ಐಜಿಪಿ ತಂಡದ ಕಾರ್ಯಾಚರಣೆ;ಆನಂದಪುರದಲ್ಲಿ ಹುಲಿ ಉಗುರು ಮಾರುತ್ತಿದ್ದ ಮೂವರ ಬಂಧನ
ಶಿವಮೊಗ್ಗ;ಸಾಗರ ತಾಲೂಕು ಆನಂದಪುರದಲ್ಲಿ ಐಜಿಪಿ ತಂಡದಿಂದ ದಾಳಿ ನಡೆದಿದ್ದು ಲಕ್ಷಾಂತರ ರೂ. ಮೌಲ್ಯದ ಹುಲಿ ಉಗುರುಗಳನ್ನ ವಶಪಡಿಸಿಕೊಳ್ಳಲಾಗಿದೆ.
ಸಾಗರ ತಾಲೂಕು ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯ ಆನಂದಪುರದಲ್ಲಿ ಹುಲಿ ಉಗುರು ಮಾರುತ್ತಿದ್ದ ಮೂವರನ್ನ ಬಂಧಿಸಿದ ಐಜಿಪಿ ತಂಡ 2 ಲಕ್ಷ ರೂ. ಮೌಲ್ಯದ ಉಗುರುಗಳನ್ನ ವಶಪಡಿಸಿಕೊಂಡಿದೆ.
ವಿಶ್ವನಾಥ್, ಮೋಹನ್ ಹಾಗೂ ಇನ್ನೋರ್ವ ವ್ಯಕ್ತಿಯನ್ನ ಐಜಿಪಿ ತಂಡ ಬಂಧಿಸಿದ್ದು ಗ್ರಾಮಾಂತರ ಠಾಣೆಯಲ್ಲಿರಿಸಲಾಗಿದೆ. ತನಿಖೆ ಮುಂದುವರಿದಿದೆ.
Leave a Comment