ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿಯವರನ್ನು ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿದ ಆರೋಪಿ ದೀಪಕ್ ಸಿಂಗ್ ಆರೆಸ್ಟ್
ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ , ನಿಂಧನೆ ಪೋಸ್ಟ್ ಮಾಡಿದ ಕಾಂಗ್ರೆಸ್ ಮುಖಂಡ ದೀಪಕ್ ಸಿಂಗ್ಇವರನ್ನು ವಿನೋಬನಗರ ಪೊಲೀಸರು ಬಂಧಿಸಿ ಪೋಲೀಸ್ ಠಾಣೆಗೆ ವಿಚಾರಣೆಗಾಗಿ ಕರೆ ತಂದಿದ್ದಾರೆ.
ಈಗಾಗಲೆ ಕಾಂಗ್ರೆಸ್ ಮುಖಂಡ ದೀಪಕ್ ಸಿಂಗ್ ವಿರುದ್ದ ವಿನೋಬನಗರ ಠಾಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಅವಹೇಳನ ಮಾಡಿದ ಬಗ್ಗೆ IPC ಕಲಂ 504, ರೀತ್ಯಾ FIR ದಾಖಲಾಗಿದೆ.
ಇದೀಗ CPI ವಸಂತ್ ಕುಮಾರ್ ರವರು ಈ ಕೇಸಿನ ಬಗ್ಗೆ ದೀಪಕ್ ಸಿಂಗ್ ರವರನ್ನು ವಿಚಾರಣೆ ನಡೆಸಿದ ನಂತರ ಸಂಬಂದಪಟ್ಟ ನ್ಯಾಯಾಲಯಕ್ಕೆ ದೀಪಕ್ ಸಿಂಗ್ ರನ್ನು ಹಾಜರ್ ಪಡಿಸುವ ಸಾದ್ಯತೆ ಇದೆ ಎನ್ನಲಾಗಿದೆ.
ಏನಿದು ಪ್ರಕರಣ;ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಿಂಧನೆ ಪೋಸ್ಟ್ ಮಾಡಿದ ಕಾಂಗ್ರೆಸ್ ಮುಖಂಡ ದೀಪಕ್ ಸಿಂಗ್ ವಿರುದ್ದ ಕಾನೂನುಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರು ನಿನ್ನೆ ದಿವಸ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು
ದೀಪಕ್ ಸಿಂಗ್ ಎಂಬಾತ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಅಸಂವಿಧಾನಿಕ ಪದಗಳನ್ನು ಬಳಸಿ ನಿಂಧನೆ ಮಾಡಿದ್ದಾರೆ. ದೀಪಕ್ ಸಿಂಗ್ ಈ ಹಿಂದೆಯು ಅನೇಕ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇದರ ವಿರುದ್ದ ಬಿಜೆಪಿ ಹಲವು ಬಾರಿ ದೂರು ನೀಡಲಾಗಿದೆ. ಆದರೂ ಇವರು ಬುದ್ದಿ ಕಲಿತಿಲ್ಲ. ಇವರ ವಿರುದ್ದ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ದೂರಿನಲ್ಲಿ ಆಗ್ರಹಿಸಲಾಗಿತ್ತು
Leave a Comment