ಅರಣ್ಯ ದಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿದ್ದ ವ್ಯಕ್ತಿ ಗಳ ಮೇಲೆ ಪೋಲೀಸರ ದಾಳಿ ನಗದು ಹಣ ಮತ್ತು ದ್ವಿಚಕ್ರ ವಾಹನ ವಶ
ಶಿವಮೊಗ್ಗ:ಸಾರ್ವಜನಿಕ ಸ್ಥಳದಲ್ಲಿ ಇಸ್ಪಿಟು ಜೂಜಾಟ ಆಡುತ್ತಿದ್ದ ಆರೋಪಿತರ ಮೇಲೆ ದಾಳಿ, ಜೂಜಾಟಕ್ಕೆ ಬಳಸಿದ ರೂ 9,500/- (ರೂಪಾಯಿ ಒಂಬತ್ತು ಸಾವಿರದ ಐದು ನೂರು) ನಗದು ಹಣ, ರೂ 25,000/- (ರೂಪಾಯಿ ಇಪ್ಪತ್ತ ಐದು ಸಾವಿರ) ಮೌಲ್ಯದ 02 ದ್ವಿ ಚಕ್ರ ವಾಹನಗಳನ್ನು ಅಮಾನತ್ತು ಪಡಿಸಿಕೊಂಡು ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ*
ಶನಿವಾರದಂದು ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ *ಗಾಜನೂರು ಗ್ರಾಮದ ಚಾನಲ್ ಹತ್ತಿರ ಅರಣ್ಯದ ಜಾಗದಲ್ಲಿ* ಜನರು ಗುಂಪು ಸೇರಿಕೊಂಡು ಅಕ್ರಮ ಇಸ್ಪಿಟು ಜೂಜಾಟ ಆಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ *ಉಮೇಶ್ ಈಶ್ವರ್ ನಾಯಕ್ Dsp* ಶಿವಮೊಗ್ಗ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ, *ಸಂಜೀವ್ ಕುಮಾರ್ Cpi* ಶಿವಮೊಗ್ಗ ಗ್ರಾಮಾಂತರ ವೃತ್ತ ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡವನ್ನು ರಚಿಸಿ ಕಾರ್ಯಾಚರಣೆ ನಡೆಸಿ, ಕಾನೂನು ಬಾಹೀರವಾಗಿ ಇಸ್ಪೀಟು ಜೂಜಾಟ ಆಡುತ್ತಿದ್ದವರ ಮೇಲೆ ದಾಳಿ ನಡೆಸಿದ್ದು, *ಒಬ್ಬ ಆರೋಪಿತನನ್ನು* ವಶಕ್ಕೆ ಪಡೆದಿದ್ದು, ಉಳಿದ *08 ಜನ ಆರೋಪಿತರು* ತಲೆ ಮರೆಸಿಕೊಂಡಿರುತ್ತಾರೆ.
ಆರೋಪಿತರಿಂದ ಜೂಜಾಟದಲ್ಲಿ ಪಣವಾಗಿಟ್ಟಿದ್ದ *ರೂ 9,500/-* (ರೂಪಾಯಿ ಒಂಬತ್ತು ಸಾವಿರದ ಐದು ನೂರು) ನಗದು ಹಣ,
*ರೂ 25,000/-* (ರೂಪಾಯಿ ಇಪ್ಪತ್ತ ಐದು ಸಾವಿರ) ಮೌಲ್ಯದ 02 ದ್ವಿ ಚಕ್ರ ವಾಹನಗಳನ್ನು ಹಾಗೂ ಇಸ್ಪೀಟು ಕಾರ್ಡುಗಳನ್ನು ಅಮಾನತ್ತು ಪಡಿಸಿಕೊಂಡು, ಆರೋಪಿತರ ವಿರುದ್ಧ ಅಕ್ರಮ ಜೂಜಾಟ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.

Leave a Comment