ಸೆ. 1 ರಿಂದ ಪಬ್, ಬಾರ್ ಆ್ಯಂಡ್ ರೆಸ್ಟೊರೆಂಟ್ ಓಪನ್!

ಬೆಂಗಳೂರು, ಆ. 30: ಕೊನೆಗೂ ಮದ್ಯ ಪ್ರಿಯರ ಒತ್ತಡಕ್ಕೆ ರಾಜ್ಯ ಬಿಜೆಪಿ ಸರ್ಕಾರ ಮಣಿದಿದೆ. ಕೋವಿಡ್ ಸಾಂಕ್ರಾಮಿಕ ಸೋಂಕಿನ ಹಿನ್ನೆಲೆಯಲ್ಲಿ ಕಳೆದ ಐದು ತಿಂಗಳುಗಳ ಹಿಂದೆ ಬಂದ್ ಆಗಿದ್ದ ಪಬ್, ಬಾರ್ ಹಾಗೂ ರೆಸ್ಟೊರೆಂಟ್‌ಗಳನ್ನು ತೆರೆಯಲು ರಾಜ್ಯ ಸರ್ಕಾರ ಅನುಮತಿ ಕೊಡಲಿದೆ. ಈ ಬಗ್ಗೆ ನಾಳೆ (ಆ.30) ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಧಿಕೃತ ಆದೇಶ ಮಾಡಲಿದ್ದು, ಎಣ್ಣೆ ಪ್ರಿಯರು ನಾಡಿದ್ದು ಅಂದರೆ ಸೆ. 1 ರಿಂದ ಬಾರ್‌ಗಳಲ್ಲಿ ಕೂತು ಕುಡಿಯಬಹುದಾಗಿದೆ. ಪಬ್, ಬಾರ್ ಹಾಗೂ ರೆಸ್ಟೊರೆಂಟ್‌ಗಳನ್ನು ತೆರೆಯಲು ರಾಜ್ಯ ಸರ್ಕಾರ ಷರತ್ತುಬದ್ದ ಅನುಮತಿ ಕೊಡಲಿದೆ.

ಮದ್ಯ ಪ್ರಿಯರು, ಪಬ್‌ ಹಾಗು ಬಾರ್‌ಗಳ ಮಾಲೀಕರ ಬೇಡಿಕೆಗೆ ಕೇಂದ್ರ ಸರ್ಕಾರ ಸ್ಪಂದಿಸಿದೆ. ಬಾರ್ ಆ್ಯಂಡ್ ರೆಸ್ಟೋರೆಂಟ್, ಪಬ್‌ಗಳಲ್ಲಿ ಕುಳಿತು ಮದ್ಯ ಸೇವನೆಗೆ ಗ್ರೀನ್ ಸಿಗ್ನಲ್ ಸಿಗಲಿದೆ. ಸರ್ಕಾರ ಇಷ್ಟು ದಿನ ಮದ್ಯ ಮಾರಾಟಕ್ಕೆ ಅನುಮತಿ ಕೊಟ್ಟಿದ್ದರೂ, ಪಾರ್ಸೆಲ್ ತೆಗೆದುಕೊಂಡು ಹೋಗಲು ಮಾತ್ರ ಅವಕಾಶವಿತ್ತು. ಹೀಗಾಗಿ ಮನೆ, ರಸ್ತೆ ಪಕ್ಕದಲ್ಲಿ ಎಲ್ಲೆಂದರಲ್ಲಿ ಮದ್ಯ ಪ್ರಿಯರು ಮದ್ಯ ಸೇವನೆ ಮಾಡುತ್ತಿದ್ದ ಆರೋಪ ಎದುರಿಸಿದ್ದರು. ಇದೀಗ ಅರಾಮವಾಗಿ ಬಾರ್‌ಗಳಲ್ಲಿ ಕುಳಿತು ಕುಡಿಯಲು ಸರ್ಕಾರ ಅನುಮತಿಸಿದೆ.

ಸದ್ಯ ಬಾರ್‌, ರೆಸ್ಟೊರೆಂಟ್ ಹಾಗೂ ನಲ್ಲಿ ಕುಳಿತು ಕುಡಿಯೊದಕ್ಕೆ ಅವಕಾಶ ಕೊಟ್ಟಿರುವ ಹಿನ್ನೆಲೆಯಲ್ಲಿ ಮದ್ಯಪ್ರಿಯರು ಖುಷಿ ಮೂಡ್‌ನಲ್ಲಿದ್ದಾರೆ. ರೆಸ್ಟೊರೆಂಟ್, ಬಾರ್ ಅಥವಾ ಪಬ್‌ಗಳ ಒಟ್ಟು ಸಾಮರ್ಥ್ಯದಲ್ಲಿ ಶೇಕಡಾ 50 ರಷ್ಟು ಗ್ರಾಹಕರಿಗೆ ಮಾತ್ರ ಅನುಮತಿ ಕೊಡಲಾಗಿದೆ. ಅಂದರೆ 4 ಜನ ಕುಳಿತು ಕುಡಿಯುವ ಸ್ಥಳದಲ್ಲಿ ಇನ್ನು ಮುಂದೆ 2 ಮಂದಿ ಮಾತ್ರ ಕುಳಿತುಕೊಳ್ಳಲು ಅವಕಾಶವಿದೆ. ಉಳಿದಂತೆ ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡುವುದು ಕಡ್ಡಾಯವಾಗಲಿದೆ.

ಹೋಟೆಲ್‌ಗಳ ಮಾದರಿಯಲ್ಲಿ ಪಬ್, ಬಾರ್ ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಬಾರ್ ಮತ್ತು ರೆಸ್ಟೊರೆಂಟ್‌ಗಳಲ್ಲಿ ಹೊಟೆಲ್‌ನಂತೆಯೆ ಫೈಬರ್ ಗ್ಲಾಸ್ ಅಳವಡಿಸಿ ಪಾರ್ಟಿಶನ್ ಮಾಡಲು ಸಿದ್ದತೆ ಮಾಡಿಕೊಂಡಿದ್ದಾರೆ. ಒಟ್ಟರೆ ಕಳೆದ ಐದು ತಿಂಗಳುಗಳಿಂದ ಸ್ನೀಹಿತರು, ಡೆಬಲ್‌ ಮೇಟ್‌ಗಳೊದಿಗೆ ಕುಡಿಯದಿದ್ದವರು, ಸೆಪ್ಟಂಬರ್ 1 ರಿಂದ ಪಾರ್ಟಿ ಮಾಡಬಹುದಾಗಿದೆ.


ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.