ಜೋಗದ ಬಳಿ ಬೆಂಗಳೂರು ಯುವಕ ಆತ್ಮಹತ್ಯೆಗೆ ಯತ್ನ ; ಅಗ್ನಿಶಾಮಕದಳ ಮತ್ತು ಪೋಲಿಸರಿಂದ ರಕ್ಷಣೆ

ಶಿವಮೊಗ್ಗ;ಜೀವನದಲ್ಲಿ ಜಿಗುಪ್ಸೆಗೊಂಡ ಯುವಕ ಜೋಗದ ಬಳಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದು ಆತನನ್ನ ಅಗ್ನಿಶಾಮಕ ದಳ ಹಾಗೂ ಜೋಗ್ ಪೊಲೀಸರು ರಕ್ಷಿಸಿದ್ದಾರೆ.
ಜೋಗ್ ನ ಬ್ರಿಟೀಶ್ ಬಂಗ್ಲೋ ಬಳಿಯಿರುವ ಜಲಪಾತದಲ್ಲಿ ಧುಮಕಿ ಆತ್ಮಹತ್ಯೆಗೆ ಮುಂದಾಗಿದ್ದ ಯುವಕ ಚೇತನನನ್ನ ರಕ್ಷಿಸಲಾಗಿದೆ.
ಬೆಂಗಳೂರಿನಿಂದ ಬಂದಿದ್ದ ಯುವಕನಿಗೆ ಲಾಕ್ ಡೌನ್ ಸಂದರ್ಭದಲ್ಲಿ ಮನೆಯವರು ಯಾರೂ ಮಾತನಾಡಿಸುತ್ತಿರಲಿಲ್ಲವೆಂದು ಬೇಸರಗೊಂಡು ಆತ್ಮಹತ್ಯೆಗೆ ಮುಂದಾಗಿರುವುದಾಗಿ ಚೇತನ್ ತಿಳಿಸಿದ್ದಾನೆ. ಎಂಬಿಎ ಮುಗಿಸಿರುವ ಯುವಕ ಪಾರ್ಟ್ ಟೈಮ್ ಆಗಿ ಕೆಲಸ ಮಾಡುತ್ತಿರುವುದು ತಿಳಿದುಬಂದಿದೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.