ಶಿವಮೊಗ್ಗ ಮತ್ತು ಭದ್ರಾವತಿ ಯಲ್ಲಿ ರೈಲ್ವೇ ಮೆಲ್ಸೇತುವೆ 4 ಕಡೆ ನಿರ್ಮಾಣ.ಕಾಮಗಾರಿಗಳ ಅನುಷ್ಟಾನಕ್ಕೆ ರಾಜ್ಯ ಸಚಿವ ಸಂಪುಟದ ಸಭೆಯಲ್ಲಿ ಅನುಮೋದನೆ ;ಬಿವೈಆರ್ ಹೇಳಿಕೆ
ಶಿವಮೊಗ್ಗ ಮತ್ತು ಭದ್ರಾವತಿ ಯಲ್ಲಿ ರೈಲ್ವೇ ಮೆಲ್ಸೇತುವೆ ಒಟ್ಟು 4 ಕಡೆ ನಿರ್ಮಾಣ.ಕಾಮಗಾರಿಗಳ ಅನುಷ್ಟಾನಕ್ಕೆ ರಾಜ್ಯ ಸಚಿವ ಸಂಪುಟದ ಸಭೆಯಲ್ಲಿ ಅನುಮೋದನೆ ದೊರೆತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಇಂದು ನಗರದ ರಾಯಲ್ ಆರ್ಕಿಡ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ತಿಳಿಸಿದರು.
ಶಿವಮೊಗ್ಗ ಜಿಲ್ಲೆಯ ಪ್ರವಾಸೋದ್ಯಮ, ರೈಲ್ವೆ ಯೋಜನೆಗಳ ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯ ಬಗ್ಗೆ ಜಿಲ್ಲೆಯಲ್ಲಿ ಕೈಗೊಂಡಿರುವ ಕಾಮಗಾರಿಗಳ ಕುರಿತು ಮಾತಾಡಿದರು.
1) 60.76 ಕೋಟಿ ವೆಚ್ಚದಲ್ಲಿ 631 ಮೀಟರ್ ಉದ್ದ, ಶಿವಮೊಗ್ಗ ನಗರದ ಉಷಾ ನರ್ಸಿಂಗ್ ಹೋಂ - ಸೌಳಂಗ ರಸ್ತೆಯಲ್ಲಿ ಎಲ್.ಸಿ ಗೇಟ್ ನಂ.49 ಕ್ಕೆ ರೈಲ್ವೆ ಮೇಲ್ಸುತುವೆ ನಿರ್ಮಾಣ
2)25.92 ಕೋಟಿ ವೆಚ್ಚದಲ್ಲಿ,564 ಮೀಟರ್ ಉದ್ದ ಭದ್ರಾವತಿ ನಗರದ ಶಿವಮೊಗ್ಗ ರಸ್ತೆಯ ಕಡದಕಟ್ಟೆ ಬಳಿ ಎಲ್.ಸಿ. ಗೇಟ್ ನಂ.34 ಕ್ಕೆ,ರೈಲ್ವೆ ಮೇಲ್ಸುತುವೆ ನಿರ್ಮಾಣ
3) 29.63 ಕೋಟಿ ವೆಚ್ಚದಲ್ಲಿ, 493 ಮಿಟರ್ ಉದ್ದ ಶಿವಮೊಗ್ಗ ನಗರದ ಕಾಶಿಪುರ ಎಲ್.ಸಿ. ಗೇಟ್ ನಂ 52 ಕ್ಕೆ ರೈಲ್ವೆ ಮೆಲ್ಸೇತುವೆ ನಿರ್ಮಾಣ
4) 43.897 ಕೋಟಿ ವೆಚ್ಚದಲ್ಲಿ,920 ಮೀಟರ್ ಉದ್ದ, ಶಿವಮೊಗ್ಗ ನಗರದ ವಿದ್ಯಾನಗರ ರೈಲ್ವೆ ನಿಲ್ದಾಣದ ಹತ್ತಿರ ಎಲ್.ಸಿ ಗೇಟ್ ನಂ 46 ಕ್ಕೆ ರೈಲ್ವೆ ಮೇಲ್ಸುತುವೆ ನಿರ್ಮಾಣ
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಶ್ರೀ ಟಿ.ಡಿ.ಮೇಘರಾಜ್,ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಶ್ರೀ ಗುರುಮೂರ್ತಿ, ರಾಜ್ಯ ಆರ್ಯ ವ್ಯಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾದ ಶ್ರೀ ಡಿ.ಎಸ್.ಅರುಣ್,ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀ ರೇವಣಪ್ಪ, ವಿಭಾಗ ಪ್ರಭಾರಿಗಳಾದ ಶ್ರೀ ಗಿರೀಶ್ ಪಟೇಲ್, ಪಾಲಿಕೆ ಅಧ್ಯಕ್ಷರಾದ ಶ್ರೀಮತಿ ಸುವರ್ಣಶಂಕರ್,ಉಪಮೇಯರ್ ಶ್ರೀಮತಿ ಸುರೇಖಾ ಮುರಳಿಧರ್, ರಾಜ್ಯ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶ್ರೀ ಎಸ್.ದತ್ತಾತ್ರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಬಿ.ಕೆ.ಶ್ರೀನಾಥ್,ಶ್ರೀ ಶಿವರಾಜು, ಶ್ರೀ ಧರ್ಮ ಪ್ರಸಾದ್, ಪಾಲಿಕೆ ಸದಸ್ಯರಾದ ಶ್ರೀ ಜ್ಞಾನೇಶ್ವರ್, ಶ್ರೀ ಎಸ್.ಚನ್ನಬಸಪ್ಪ,APMC ಸದಸ್ಯರಾದ ಶ್ರೀ ಎಸ್ ಎಸ್ ಜ್ಯೋತಿಪ್ರಕಾಶ್,ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಶ್ರೀ ಷಡಕ್ಷರಿ,ಕುವೆಂಪು ಸಿಂಡಿಕೇಟ್ ವಿಶ್ವವಿದ್ಯಾಲಯದ ಸದಸ್ಯರಾದ ಶ್ರೀ ಬಳ್ಳಕೆರೆ ಸಂತೋಷ್ ,ಜಿಲ್ಲಾ ಅಧಿಕಾರಿಗಳು ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಸೇರಿದಂತೆ, ಇನ್ನಿತರರು *,ಉಪಸ್ಥಿತರಿದ್ದರು

Leave a Comment