿನಗರ, ಹರಿಗೆ,ಗಾಡಿಕೊಪ್ಪ, ಆಲ್ಕೋಳ ನಂದಿನಿ ಲೇಔಟ್, ಮಿಳ್ಳಗಟ್ಟ, ಬಿ.ಬಿ.ರಸ್ತೆ, ಗಾಂಧಿನಗರ, ಗೋಪಾಳ ಗಡ
 ಬಡಾವಣೆ d block,ರೈಲ್ವೆ ಕ್ವಾಟ್ರಸ್, ಸೂಗುರು, ಬುಳ್ಳಾಪುರ,ಡಾಲರ್ಸ್ ಕಾಲೋನಿ,ಅಶೋಕನಗರ, ಗೋಪಿಶೆಟ್ಟಿಕೊಪ್ಪ, ಕಾಮಾಕ್ಷಿ ಬೀದಿ, ಸಂತೆಕಡೂರು, ಉಪ್ಪಾರಕೇರಿ, ಯಲವಟ್ಟಿ, ಹಾರೋಬೆನವಳ್ಳಿ,ಜೆ.ಹೆಚ್ ಪಟೇಲ್ ಬಡಾವಣೆ ಯಲ್ಲಿನ ಕೆಲವು ವ್ಯಕ್ತಿ ಗಳಿಗೆ ಕೊರಾನ ಸೋಂಕು  ತಗುಲಿದೆ ಎನ್ನಲಾಗಿದೆ.

Covid-19 ಅಷ್ಟು ಸುಲಭವಾಗಿ ತೊಲಗುವುದಿಲ್ಲ ಅನಿಸುತ್ತದೆ. ಹಲವಾರು ಜನರು ಸೊಂಕಿಗೆ ಒಳಗಾಗಿ ತೋಂದರೆ ಕಷ್ಟ ನಷ್ಟಗಳನ್ನು ಅನುಭವಿಸಿದ್ದಾರೆ.ದಿನೇ ದಿನೇ ಕೊರಾನ ಅರ್ಭಟ ಮುಂದುವರಿದಿದೆ. ಇದರ ಜೊತೆಯಲ್ಲಿ ನಾವೆಲ್ಲರೂ ಬದುಕುವುದನ್ನು ಕಲಿಯಬೇಕು ಅಷ್ಟೇ..

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.