ಅನ್‌ಲಾಕ್ 4: ಸೆಪ್ಟೆಂಬರ್ 7 ರಿಂದ ಮೆಟ್ರೋ ರೈಲು ಸಂಚಾರಕ್ಕೆ ಕೇಂದ್ರ ಅನುಮತಿ
ನವದೆಹಲಿ, ಆಗಸ್ಟ್ 29: ಅನ್‌ಲಾಕ್ 4 ನಿಯಮ ಘೋಷಣೆಯಾಗಿದ್ದು, ಸೆಪ್ಟೆಂಬರ್ 7 ರಿಂದ ಮೆಟ್ರೋ ರೈಲು ಸಂಚಾರಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.
ಶಾಲೆ, ಕಾಲೇಜುಗಳು, ಈಜುಕೊಳ, ಥಿಯೇಟರ್‌ಗಳನ್ನು ತೆರೆಯುವುದಿಲ್ಲ. ಸೆಪ್ಟೆಂಬರ್ 30ರವರೆಗೂ ಈ ನಿಯಮದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ಅನ್‌ಲಾಕ್ 3 ಜುಲೈ ಅಂತ್ಯಕ್ಕೆ ಪೂರ್ಣಗೊಂಡಿತ್ತು. ಯೋಗ ಸಂಸ್ಥೆಗಳು ಹಾಗೂ ಜಿಮ್‌ಗಳನ್ನು ತೆರೆಯಲು ಅನುಮತಿ ನೀಡಲಾಗಿತ್ತು. ಆದರೆ ಕಂಟೈನ್ಮೆಂಟ್ ಝೋನ್‌ಗಳನ್ನು ಹಳೆಯ ನಿರ್ಬಂಧಗಳೇ ಮುಂದುವರೆಯಲಿವೆ.
ಕೇಂದ್ರ ಸರ್ಕಾರದಿಂದ ನಾಲ್ಕನೇ ಅನ್‌ಲಾಕ್ ನಿಯಮ ಘೋಷಣೆಯಾಗಿದೆ.ಈ ನಿಯಮ ಸೆಪ್ಟೆಂಬರ್ 30ರವರೆಗೆ ಇರಲಿದೆ. ಕೊರೊನಾ ಸೋಂಕನ್ನು ನಿಯಂತ್ರಿಸುವ ನಿಟ್ಟಿನಲ್ಲಿ ನರೇಂದ್ರ ಮೋದಿ ಸರ್ಕಾರವು ಮಾರ್ಚ್ ಅಂತ್ಯದವರೆಗೆ ಲಾಕ್‌ಡೌನ್ ವಿಧಿಸಿತ್ತು. 31 ಆಗಸ್ಟ್ನಲ್ಲಿ 3ನ್‌ಲಾಕ್ 3 ಮುಕ್ತಾಯಗೊಳ್ಳುತ್ತದೆ. ಹೀಗಾಗಿ ಸರ್ಕಾರವು ಅನ್‌ಲಾಕ್ 4 ಘೋಷಣೆ ಮಾಡಿದೆ.
Leave a Comment