ಸಿಗಂದೂರು; ಲಾಂಚ್ ನಲ್ಲಿ ಪ್ರಯಾಣಿಕರು ಮತ್ತು ಜೀಪ್ ಚಾಲಕರ ನಡುವೆ ಹೊಡೆದಾಟ!!

ಶಿವಮೊಗ್ಗ;ಸಿಗಂಧೂರಿನ ಲಾಂಚ್ ನಲ್ಲಿ  ಪ್ರಯಾಣಿಕರ ಮತ್ತು ಸ್ಥಳೀಯ ಜೀಪ್ ಚಾಲಕರ  ನಡುವೆ ಮಾರಾಮಾರಿ ಗಲಾಟೆಯಾದ ಘಟನೆ ವರದಿಯಾಗಿದೆ.

ಸಿಗಂಧೂರಿನಿಂದ ವಾಪಾಸಾಗುವಾಗ ಜೀಪ್ ಚಾಲಕ ಮತ್ತು ಗದಗ ಪ್ರಯಣಿಕರ ನಡುವೆ ಗಲಾಟೆ ಆಗಿದೆ.

ಗದಗ ನಿಂದ ಬಂದ ಪ್ರಯಾಣಿಕರು ಕಳಸವಳ್ಳಿ ಲಾಂಚ್ ಏರಿ ಸಿಗಂಧೂರಿನ ಕಡೆ ಪ್ರಯಾಣಿಸುವ ವೇಳೆಯಲ್ಲಿ ಜೀಪ್ ವೊಂದರಲ್ಲಿ ಬಾಡಿಗೆ ವಿಚಾರಿಸಿದ್ದಾರೆ. ಬಾಡಿಗೆ ಫಿಕ್ಸ್ ಆದ ನಂತರ ಬೇರೆ ಆಟೋ ಏರಿ ದೇವಸ್ಥಾನವನ್ನ ನೋಡಿಕೊಂಡು ಬಂದಿದ್ದಾರೆ.

ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ನಿಷೇಧ ಏರಲಾಗಿದೆ. ಆದರೂ ದೇವಸ್ಥಾನದ ಬಳಿ ತೆರಳಿ ಕೆಲವು ಭಕ್ತರು ಕೈಮುಗಿದು ವಾಪಾಸಾಗುತ್ತಾರೆ. 

ಇದೇ ರೀತಿ ವಾಪಾಸಾಗುವ ವೇಳೆ ಬಾಡಿಗೆ ಜೀಪ್ ಚಲಾಯಿಸುವ ಕೆಲ ಸ್ಥಳೀಯರು ಈ ಗದಗನಿಂದ ಬಂದ ಪ್ರಯಾಣಿಕರ ನಡುವೆ ಬಾಡಿಗೆ ಮಾತನಾಡಿದ ವಿಚಾರವಾಗಿ ಜಗಳವಾಗಿದೆ ಎನ್ನಲಾಗಿದೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.