ತಾಯಿ ಮತ್ತು ಮಗ ನಾಪತ್ತೆ
ಶಿವಮೊಗ್ಗ, ಆಗಸ್ಟ್ 28 : ಶಿವಮೊಗ್ಗ ಶಾಂತಿನಗರದ ವಾಸಿ ಪರಮೇಶ್ವರಪ್ಪ ಅವರ ಪತ್ನಿ ಶ್ರೀಮತಿ ಅರ್ಪಿತ ಬಿ.(26ವರ್ಷ) ಹಾಗೂ ಅವರ ಪುತ್ರ ಚಿ॥ ಇವರು ಆಗಸ್ಟ್ 17ರಂದು ಮಧ್ಯಾಹ್ನ ಸುಮಾರು 02ಗಂೆಗೆ ಹೊತ್ತಿಗೆ ತವರು ಮನೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಈವರೆಗೆ ತಮ್ಮ ಸ್ವಗೃಹಕ್ಕೆ ಹಿಂದಿರುಗಿರುವುದಿಲ್ಲ.
ಶ್ರೀಮತಿ ಅರ್ಪಿತ(26ವರ್ಷ) ಅವರು 5.2ಅಡಿ ಎತ್ತರ, ಬಿಳಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿರುವ ಇವರು ಕಾಣೆಯಾದ ದಿನದಂದು ನೀಲಿ ಚೂಡಿದಾರ್ ಧರಿಸಿದ್ದಾರೆ. ಕನ್ನಡ ಭಾಷೆ ಮಾತನಾಡಬಲ್ಲವರಾಗಿದ್ದಾರೆ. ಚಿ॥ ಕುಶಾಲ್(5ವರ್ಷ) 2ಅಡಿ ಎತ್ತರ, ಎಣ್ಣೆಕೆಂಪು ಮೈಬಣ್ಣ ದುಂಡು ಮುಖ ತೆಳುವಾದ ಮೈಕಟ್ಟು ಹೊಂದಿದ್ದಾರೆ. ಕಾಣೆಯಾದ ದಿನದಂದು ನೀಲಿ ಷರ್ಟ್ ಮತ್ತು ನೇವಿಬ್ಲೂ ನಿಕ್ಕರ್ ಧರಿಸಿದ್ದಾನೆ.
ಈ ಚಹರೆ ಹೊಂದಿರುವ ತಾಯಿ ಮತ್ತು ಮಗುವಿನ ಕುರಿತು ಮಾಹಿತಿ ಸಿಕ್ಕಲ್ಲಿ ಸಾರ್ವಜನಿಕರು ಸಿಪಿಐ ಗ್ರಾಮಾಂತರ ವೃತ್ತ, ಶಿವಮೊಗ್ಗ., ಅಥವಾ ಪಿಎಸ್‌ಐ ಗ್ರಾಮಾಂತರ ಠಾಣೆ ಅಥವಾ ಕಂ್ರೋಲ್ ರೂಂ ನಂ.100 ಅಥವಾ ದೂರವಾಣಿ ಸಂಖ್ಯೆ 08182-261418, 261410, 261422, ಮೊ.9480803350ಗೆ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದೆ.
Leave a Comment