ಶಿವಮೊಗ್ಗ ತಾಲ್ಲೂಕು Covid-19 updates. ನೋಡಿ.. ಮಲ್ ಬಾರ್ ಗೋಲ್ಡ್ ಮತ್ತು ಡೈಮಂಡ್ ಶೋರೂಂನಲ್ಲಿ 7 ಜನರಿಗೆ ಕೊರಾನ ಸೋಂಕು!!

ಶಿವಮೊಗ್ಗ ನಗರದಲ್ಲಿ ಕೊರಾನ ಸೋಂಕಿತರು ದಿನೇ ದಿನೇ ಸೋಂಕಿತರು ಹೆಚ್ಚಾಗುತ್ತಿದ್ದಾರೆ. ಸಾವುಗಳು ಕೂಡ ಅದೇರೀತಿ ಹೆಚ್ಚಾಗುತ್ತಿದೆ. ಇತ್ತೀಚೆಗೆ ಕೊರಾನ ಶಿವಮೊಗ್ಗ ನಗರದ ಎಲ್ಲಾ ಏರಿಯಾಗಳಿಗೂ ಹೆಜ್ಜೆಗಳನ್ನು ಇಟ್ಟಿದೆ. 

ಇದೀಗ ಶಿವಮೊಗ್ಗ ನಗರದ ಬಿ.ಹೆಚ್.ರಸ್ತೆಯಲ್ಲಿ ಇರುವ ಮಲ್ ಬಾರ್ ಗೋಲ್ಡ್ ಶೋರೂಂ ಗೆ ಮೆತ್ತಗೆ ಹೆಜ್ಜೆಗಳನ್ನು ಇಟ್ಟಿದೆ. ಶೋರೂಂ ನಲ್ಲಿ ಕೆಲಸ ಮಾಡುವ 7 ಜನರಿಗೆ ಕೊರಾನ ಪಾಸಿಟಿವ್ ಬಂದಿದೆ ಎನ್ನಲಾಗಿದೆ.28 ವರ್ಷದ ವ್ಯಕ್ತಿ, 20 ವರ್ಷದ ವ್ಯಕ್ತಿ, 38 ವರ್ಷದ ವ್ಯಕ್ತಿ, 21 ವರ್ಷದ ವ್ಯಕ್ತಿ, 24 ವರ್ಷದ ವ್ಯಕ್ತಿ, 32 ವರ್ಷದ ವ್ಯಕ್ತಿ, 34 ವರ್ಷದ ವ್ಯಕ್ತಿ ಗಳಿಗೆ ಕೊರಾನ ಸೋಂಕು ತಗುಲಿದೆ ಎನ್ನಲಾಗಿದೆ.

ಸದರಿ ಬಂಗಾರದ ಶೋರೂಂ ಗೆ ಹೋಗಿ ಬಂಗಾರವನ್ನು ಖರೀದಿ ಮಾಡಿಕೊಂಡು ಬಂದ ಮಹಿಳೆಯರಲ್ಲಿ ಆತಂಕ ಭಯ ಶುರುವಾಗಿದೆ. ನಮಗೆ ಎಲ್ಲಿ ಕೊರಾನ ಸೋಂಕು ತಗುಲಿದೆಯೋ ಎನ್ನುವ ಪರಿಸ್ಥಿತಿ ಬಂದಿದೆ. ಆಗಂತ ಬಂಗಾರವನ್ನು ಎಸೆಯುವ ಆಗಿಲ್ಲ. ಶುದ್ದ ಮಾಡಿ ಇಟ್ಟುಕೊಳ್ಳಬೇಕು ಅಷ್ಟೇ. 
ಸದರಿ  ಬಿ.ಹೆಚ್.ರೋಡ್ನಲ್ಲಿರುವ   ಮಲ್ ಬಾರ್ ಗೋಲ್ಡ್ ಮತ್ತು ಡೈಮಂಡ್ ಶೋರೂಂನ್ನು ಸೀಲ್ ಡೌನ್ ಮಾಡುವ ಸಾದ್ಯತೆ ಇದೆ.

ಶಿವಮೊಗ್ಗ ತಾಲ್ಲೂಕಿನಲ್ಲಿ ಹಲವು ಏರಿಯಾಗಳಲ್ಲಿ ಕೊರಾನ ಹೆಜ್ಜೆಗಳನ್ನು ಇಟ್ಟಿದೆ. ಬೊಮ್ಮನಕಟ್ಟೆ, ವಿನೊಬನಗರ ಹಲವು ಕಡೆ,ಟಿಪ್ಪುನಗರ, ಟ್ಯಾಂಕ್ ಮೊಹಲ್ಲ, ಅಶೋಕನಗರ, ವಿದ್ಯಾನಗರ,ಅಶೋಕನಗರ ಪೋಲಿಸ್ ಕ್ವಾಟ್ರಸ್, ಆದರ್ಶ ಕಾಲೋನಿ, ತಿಲಕನಗರ,ಗಾಡಿಕೊಪ್ಪ, ಹೊಸಮನೆ,ಶರಾವತಿನಗರ, ಬಾಪೂಜಿನಗರ, ಅಶೋಕರಸ್ತೆ,ನಂಜಪ್ಪ ಲೇಔಟ್, ವಾಜಪೇಯಿ ಬಡಾವಣೆ,ಗೋಪಾಳ, ದಾಮೋದರ ಕಾಲೋನಿ, ಗಾಂಧೀಬಜಾರ್, ಬಸವೇಶ್ವರ ನಗರ,lbs ನಗರ,ಶರಾವತಿನಗರ ಪೋಸ್ಟಲ್ ಕ್ವಾಟ್ರಸ್, ಕೆ.ಆರ್.ಪುರಂ ರೋಡ್, ಬ್ಯಾಡರಕೇರಿ,ಸ್ವಾಮಿವಿವೇಕಾನಂದ ಬಡಾವಣೆ,ಸಂತೆಕಡೂರು,ಹಾಡೋನಹಳ್ಳಿ, ದೇವರಾಜ್ ಅರಸ್ ನಗರ,ವಡ್ಡಿನಕೊಪ್ಪ,ಸೋಮಿನಕೊಪ್ಪ,ನಿದಿಗೆ,ವಾದಿಹುದಾ ಮುಂತಾದ ಕಡೆಗಳಲ್ಲಿ ಕೆಲವು ವ್ಯಕ್ತಿ ಗಳಿಗೆ ಕೊರಾನ ಸೋಂಕು ತಗುಲಿದೆ. ಸದರಿ ಮನೆಯನ್ನು ಸೀಲ್ ಮಾಡುವ ಸಾದ್ಯತೆ ಇದೆ.
ಕೊರಾನ ಬಗ್ಗೆ ಭಯ ಬೇಡ ಎಚ್ಚರಿಕೆ ಜಾಗ್ರತೆ ಇರಲಿ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.