ರಾಗಿಗುಡ್ಡದ ನಿವಾಸಿ ಸುರೇಶ್ ನಾಪತ್ತೆ

 


ಶಿವಮೊಗ್ಗ, : ಶಿವಮೊಗ್ಗ ರಾಗಿಗುಡ್ಡದ ನಿವಾಸಿ ಸುರೇಶ್ ಅವರ ಮಗ ಧನುಷ್(18ವರ್ಷ) ಇವನು ಆಗಸ್ಟ್ 07ರಂದು  ಟೈಲ್ಸ್ ಕೆಲಸಕ್ಕೆಂದು ಮನೆಯಿಂದ ಹೋದವನು ಈವರೆಗೆ ಮರಳಿ ಬಂದಿರುವುದಿಲ್ಲ ನಾಪತ್ತೆಯಾಗಿದ್ದಾನೆ.

ಸಾಧಾರಣ ಮೈಕಟ್ಟು, ಉದ್ದಮುಖ, 165ಸೆಂ.ಮೀ. ಎತ್ತರ, ಬಿಳಿಬಣ್ಣ ಹೊಂದಿರುವ ಈ ವ್ಯಕ್ತಿಯು ಕಾಣೆಯಾಗುವ ದಿನದಂದು ಬಾದಾಮಿ ಬಣ್ಣದ ಕೆಂಪುಗೀರಿನ ಅಂಗಿ ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದಾನೆ. ಕನ್ನಡ ಮಾತನಾಡಬಲ್ಲವನಾಗಿದ್ದಾನೆ.

ಈ ಚಹರೆ ಹೊಂದಿರುವ ಹುಡುಗನ ಕುರಿತು ಮಾಹಿತಿ ಸಿಕ್ಕಲ್ಲಿ ಸಾರ್ವಜನಿಕರು ಸಿಪಿಐ ಗ್ರಾಮಾಂತರ ವೃತ್ತ, ಶಿವಮೊಗ್ಗ., ಅಥವಾ ಪಿಎಸ್‌ಐ ಗ್ರಾಮಾಂತರ ಠಾಣೆ ಅಥವಾ ಕಂಟ್ರೋಲ್ ರೂಂ ನಂ.100 ಅಥವಾ ದೂರವಾಣಿ ಸಂಖ್ಯೆ 08182-261418, 261410, 261422, ಮೊ.9480803350ಗೆ  ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದೆ.


ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.