ಶಿವಮೊಗ್ಗ;ಸ್ಮಾರ್ಟ್ ಸಿಟಿ ಕಾಮಗಾರಿ ಇಂಜಿನಿಯರ್ ನಿರ್ಲಕ್ಷ್ಯಕ್ಕೆ ಕಾರು ಮತ್ತು ಮರ ಬಲಿ! ನ್ಯಾಯಕ್ಕಾಗಿ ಧರಣಿ ಕುಳಿತ ಪತ್ರಕರ್ತ!

 ಶಿವಮೊಗ್ಗ; ನಗರದಲ್ಲಿ ಪಾಲಿಕೆ ವತಿಯಿಂದ ಸ್ಮಾರ್ಟ್ ಸಿಟಿ ಸಂಭಂದ  ಎಲ್ಲಾ ಕಡೆ ಬಾಕ್ಸ್ ಚರಂಡಿ ಕಾಮಗಾರಿ ಮತ್ತು ಅಂಡರ್ ಗ್ರೌಂಡ್ ಕೇಬಲ್ ಅಳವಡಿಕೆ ಯ ಕಾಮಾಗಾರಿ ನಡೆಯುತ್ತಿದೆ.
ಆದರೆ ಕಾಮಾಗಾರಿ ಮಾಡುವ ಇಂಜಿನಿಯರ್ ಮತ್ತು ಪಾಲಿಕೆ ಇಂಜಿನಿಯರ್ ನಿರ್ಲಕ್ಷ್ಯ ದಿಂದ ಈಗಾಗಲೇ ಹಲವು ಬಡಾವಣೆಯಲ್ಲಿ ಮರಗಳ ಮಾರಣ ಹೋಮ ಶುರುವಾಗಿದೆ. ಅದೇರೀತಿ ಕಾಮಾಗಾರಿ ಮುಗಿದ ಮೇಲೆ ಅಗೆದ ಹಳ್ಳ ಕೊಳ್ಳ ಗಳನ್ನು ಸರಿಯಾಗಿ ಮುಚ್ಚದೇ ಸಾರ್ವಜನಿಕರು ಮತ್ತು ವಾಹನ ಸವಾರರು ತೊಂದರೆ ಯಾತನೆ ಅನುಭವಿಸುವಂತಾಗಿದೆ. ನಗರದ ಎಲ್ಲಾಕಡೆ ಗುಂಡಿಗಳು ಕಾಣುತ್ತಿವೆ ಶಿವಮೊಗ್ಗ ನಗರವೀಗ ಇದು ಸ್ಮಾರ್ಟ್ ಸಿಟಿನಾ? ಅಂತಾ ಜನರು ಮಾತಾಡಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಕಾಮಾಗಾರಿ ಮುಗಿಸಿ ಹಣ ಸಂದಾಯವಾದರೆ ಸಾಕು, ಯಾರಿಗೆ ಏನು ತೋಂದರೆಯಾದರೂ ಪರವಾಗಿಲ್ಲ ಎನ್ನುವ ತೀರ್ಮಾನಕ್ಕೆ ಪಾಲಿಕೆ  ಆಡಳಿತಾಧಿಕಾರಿ ಗಳು ಬಙದಿದ್ದಾರೆ. ಹಲವು ಕಡೆ ವಾಹನ ಪಾರ್ಕಿಂಗ್ ಮಾಡುವುದಕ್ಕೆ ಆಗುತ್ತಿಲ್ಲ. ಶಿವಮೊಗ್ಗ ಈಗ ಗುಂಡಿಮಯವಾಗಿದೆ ಇವರಿಗೆ ಯಾರು ಹೇಳುವವರಿಲ್ಲ,ಕೇಳುವವರಿಲ್ಲ ಎನ್ನುವಂತಾಗಿದೆ. ದಿನ ನಿತ್ಯ ಓಡಾಡುವ ಸಾರ್ವಜನಿಕರು ಪಾಲಿಕೆ ಅಧಿಕಾರಿಗಳಿಗೆ ಶಾಪ ಹಾಕುತ್ತಿದ್ದಾರೆ. ಸ್ಥಳೀಯ ಕಾರ್ಪೊರೇಟ್ ರ್ಗಳು ಸಹ ನೋಡಿ ಸುಮ್ಮನಾಗಿದ್ದಾರೆ.
 ಇದೀಗ ಅದೇ ರೀತಿ ಗಾಂಧೀನಗರದ ಸೂರ್ಯಗಗನ ದಿನಪತ್ರಿಕೆ ಯ ಸಂಪಾದಕರಾದ ಗಾ.ರಾ.ಶ್ರೀನಿವಾಸ್ ರವರು ಕವೇರಿ ಮುಂದೆ ನಿಲ್ಲಿಸಿದ್ದ ಕಾರಿನ ಮೇಲೆ ಬೃಹತ್ ಮರವೋಂದು ಬಿದ್ದು ಕಾರು ಜಖಂ ಆಗಿದೆ. ಇದಕ್ಕೆ ಹೊಣೆಗಾರರು ಯಾರು? ಬೃಹತ್ ಮರ ಸಹ ಬಲಿಯಾಗಿದೆ. ಇದನ್ನು ಸರಿಪಡಿಸುವವರು ಯಾರು ನಷ್ಟ ತುಂಬಿಕೊಡುವವರು ಯಾರು?  ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಕಾಮಾಗಾರಿ ನಡೆಸುವ ಗುತ್ತಿಗೆದಾರನ ನಿರ್ಲಕ್ಷ್ಯ ಕಾಣುತ್ತಿದೆ. 
  ಇದೀಗ ನ್ಯಾಯ ಕೊಡಿ ಅಂತಾ ಇಂದು  ಪತ್ರಿಕಾ ಸಂಪಾದಕರು ಕಾರಿನ ಮುಂದೇ ಧರಣಿ ಕುಳಿತ ಘಟನೆ ವರದಿಯಾಗಿದೆ. ಮುಂದೇನಾಗುವುದೋ ಕಾದು ನೋಡುವ..

2 ಕಾಮೆಂಟ್‌ಗಳು:

Blogger ನಿಂದ ಸಾಮರ್ಥ್ಯಹೊಂದಿದೆ.