ಶಿವಮೊಗ್ಗ ತಾಲ್ಲೂಕಿನಲ್ಲಿ covid-19 updates ನೋಡಿ.. ಸಹ್ಯಾದ್ರಿ ನಗರದಲ್ಲಿ 20 ಜನರಿಗೆ ಕೊರಾನ ಸೋಂಕು. ಹಾಲ್ ಶೆಟ್ಟಿ ಹಳ್ಳಿಯಲ್ಲಿ 6 ಜನರಿಗೆ,ಬೊಮ್ಮನಕಟ್ಟೆ ಯಲ್ಲಿ -6 ಜನರಿಗೆ,ಡಾಲರ್ಸ್ ಕಾಲೋನಿ ಯಲ್ಲಿ -4 ಜನರಿಗೆ ಕೊರಾನ ಸೋಂಕು...

ಶಿವಮೊಗ್ಗದಲ್ಲಿ Covid-19 ಅರ್ಭಟ ಮುಂದುವರಿದಿದೆ. ಶಿವಮೊಗ್ಗ ನಗರದ ಬಹುತೇಕ ಕಡೆ ಜನರು ಈಗ ಕೊರಾನ ಸೋಂಕಿಗೆ ಒಳಗಾಗಿದ್ದಾರೆ.ಸೋಂಕಿತರು ಬಹುತೇಕ ನೋವು, ಕಷ್ಟ ಮತ್ತು ನಷ್ಟ ಗಳನ್ನು ಅನುಭವಿಸುತ್ತಿದ್ದಾರೆ.ನನಗೆ ತಿಳಿದ ಮಟ್ಟಿಗೆ ಸೋಂಕಿತ ವ್ಯಕ್ತಿ ಗಳು ಕೊರಾನಗೆ ಹೆದರುತ್ತಿಲ್ಲ. ಕೊರಾನ ಆಸ್ಪತ್ರೆಯಲ್ಲಿ ನ ಅವ್ಯವಸ್ಥೆ ಬಗ್ಗೆ ಬೇಸರ,ಭಯ ವ್ಯಕ್ತಪಡಿಸುತ್ತಾರೆ. ಸೋಂಕಿತ ಹಲವಾರು ವ್ಯಕ್ತಿ ಗಳನ್ನು  ಆಸ್ಪತ್ರೆಯಲ್ಲಿ ನೀಡುತ್ತಿರುವ ಚಿಕಿತ್ಸೆ ಬಗ್ಗೆ ವಿಚಾರಿಸಿದ್ದೆನೆ.ಸರ್ ಅಲ್ಲಿ ಹೋದ ತಕ್ಷಣ 3 ದಿನದ ಮಾತ್ರೆ ಕೊಡುತ್ತಾರೆ. ನಮ್ಮ ಕಡೆ ಯಾರು ತಿರುಗಿ ನೋಡುವುದಿಲ್ಲ.ಯಾವ ಡಾಕ್ಟರ್ ಬಂದು ನಮಗೆ ಮಾತನಾಡಿಸುವುದಿಲ್ಲ.ಒಂದೇ ಕಡೆ 35 ರಿಂದ 50 ಜನ ಸೋಂಕಿತರು ಇರುತ್ತಾರೆ. ಅವರ ಯಾತನೆ ನೋಡಿದರೆ ನಮಗೆ ಭಯ ಆಗಿ ನಾವೆಲ್ಲಿ ಸತ್ತು ಹೋಗುತ್ತೆವೆ ಎಂದು ಆತಂಕ ಶುರು ಆಗುತ್ತದೆ. ನಮ್ಮ ಮನೆಯಲ್ಲಿಯೇ ನಾವು ಬಿಸಿನೀರು ಮತ್ತು ಮಾತ್ರೆ ನುಂಗಿಕೊಂಡು ಚೆನ್ನಾಗಿಯೇ ಇರುತ್ತೆವೆ.ಯಾವುದೇ ಕಾರಣದಿಂದ ಕೊರಾನ  ಕೇರ್ ಸೆಂಟರ್ಸ್ ಗೆ  ಹೋಗಬಾರದು ಅಂತಾ ತಿಳಿಸುತ್ತಾರೆ. ಇನ್ನು ಪ್ರೈವೇಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯೊಣ ಅಂತಾ ಮುಂದಾದರೆ ಲಕ್ಷಗಟ್ಟಲೆ ಹಣ ಕಟ್ಟಬೇಕು ಇದು ಜನರಿಗೆ ನಿಜವಾದ ಭಯ ಕುಟುಂಬದ ವರು ಸಹ ಯಾರನ್ನು ಮಾತಾನಾಡಿಸಲು ಬಿಡಲ್ಲ. ಕೊರಾನಗೆ ಯಾರು ಹೆದರುವುದಿಲ್ಲ.. ಕೊರಾನ ಪಾ ಸಿಟಿವ್ ಬಂದ ತಕ್ಷಣ ವ್ಯಕ್ತಿ ಗಳನ್ನು ಅಪರಾಧಿಗಳ ತರ  ಕರೆದುಕೊಂಡು ಹೋಗುವುದನ್ನು ಬಿಡಬೇಕು. ಸೋಂಕಿತ ವ್ಯಕ್ತಿಗಳ ಮನೆಗೆ ಬಂದು ಆರೋಗ್ಯದ ಬಗ್ಗೆ ವಿಚಾರಿಸಬೇಕು ಎಂದು ಸೋಂಕಿತರು ಹೇಳುತ್ತಾರೆ. ಆದರೆ ಅಧಿಕಾರಿಗಳು ಚೈನ್ ಲಿಂಕ್ ಕಟ್ಟಮಾಡಬೇಕು ಇಲ್ಲದಿದ್ದರೆ ಸೋಂಕಿತರು  ಏರಿಯಾ ದಲ್ಲಿ ಓಡಾಡಿ ಎಲ್ಲರಿಗೂ ಕೊರಾನ ಸೋಂಕು ಬರುವ ಹಾಗೆ ಮಾಡುತ್ತಾರೆ. ಅದಕ್ಕೋಸ್ಕರ ನಾವು ಸೋಂಕಿತ ವ್ಯಕ್ತಿ ಗಳನ್ನು ಕರೆದು ಕೊಂಡು ಹೋಗುತ್ತೆವೆ ಅಂತಾ ಸ್ಪಷ್ಟನೆ ನೀಡುತ್ತಾರೆ. ಇದು ಒಂದು ರೀತಿ ಗೊಂದಲದ ಗೂಡಾಗಿದೆ.ಕೆಲವರು ಹೇಳುತ್ತಾರೆ ಸರ್ ನಮಗೆ ಸ್ವಲ್ಪ ಕೆಮ್ಮು ಸೀತ ಇತ್ತು ಟೆಸ್ಟ್ ಮಾಡಿಸೋಣ ಅಂತಾ ಹೋದರೆ ಮನೆ ಮಂದಿಗೆಲ್ಲ ಕೊರಾನಾ ಬಂದಿದೆ ಅಂತಾ ಕರೆದುಕೊಂಡು ಹೋಗಿದ್ದಾರೆ ಅಂತಾ ತಿಳಿಸುತ್ತಾರೆ.
ಒಟ್ಟಾರೆ ಇಷ್ಟೊಂದು ಸೋಂಕಿತರು ಪತ್ತೆಯಾಗುತ್ತಿರುವುದು ನಿಜಾನಾ? ಸುಳ್ಳಾ? ಎಂಬ ಪ್ರಶ್ನೆ ಕಾಡತೊಡಗಿದೆ.ಭಗವಂತನೇ ಬಲ್ಲ....
ಒಟ್ಟಿನಲ್ಲಿ Covid-19 ಬೇಗ ತೊಲಗಲಿ ಎಲ್ಲರೂ ಆರೋಗ್ಯಕರ ವಾಗಿರಲಿ ಎಂದು ಭಗವಂತನಲ್ಲಿ ನಾವೆಲ್ಲರೂ ಪ್ರಾರ್ಥಿಸುವ....

ಶಿವಮೊಗ್ಗ ಹೊರವಲಯದ ಸಹ್ಯಾದ್ರಿ ನಗರದಲ್ಲಿ 20 ಜನರಿಗೆ ಕೊರಾನ ಸೋಂಕು ತಗುಲಿದೆ.ಇಲ್ಲೆ ಒಂದು ವಾರ್ಡ್ ಆಸ್ಪತ್ರೆ ತೆರೆಯಬೇಕೆನಿಸುತ್ತೆ. 2 ವರ್ಷದ ಮಗು,7 ವರ್ಷದ ಹೆಣ್ಣುಮಗು,11 ವರ್ಷದ ಹುಡುಗಿ, 36 ವರ್ಷದ ಮಹಿಳೆ,15  ಮತ್ತು 16 ವರ್ಷದ ಹುಡುಗಿ, 12 ವರ್ಷದ ಹುಡುಗ,46,50,53,39,17,48 ವರ್ಷದ ವ್ಯಕ್ತಿ ಗಳಿಗೆ,20,70,53,32,42 ವರ್ಷದ ಮಹಿಳೆ ಗೆ ಕೊರಾನ. ಸೋಂಕು ತಗುಲಿದೆ ಎನ್ನಲಾಗಿದೆ. ಸದರಿ ವ್ಯಕ್ತಿ ಗಳ ಮನೆಯನ್ನು ಸೀಲ್ ಡೌನ್ ಮಾಡುವ ಸಾದ್ಯತೆ ಇದೆ.

ಹಾಲ್ ಶೆಟ್ಟಿಹಳ್ಳಿಯಲ್ಲಿ 6 ಜನರಿಗೆ ಕೊರಾನ ಸೋಂಕು ತಗುಲಿದೆ

ಡಾಲರ್ಸ್ ಕಾಲೋನಿಯಲ್ಲಿ 4 ಜನರಿಗೆ ಕೊರಾನ ಸೋಂಕು ತಗುಲಿದೆ.

ಬೊಮ್ಮನಕಟ್ಟೆಯಲ್ಲಿ 6 ಜನರಿಗೆ ಕೊರಾನ ಸೋಂಕು

ವಿದ್ಯಾನಗರದ 4 ನೇ ಕ್ರಾಸ್ ಮತ್ತು ಇತರೆ ಕಡೆ 6 ಜನರಿಗೆ ಕೊರಾನ ಸೋಂಕು

ಇನ್ನು ಸ್ವಲ್ಪ ದಿವಸ ಹೋದರೆ ಒಂದೊಂದು ಏರಿಯಾ ದಲ್ಲಿ ಒಂದೋಂದು Covid-19  ಆಸ್ಪತ್ರೆ ತೆರೆಯಬೇಕು ಅನಿಸುತ್ತದೆ.ಸಂಭಂದಿಸಿದ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಇಷ್ಟೋಂದು ಪ್ರಮಾಣದಲ್ಲಿ ಒಂದು ಏರಿಯಾ ದಲ್ಲಿ ಸೋಂಕಿತ ವ್ಯಕ್ತಿಗಳು ಕಂಡು  ಬಂದರೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಬೇಟಿ ನೀಡಿ ಸೋಂಕಿತರ ಕಷ್ಟಗಳನ್ನು ವಿಚಾರಿಸಬೇಕು.ಅವರಿಗೆ ಬೇಕಾದ ಚಿಕಿತ್ಸೆ ಯನ್ನು ಮನೆಬಾಗಿಲಿಗೆ ಅಥವಾ ಸಂಬಂದಿಸಿದ ವಾರ್ಡ್ನಲ್ಲಿ ಯೇ  ಸಿಗುವ ಹಾಗೆ ವ್ಯವಸ್ಥೆ ಮಾಡಬೇಕು.

ಶಿವಮೊಗ್ಗದಲ್ಲಿ ಸ್ವಾಮಿವಿವೇಕಾನಂದ ಬಡಾವಣೆ,ಶುಗರ್ ಪ್ಯಾಕ್ಟರಿ ಕ್ವಾಟ್ರಸ್, ವಿನೋಬನಗರ ದ ಹಲವು ಕಡೆ,ಪಂಚವಟಿಕಾಲೋನಿ,ಅಬ್ಬಲಗೆರೆ,ನವುಲೆ,ಅಶೋಕನಗರ, ಸೂಗುರು, ಅಶೋಕರಸ್ತೆ, ಕುವೆಂಪುನಗರ,ವೆಕಟೇಶ್ನಗರ,ನ್ಯೂ ಮಂಡ್ಲಿ, ದುರ್ಗಿಗುಡಿ, ಗೋಪಾಳಗೌಡ ಬಡಾವಣೆ 4 ನೇಕ್ರಾಸ್,ಗಾಂಧೀಬಜಾರ್, ಪುರಲೆ, ರವೀಂದ್ರನಗರ, ಹೊಸಮನೆ,ಹರಿಗೆ,ಬೇಡರಹೊಸಳ್ಳಿ,ಶಿವಪ್ಪನಾಯಕನ ಬಡಾವಣೆ, ಬಾಪೂಜಿನಗರ, ಮೇಲಿನತುಂಗಾನಗರ, ಉರೂಗಡೂರು,ಶೇಷಾದ್ರಿ ಪುರಂ,ಕೃಷಿಗರ,ಕೋಟೆ ಬೀಮೆಶ್ವರ ಟೆಂಪ್ ಲ್ ಕೊಟೆರಸ್ತೆ,ಕುಂಬಾರಗುಂಡಿ, ಮುಂತಾದ ಕಡೆಯಲ್ಲಿನ ವ್ಯಕ್ತಿ ಗಳಿಗೆ ಕೊರಾನ ಸೋಂಕು ತಗುಲಿದೆ. ಕೊರಾನ ಸೋಂಕಿತ ವ್ಯಕ್ತಿಗಳ ಮನೆಯನ್ನು ಸೀಲ್ ಡೌನ್ ಮಾಡುವ ಸಾದ್ಯತೆ ಇದೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.