ಸಾಗರ ಅರಣ್ಯ ಸಂಚಾರಿದಳ ಪೊಲೀಸರ ಕಾರ್ಯಾಚರಣೆ: ನಕ್ಷತ್ರ ಆಮೆ ರಕ್ಷಣೆ, ಆರೋಪಿಗಳ ಬಂಧನ
ಸಾಗರ : ಸಾಗರ ಅರಣ್ಯ ಸಂಚಾರಿದಳ ಪೊಲೀಸರು ಖಚಿತ ಮಾಹಿತಿ ಮೇರೆಗೆ ಅಳಿವಿನಂಚಿನಲ್ಲಿರುವ ಒಂದು ನಕ್ಷತ್ರ ಆಮೆಯನ್ನು ರಕ್ಷಣೆ ಮಾಡಿದ್ದಾರೆ.
ನಕ್ಷತ್ರ ಆಮೆಯನ್ನು ಮಾರಾಟ ಮಾಡಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಅಕ್ರಮವಾಗಿ ಇರಿಸಿಕೊಂಡಿದ್ದ ಶಿವಮೊಗ್ಗದ ಲಿಜು ಕುರಿಯನ್, ಪ್ರಸನ್ನ ಮಾಗಡಿ, ಸಾಗರ ತಾಲ್ಲೂಕಿನ ರಾಜು, ಭಾಗಮಂಡಲದ ಪ್ರವೀಣ್, ಕುಶಾಲ ನಗರದ ವಿಶ್ವನಾಥ್ ಎಂಬುವವರನ್ನು ಚಾಮರಾಜ ನಗರದಲ್ಲಿ ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಕಾರ್ಯಾಚರಣೆಯಲ್ಲಿ ಸಂಚಾರಿ ದಳದ ಪಿ.ಎಸ್.ಐ., ಮಲ್ಲಿಕಾರ್ಜುನ್, ಸಿಬ್ಬಂದಿಗಳಾದ ಗಿರೀಶ್, ರತ್ನಾಕರ್, ವಿಶ್ವನಾಥ್, ಮಂಜುನಾಥ್ ಪಾಲ್ಗೊಂಡಿದ್ದರು.
Leave a Comment