ಆರಾಧನಾ ಸಮಿತಿ ಅಧ್ಯಕ್ಷ ರಾಗಿ ಬಿ.ಆರ್.ಮಧುಸೂದನ್ ನೇಮಕ

ಶಿವಮೊಗ್ಗ; ಶಿವಮೊಗ್ಗ ವಿಧಾನ ಸಭಾ ಕ್ಷೇತ್ರಕ್ಕೆ ಆರಾಧನಾ ಸಮಿತಿ ರಚನೆಯಾಗಿದ್ದು,ಆರಾಧನಾ ಸಮಿತಿಯ ಅಧ್ಯಕ್ಷರಾಗಿ ಮಧುಸೂದನ್ ಬಿ.ಆರ್ ರವರು ಆಯ್ಕೆ ಯಾಗಿರುತ್ತಾರೆಂದು ಮತ್ತು ಆರಾಧನಾ ಸಮಿತಿಯ ಸಭೆ ಆಗಸ್ಟ್‌ 31 ರಂದು ಬೆಳಿಗ್ಗೆ 11-30 ಗಂಟೆಗೆ ತಹಶಿಲ್ದಾರರ ಕಚೇರಿಯಲ್ಲಿ ನಡೆಯಲಿದೆ ಎಂದು ತಹಶೀಲ್ದಾರ್ ಶಿವಮೊಗ್ಗ ರವರು  ಮಧುಸೂದನ್ ರವರಿಗೆ ಪತ್ರ ರವಾನಿಸಿರುತ್ತಾರೆ.
ಮಧುಸೂದನ್ ರವರು ಬಿ.ಜೆ.ಪಿ ಪಕ್ಷದ ಮುಖಂಡರು ಆಗಿರುತ್ತಾರೆ. ಇವರು ಆರಾಧನಾ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ಬಿಜೆಪಿಯ ಹಲವಾರು ಮುಖಂಡರು ಮತ್ತು ಮಧುಸೂದನ್ ಸ್ನೇಹಿತರು ಅಭಿನಂದನೆ ಗಳನ್ನು ಸಲ್ಲಿಸಿದ್ದಾರೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.