ಮೆಸ್ಕಾಂ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿ) ಮಂಜುನಾಯ್ಕ ಅವರನ್ನು ಅಮಾನತು ಗೊಳಿಸಬೇಕೆಂದು ಆಗ್ರಹಿಸಿ ಮುಖ್ಯ ಇಂಜಿನಿಯರ್ ಗೆ ಮನವಿ

 ಶಿವಮೊಗ್ಗ,ಆ.25:  ಮೆಸ್ಕಾಂ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿ ಯರ್ (ವಿ) ಮಂಜುನಾಯ್ಕ ಅವರನ್ನು ಅಮಾನತು ಗೊಳಿಸ ಬೇಕು ಎಂದು ಆಗ್ರಹಿಸಿ ಅಖಿಲ ಭಾರತ ಕರುನಾಡ ಯುವಶಕ್ತಿ ಸಂಘಟನೆ (ಕೆವೈಎಸ್) ಇಂದು ಮೆಸ್ಕಾಂನ ವ್ಯವಸ್ಥಾಪಕ ನಿರ್ದೆ ಶಕರಿಗೆ ಮುಖ್ಯ ಇಂಜಿನಿಯರ್ ಮೂಲಕ ಮನವಿ ಸಲ್ಲಿಸಿತು.

ಮಂಜುನಾಯ್ಕ ಅವರು ಸಾರ್ವಜನಿಕ ಆಸ್ತಿಯಾದ ಕಂಪೆನಿಯ ಸಾಮಾಗ್ರಿಗಳನ್ನು ಸ್ವಹಿತ ಲಾಭಕ್ಕಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ತನಿಖೆ ಕೂಡ ಆಗಿದ್ದು, ಅವರ ವಿರುದ್ದ ಕ್ರಮ ತೆಗೆದುಕೊಳ್ಳುವಂತೆ ವಿಜಿಲೆನ್ಸ್ ವಿಭಾಗ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಿದೆ. ಆದರೂ ಕೂಡ ಅವರನ್ನು ಶಿಕ್ಷೆಗೆ ಒಳಪಡಿಸದೇ ಕೇವಲ ವರ್ಗಾ ವಣೆ ಮಾಡಿ ಕೈತೊಳೆದು ಕೊ ಳ್ಳಲಾಗಿದೆ. ತಿಪ್ಪೆ ಸಾರುವ ಪ್ರಯತ್ನವಿದು ಎಂದು ಸಂಘಟನೆ ದೂರಿದೆ.

ಅವರ ವರ್ಗಾವಣೆ ರದ್ದು ಗೊಳಿಸಬೇಕು, ಅದರ ಬದಲು ಅಮಾನತುಗೊಳಿ ಸಬೇಕು. ಸಾರ್ವಜನಿಕ ಆಸ್ತಿ ಲೂಟಿ ಮಾಡಿದರೂ ಕೂಡ ಇವರಿಗೆ ಇಷ್ಟೆ ಶಿಕ್ಷೆ ಎಂದು ಸಮಾಜದಲ್ಲಿ ಅನುಮಾನ ಬರುತ್ತದೆ. ಆದ್ದ ರಿಂದ ಇಂಧನ ಸಚಿವರು, ಕರ್ನಾಟಕ ಸರ್ಕಾರ ಈ ಬಗ್ಗೆ ಅಗತ್ಯ ಕ್ರಮ ಕೈಗೊ ಳ್ಳಬೇಕು. ಭ್ರಷ್ಟಾಚಾರದ ಹಣ ವನ್ನು ಅವರ ಸಂಬಳದಲ್ಲಿ ಕಡಿತ ಗೊಳಿ ಬೇಕು ಮತ್ತು ಅವರನ್ನು ತಕ್ಷಣ ವೇ ಅಮಾನತು ಗೊಳಿಸ ಬೇಕು ಎಂದು ಮನವಿಯಲ್ಲಿ ಆಗ್ರಹಿಸ ಲಾಗಿದೆ.


ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.