ಶಾಸಕರ ಕಚೇರಿ ಸಿಬ್ಬಂಧಿಗೆ ಸೋಂಕು,ಶಾಸಕರ ಕಛೇರಿ ಎರಡು ದಿನ ಸ್ಯಾನಿಟೈಸ್ ಗಾಗಿ ಬಂದ್!


ಶಿವಮೊಗ್ಗ;ಕೊರೋನ ಹಿನ್ನಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪನವರ ಶಾಸಕರ ಕಚೇರಿಯನ್ನ ಎರಡು ದಿನಗಳ ವರೆಗೆ ಬಂದ್ ಮಾಡಲಾಗಿದೆ.

ನಗರದ ನೆಹರು ರಸ್ತೆಯಲ್ಲಿರುವ ಸಚಿವರ ಕಚೇರಿಯ ಸಿಬ್ಬಂಧಿ ಓರ್ವರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಕಚೇರಿಯನ್ನ ಸೋಮವಾರದ ವರೆಗೂ ಸ್ಯಾನಿಟೈಸ್ ಗಾಗಿ ಬಂದ್ ಮಾಡಲಾಗುತ್ತಿದೆ.

ಸಚಿವರ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸೋಂಕಿತ ವ್ಯಕ್ತಿ ಅನಾರೋಗ್ಯದ ಕಾರಣ ಕಳೆದ ಮೂರು‌ ದಿನದಿಂದ ಕಚೇರಿಗೆ ಬಂದಿಲ್ಲ. ಇಂದು ಕೊರೊನಾ ಸೋಂಕು ದೃಢ ಹಿನ್ನೆಲೆ ಸಚಿವರ ಕಚೇರಿಯನ್ನ ಎರಡು ದಿನ ಬಂದ್ ಮಾಡಲಾಗಿದೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.