ಹೊಸಳ್ಳಿಯಲ್ಲಿ ಬೊಲೆರೋ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ;ಬೈಕ್ ಸವಾರರ ಸ್ಥಿತಿ ಗಂಭೀರ!!
ಶಿವಮೊಗ್ಗ; ಹೊರವಲಯದಲ್ಲಿ ಬೊಲೆರೋ ಮತ್ತು ಬೈಕ್ ನಡುವೆ ರಸ್ತೆ ಅಪಘಾತವುಂಟಾಗಿದ್ದು, ಅಪಾಚೆ ವಾಹನ ಸವಾರರ ಸ್ಥಿತಿ ಗಂಭೀರವಾಗಿದೆ.
ಹೊಸಳ್ಳಿಯ ದರ್ಗದ ಬಳಿ ಗ್ರಾಮದ ಒಳ ರಸ್ತೆಯಿಂದ ತೀರ್ಥಹಳ್ಳಿ-ಶಿವಮೊಗ್ಗದ ಮುಖ್ಯರಸ್ತೆಗೆ ಬೊಲೆರೋ ವಾಹನ ಚಾಲಕ ಅತಿವೇಗದಿಂದ ತಿರುವು ತೆಗೆದುಕೊಂಡ ಪರಿಣಾಮ ಅಪಾಚೆ ವಾಹನಕ್ಕೆ ಡಿಕ್ಕಿ ಹೊಡೆದಿದೆ.
ಅತಿವೇಗದಲ್ಲಿದ್ದ ಬೊಲೆರೋ ದ್ವಿಚಕ್ರವಾಹನಕ್ಕೆ ಗುದ್ದಿದ ಪರಿಣಾಮ ಯುವಕರು ರಸ್ತೆಯ ಇನ್ನೊಂದು ಬದಿಯಲ್ಲಿ ಹೋಗಿ ಬಿದ್ದಿದ್ದಾರೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ತಕ್ಷಣವೇ ಅವರನ್ನ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
Leave a Comment