ಮಕ್ಕಳ ಸಹಾಯವಾಣಿ ಯಿಂದ ಚಿಂದಿ ಆಯುವ ಮಹಿಳೆ ಮತ್ತು ಮಗುವಿನ ರಕ್ಷಣೆ


ಶಿವಮೊಗ್ಗ ;ಪ್ರತಿದಿನ ಚಿಂದಿ ಆಯ್ದು ನೆಹರೂ ರಸ್ತೆಯ ಚಿನ್ನದಂಗಡಿಯ ಹಿಂಭಾಗದ ಜಾಗದಲ್ಲಿ ರಕ್ಷಣೆಯಿಲ್ಲದೆ ಮಲಗುತ್ತಿದ್ದ ಮಹಿಳೆ ಮತ್ತು 7 ವರ್ಷದ ಹೆಣ್ಣು ಮಗುವಿಗೆ ಸುರಭಿಯಲ್ಲಿ ರಕ್ಷಣೆ ನೀಡಲಾಗಿದೆ.

ಸಿಡಬ್ಲೂಸಿ(ಮಕ್ಕಳ ರಕ್ಷಣ ಸಮಿತಿಯ) ಮಾರ್ಗದರ್ಶನದಲ್ಲಿ ಮಕ್ಕಳ ಸಹಾಯವಾಣಿ ಮತ್ತು ಕೋಟೆ ಪೊಲೀಸರ ಸಹಾಯದಿಂದ ಈ ಕಾರ್ಯಾಚರಣೆಯಲ್ಲಿ ಮಗು ಮತ್ತು ಮಹಿಳೆಯನ್ನ ರಕ್ಷಿಸಲಾಗಿದೆ.

ಹಾರನಹಳ್ಳಿ ಚಿನ್ನದ ಅಂಗಡಿಯ ಹಿಂಭಾಗದ ಜಾಗೆಯಲ್ಲಿ ಪ್ರತಿದಿನ ಚಿಂದಿ ಆಯುವ ಮಹಿಳೆ ಮತ್ತು ಮಗು ಬಂದು ಮಲಗುತ್ತಿದ್ದರು. ಇಲ್ಲಿಯ ವೈನ್ ಶಾಪ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಇವರೊಂದಿಗೆ ಮಲಗುತ್ತಿದ್ದನ್ನ ನಿನ್ನೆ ಸಾರ್ವಜನಿಕರು ಗಮನಿಸಿ ಮಕ್ಕಳ ಸಹಾಯವಾಣಿಗೆ ದೂರವಾಣಿ ಕರೆ ಮಾಡಿದ್ದಾರೆ. 

ಯಾವುದೇ ರಕ್ಷಣೆ ಇಲ್ಲದೆ, ಅಭದ್ರತೆಯಲ್ಲಿ ಹೆಣ್ಣು ಮಗುವಿನೊಂದಿಗೆ ಮಲಗುತ್ತಿದ್ದ ಮಹಿಳೆಯನ್ನ ರಕ್ಷಿಸಿ ಸುರಭಿಗೆ ಬಿಡುವಲ್ಲಿ ಪೊಲೀಸ್ ಮತ್ತು ಮಕ್ಕಳ ಸಹಾಯವಾಣಿಯವರಿಗೆ ಹರಸಾಹಸವೇ ಪಡಬೇಕಾಯಿತು.

ಚಿಂದಿ ಆಯುವ ಮಹಿಳೆಯ ಹೆಸರು ರತ್ನಾ ಹಾಗೂ 7 ವರ್ಷದ ಮಗುವಿನ ಹೆಸರು ರಕ್ಷಿತಾ ಎಂದು ತಿಳಿದುಬಂದಿದೆ. ಎರಡುವರ್ಷಗಳ ಹಿಂದೆ ಇವರು ಇತರೆ ಜಿಲ್ಲೆಯಿಂದ ಶಿವಮೊಗ್ಗ ನಗರಕ್ಕೆ ಬಂದವರಾಗಿದ್ದಾರೆ. ನಿನ್ನೆ ರಾತ್ರಿ 10-30 ರ ವೇಳೆಗೆ ಮಕ್ಕಳ ಸಹಾಯವಾಣಿಗೆ ಸಾರ್ವಜನಿಕರು ಇವರೊಂದಿಗೆ ವ್ಯಕ್ತಿಯೋರ್ವನು ಮಲಗುವುದನ್ನ ಗಮನಿಸಿ ಕರೆ ಮಾಡಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.