ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರರಿಗೆ ಕೊರೋನ ಸೋಂಕು
ತೀರ್ಥಹಳ್ಳಿ; ಶಾಸಕ ಆರಗ ಜ್ಞಾನೇಂದ್ರರ ವಾಹನ ಚಾಲಕರಿಗೆ ಕೊರೋನ ಸೋಂಕು ಧೃಡಪಟ್ಟ ಹಿನ್ನಲೆಯಲ್ಲಿ ,ತಮ್ಮನ್ನು ಪರೀಕ್ಷೆಗೊಳಪಡಿಸಿಕೊಂಡ ಶಾಸಕರಿಗೆ ಪ್ರಾರಂಭಿಕ ಪರೀಕ್ಷೆಯಲ್ಲಿ ಅಂದರೆ Rapid ಟೆಸ್ಟ್ ನಲ್ಲಿ ನೆಗೆಟಿವ್ ರಿಪೋರ್ಟ್ ಬಂದಿತ್ತಾದರೂ ಇದೀಗ ಸ್ವ್ಯಾಬ್ ಟೆಸ್ಟ್ ನಲ್ಲಿ ಪಾಸಿಟಿವ್ ರಿಪೋರ್ಟ್ ಬಂದಿದೆ ಎನ್ನಲಾಗಿದೆ.
ಸೋಂಕು ಧೃಡಪಟ್ಟಿರುವುದರಿಂದ ಶಾಸಕ ಆರಗ ತಮ್ಮ ಗುಡ್ಡೆಕೊಪ್ಪದ ನಿವಾಸಿದಲ್ಲಿ ಸ್ವಯಂ ಕ್ವಾರೆಂಟೈನ್ ಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.ಅಗತ್ಯವಿದ್ದಲ್ಲಿ ಶಿವಮೊಗ್ಗಕ್ಕೆ ದಾಖಲಾಗುವ ಸಂಭವವಿದೆ ಎಂದು ತಿಳಿದು ಬಂದಿದೆ.
Leave a Comment