ಜಿಲ್ಲಾ ಹೆಲ್ತ್ ಬುಲಿಟಿನ್ ಪ್ರಕಾರ ಜಿಲ್ಲೆಯಲ್ಲಿ ಇಂದು ಕೊರಾನ ಪತ್ತೆ-430,ರಾಜ್ಯದ ಬುಲೆಟಿನ್ ಪ್ರಕಾರ-314

ಶಿವಮೊಗ್ಗ ನಗರ ಮತ್ತು ತಾಲೂಕಿನಲ್ಲಿ-176 ಭದ್ರಾವತಿಯಲ್ಲಿ-94, ಶಿಕಾರಿಪುರ-83, ತೀರ್ಥಹಳ್ಳಿ-17, ಸಾಗರದಲ್ಲಿ 24, ಹೊಸನಗರದಲ್ಲಿ-15 ಹಾಗೂ ಸೊರಬದಲ್ಲಿ 04, ಇತರೆ ಜಿಲ್ಲೆಯಿಂದ 17 ಜನ

ಶಿವಮೊಗ್ಗ;ಜಿಲ್ಲೆಯಲ್ಲಿ ಇಂದು 430 ಪಾಸಿಟಿವ್ ಪ್ರಕರಣ ಕಾಣಿಸಿಕೊಂಡಿದೆ. ಇದರಿಂದ ಒಟ್ಟು ಸೋಂಕಿತರ ಸಂಖ್ಯೆ 7 ಸಾವಿರ ದಾಟಿದೆ. ಒಟ್ಟು ಜಿಲ್ಲೆಯಲ್ಲಿ ಇದುವರೆಗೂ 7086 ಕೊರೋನ ಸೋಂಕಿತರೆಂದು ಎಂದು ಜಿಲ್ಲಾ  ಹೆಲ್ತ್ ಬುಲಿಟಿನ್ ಪ್ರಕಟಿಸಿದೆ.
ಇಂದು ಸಹ ಸೋಂಕಿನಿಂದ 4 ಜನ ಸಾವುಕಂಡಿದ್ದು, ಇದರಿಂದ ಜಿಲ್ಲೆಯಲ್ಲಿ ಒಟ್ಟು ಸಾವಿನ ಸಂಖ್ಯೆ 120 ಕ್ಕೇರಿದೆ.  ಜಿಲ್ಲೆಯಲ್ಲಿ ಇದುವರೆಗೂ 1105 ಜನರಿಗೆ ಕೊರೋನ ಪರೀಕ್ಷೆಗೆ ಒಳಪಡಿಸಲಾಗಿದ್ದು, 1216 ಜನರಿಗೆ ನೆಗೆಟಿವ್ ಎಂದು ವರದಿ ಬಂದಿದೆ. 7086 ಜನರಿಗೆ ಕೊರೋನ ಪಾಸಿಟಿವ್ ಎಂದು ವರದಿ ಪ್ರಕಟವಾಗಿದೆ. ಇಂದು 143 ಜನ ಸೋಂಕಿನಿಂದ ಗುಣಮುಖರಾಗಿ ಮೆಗ್ಗಾನ್ ಮತ್ತು ಕೋವಿಡ್ ಕೇರ್ ಸೆಂಟರ್ ನಿಂದ ಬಿಡುಗಡೆಗೊಂಡಿದ್ದಾರೆ.

ಇದರಿಂದ ಒಟ್ಟು ಗುಣಮುಖರಾಗಿರುವ ಸಂಖ್ಯೆಯೂ ಸಹ 5253ಕ್ಕೇರಿದೆ. 169 ಜನ ಕೊರೋನ ಸೋಂಕಿತರು ಮೆಗ್ಗಾನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 203 ಜನ ಕೊರೋನ ಕೇರ್ ಸೆಂಟರ್ ನಲ್ಲಿ, 244 ಜನರಿಗೆ ಖಾಸಗಿ ಆಸ್ಪತ್ರೆಗಳಲ್ಲಿ, 830 ಜನ ಮನೆಯಲ್ಲಿ ಐಸೋಲೇಷನ್ ಆಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಯುರ್ವೇದಿಕ್ ಕಾಲೇಜಿನ ಆಸ್ಪತ್ರೆಯಲ್ಲಿ 175 ಜನ ಚಿಕಿತ್ಸೆ ಪಡೆಯುತ್ತಿದ್ದು ಒಟ್ಟು ಸಕ್ರಿಯೆಗೊಂಡ ಕೊರೋನ ಪಾಸಿಟಿವ್ ಸಂಖ್ಯೆ  1621 ಎಂದು ಬುಲಿಟಿನ್ ತಿಳಿಸಿದೆ.




ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.