ಶಿವಮೊಗ್ಗ: ಪ್ರೊ. ಬಿ. ಕೃಷ್ಣಪ್ಪ ದಲಿತ ಚಳವಳಿಯ ಸೂರ್ಯ ;ಪ್ರಾಧ್ಯಾಪಕ ಬಿ.ಎಲ್. ರಾಜು

ಶಿವಮೊಗ್ಗ: ಪ್ರೊ. ಬಿ. ಕೃಷ್ಣಪ್ಪ ದಲಿತ ಚಳವಳಿಯ ಸೂರ್ಯ ಎಂದು ಸಾಗರದ ಇಂದಿರಾಗಾಂಧಿ ಕಾಲೇಜಿನ ಪ್ರಾಧ್ಯಾಪಕ ಬಿ.ಎಲ್. ರಾಜು ಹೇಳಿದರು.
ಇಂದು ನಗರದ ಪ್ರೆಸ್ ಟ್ರಸ್ಟ್ ನಲ್ಲಿ ದಲಿತ ಸಂಘರ್ಷ ಸಮಿತಿ ಆಯೋಜಿಸಿದ್ದ ಪ್ರೊ.ಬಿ. ಕೃಷ್ಣಪ್ಪನವರ 82 ನೇ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಮಾತನಾಡಿದರು.
20 ನೇ ಶತಮಾನದ ಕೊನೆಯಲ್ಲಿ ಕರ್ನಾಟಕವನ್ನು ಎಚ್ಚರ ಸ್ಥಿತಿಯಲ್ಲಿಟ್ಟ . ಪಿಲಂಕೇಶ್, ಪ್ರೊ. ನಂಜುಂಡಸ್ವಾಮಿ ಮುಂತಾದವರ ಸಾಲಿನಲ್ಲಿ ಬಿ. ಕೃಷ್ಣಪ್ಪನವರೂ ಒಬ್ಬರು. ಶೋಷಿತರ ಧ್ವನಿಯಾಗಿ ಮನುಷ್ಯತ್ವದ ಹೋರಾಟಕ್ಕಾಗಿ ಅಂಬೇಡ್ಕರ್ ಚಳವಳಿಯನ್ನು ಅಹಿಂಸೆ ರೀತಿಯಲ್ಲಿ ಕರ್ನಾಟಕದ ಉದ್ದಗಲಕ್ಕೂ ತೆಗೆದುಕೊಂಡು ಹೋದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.
ರಾಜಕಾರಣ, ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗಾಗಿ ದಲಿತರ ಬದುಕಲ್ಲಿ ಬೆಳಕಾಗಿ ಬಂದವರು ಅವರು. ಇಂದು ಚಳವಳಿಗಳು ದಿಕ್ಕು ತಪ್ಪುತ್ತಿರುವ ಹೊತ್ತಿನಲ್ಲಿ ದಲಿತರ ಮುಂದೆ ಅನೇಕ ಸವಾಲುಗಳಿವೆ. ಪ್ರೊ.ಬಿ. ಕೃಷ್ಣಪ್ಪನಂತಹವರು ಮತ್ತೆ ಈ ನಾಡಿಗೆ ತುರ್ತಾಗಿ ಬೇಕಾದ ಅವಶ್ಯಕತೆ ಇದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಿವೃತ್ತ ಪ್ರಾಧ್ಯಾಪಕ ಮತ್ತು ಚಿಂತಕ ಎಂ.ಬಿ. ನಟರಾಜ್, ನೋವು, ಸಂಕಟ, ಅವಮಾನಗಳನ್ನು ಎದುರಿಸಿದ ಧೀರ ಹೋರಾಟಗಾರ ಬಿ. ಕೃಷ್ಣಪ್ಪನವರು. ಕರ್ನಾಟಕದ ದಲಿತ ಚಳವಳಿಯನ್ನು ಸಾಹಿತ್ಯದ ಮೂಲಕ(ದಲೇಖ) ದಲಿತ ಚಳವಳಿಯ ಮೂಲಕ ನಾಡಿನಾದ್ಯಾಂತ ದಲಿತ ಪ್ರಜ್ಞೆಯನ್ನು ವಿಸ್ತರಿಸಿದವರು. ಜೆಪಿ ಮತ್ತು ಅಂಬೇಡ್ಕರರ ವಿಚಾರಧಾರೆಗಳನ್ನು ತಮ್ಮದೇ ದಾಟಿಯಲ್ಲಿ ವಿಸ್ತರಿಸಿದ ಒಂದು ಅದ್ಭುತ ಶಕ್ತಿ ಬಿ. ಕೃಷ್ಣಪ್ಪ ಎಂದರು.
ಕಾರ್ಯಕ್ರಮದಲ್ಲಿ ಡಿಎಸ್ಎಸ್ ಮುಖಂಡ ಎಂ. ಗುರುಮೂರ್ತಿ, ಪ್ರಾಧ್ಯಾಪಕ ಎನ್.ಆರ್. ಶಿವರಾಮ್, ನಿವೃತ್ತ ಪ್ರಾಂಶುಪಾಲ ಶಿವಬಸಪ್ಪ, ಮಂಜುನಾಥ್ ಮತ್ತಿತರರು ಇದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.