ಸರ್ಕಾರಿ ನಿವಾಸದಲ್ಲಿ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿರುವ ವಿಕೃತ ಘಟನೆ!!;ಮೂವರು ಕಿರಾತಕರಿಂದ ಭೀಕರ ಕೃತ್ಯ
ರಾಜ್ಯ ಸರ್ಕಾರಿ ಅಧಿಕಾರಿಯೊಬ್ಬರ ಮೇಲೆ ಅವರದ್ದೇ ಸರ್ಕಾರಿ ನಿವಾಸದಲ್ಲಿ ನಂಬಲಸಾಧ್ಯವಾದ ವಿಕೃತಿಯೊಂದು ನಡೆದುಹೋಗಿದೆ. ಚನ್ನಪಟ್ಟಣ ತಹಶೀಲ್ದಾರ್ ಬಿ.ಎನ್.ಗಿರೀಶ್ ಅವರ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ, ದರೋಡೆ ಹಾಗೂ ಕೊಲೆ ಯತ್ನ ನಡೆದಿರುವ ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಫೇಸ್‌ಬುಕ್ ಸ್ನೇಹದ ಹೆಸರಿನಲ್ಲಿ ಮನೆಗೆ ಬಂದ ಮೈಸೂರು ಮೂಲದ ಮೂವರು ಕಿರಾತಕರು ಈ ಭೀಕರ ಕೃತ್ಯ ಎಸಗಿದ್ದಾರೆ.
ಈ ಸದ್ಯದ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿರುವ ಈ ವಿಕೃತ ಘಟನೆಯ ಸಂಪೂರ್ಣ ವಿವರ ಇಲ್ಲಿದೆ.
ಫೇಸ್‌ಬುಕ್‌ನಲ್ಲಿ ಶುರುವಾದ ಸ್ನೇಹ, ಮನೆ ಬಾಗಿಲಿಗೆ ಬಂದ ಯಮ!
ಮೈಸೂರು ಮೂಲದ ಅನುಶ್ ಎಂಬಾತನಿಗೆ ಚನ್ನಪಟ್ಟಣ ತಹಶೀಲ್ದಾರ್ ಬಿ.ಎನ್.ಗಿರೀಶ್ ಅವರ ಪರಿಚಯ ಫೇಸ್‌ಬುಕ್ ಮೂಲಕವಾಗಿತ್ತು. ಸೋಶಿಯಲ್ ಮೀಡಿಯಾ ಸ್ನೇಹವನ್ನೇ ಬಂಡವಾಳ ಮಾಡಿಕೊಂಡ ಅನುಶ್, ಜೂನ್ 28ರಂದು ತನ್ನ ಸ್ನೇಹಿತರಾದ ಶೋಭರಾಜನ್ ಮತ್ತು ನವೀನ್ ಎಂಬುವವರ ಜೊತೆ ಚನ್ನಪಟ್ಟಣದಲ್ಲಿರುವ ತಹಶೀಲ್ದಾರ್ ಅವರ ಸರ್ಕಾರಿ ನಿವಾಸಕ್ಕೆ ಬಂದಿದ್ದನು. ಅತಿಥಿಗಳೆಂದು ನಂಬಿ ಬರಮಾಡಿಕೊಂಡ ತಹಶೀಲ್ದಾರ್‌ಗೆ ಮುಂದಾಗಲಿರುವ ಘೋರ ದುರಂತದ ಸಣ್ಣ ಸುಳಿವೂ ಇರಲಿಲ್ಲ.
ಜ್ಯೂಸ್‌ನಲ್ಲಿ ಪ್ರಜ್ಞೆ ತಪ್ಪಿಸುವ ಮಾತ್ರೆ: ಆಮೇಲೆ ನಡೆದದ್ದು ರಾಕ್ಷಸಿ ವಿಕೃತಿ!
ದೂರಿನ ಅನ್ವಯ, ಅಂದು ರಾತ್ರಿ ತಹಶೀಲ್ದಾರ್ ನಿವಾಸದಲ್ಲೇ ಮದ್ಯಪಾನ ಮಾಡಿದ್ದ ಆರೋಪಿಗಳು, ನಂತರ ಗಿರೀಶ್ ಅವರಿಗೆ ನೀಡಿದ್ದ ಜ್ಯೂಸ್‌ನಲ್ಲಿ ಮಂಕುಬೂದಿ ಅಥವಾ ಪ್ರಜ್ಞೆ ತಪ್ಪಿಸುವ ಮಾತ್ರೆಗಳನ್ನು ಬೆರೆಸಿದ್ದರು. ಜೂಸ್ ಕುಡಿದ ತಹಶೀಲ್ದಾರ್ ಪ್ರಜ್ಞೆ ಕಳೆದುಕೊಳ್ಳುತ್ತಿದ್ದಂತೆ ಆರೋಪಿಗಳು ತಮ್ಮ ಅಸಲಿ ರಾಕ್ಷಸಿ ರೂಪವನ್ನು ಹೊರಹಾಕಿದ್ದಾರೆ. ಗಿರೀಶ್ ಮೈಮೇಲಿದ್ದ ಬಟ್ಟೆಗಳನ್ನು ಬಿಚ್ಚಿ, ಅಸಹಜವಾಗಿ ಲೈಂಗಿಕ ಕಿರುಕುಳ ನೀಡಿ ವಿಕೃತಿ ಮೆರೆದಿದ್ದಾರೆ.
ಬರೆದರು ದರೋಡೆ ಸ್ಕೆಚ್: 10 ಲಕ್ಷಕ್ಕೆ ಬೇಡಿಕೆ, ಕೊಲೆ ಯತ್ನ!
ಲೈಂಗಿಕ ದೌರ್ಜನ್ಯ ಎಸಗಿದ್ದಷ್ಟೇ ಅಲ್ಲದೆ, ಗಿರೀಶ್ ಮೈಮೇಲಿದ್ದ ಚಿನ್ನದ ಸರ ಮತ್ತು ಉಂಗುರಗಳನ್ನು ಆರೋಪಿಗಳು ದರೋಡೆ ಮಾಡಿದ್ದಾರೆ. ಅಷ್ಟಕ್ಕೇ ನಿಲ್ಲದ ಈ ಗ್ಯಾಂಗ್, ಬರೋಬ್ಬರಿ 10 ಲಕ್ಷ ರೂಪಾಯಿ ಹಣ ನೀಡುವಂತೆ ತಹಶೀಲ್ದಾರ್‌ಗೆ ತೀವ್ರ ಬೆದರಿಕೆ ಹಾಕಿದೆ. ಗಿರೀಶ್ ಹಣ ನೀಡಲು ನಿರಾಕರಿಸಿದಾಗ, ಅವರನ್ನು ಕೊಲೆ ಮಾಡಲು ಸಹ ಯತ್ನಿಸಿದ್ದಾರೆ ಎನ್ನಲಾಗಿದೆ. ಜೂನ್ 29ರಂದು ನಡೆದ ಈ ಇಡೀ ಘಟನೆಯಿಂದ ತಹಶೀಲ್ದಾರ್ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸಂಪೂರ್ಣ ಜರ್ಜರಿತರಾಗಿದ್ದಾರೆ.
ಮುಖ್ಯ ಮಾಹಿತಿ:
ಘಟನೆ ನಡೆದ ಸ್ಥಳ: ತಹಶೀಲ್ದಾರ್ ಬಿ.ಎನ್.ಗಿರೀಶ್ ಅವರ ಚನ್ನಪಟ್ಟಣದ ಸರ್ಕಾರಿ ನಿವಾಸ.
ಪ್ರಮುಖ ಆರೋಪಿಗಳು: ಅನುಶ್ (ಎ1 - ಬಂಧಿತ), ಶೋಭರಾಜನ್ ಮತ್ತು ನವೀನ್ (ತಲೆಮರೆಸಿಕೊಂಡಿದ್ದಾರೆ).
ದೂರು ದಾಖಲಾದ ಠಾಣೆ: ಚನ್ನಪಟ್ಟಣ ಟೌನ್ ಪೊಲೀಸ್ ಠಾಣೆ.
ಖಾಕಿ ಆ್ಯಕ್ಷನ್: ಎ1 ಆರೋಪಿ ಅರೆಸ್ಟ್, ಬಾಕಿಯವರಿಗಾಗಿ ತಲಾಶ್!
ಈ ಭೀಕರ ಘಟನೆಗೆ ಸಂಬಂಧಿಸಿದಂತೆ ತಹಶೀಲ್ದಾರ್ ಬಿ.ಎನ್.ಗಿರೀಶ್ ಅವರು ನೀಡಿದ ಅಧಿಕೃತ ದೂರಿನ ಮೇರೆಗೆ ಚನ್ನಪಟ್ಟಣ ಟೌನ್ ಪೊಲೀಸರು ತಕ್ಷಣವೇ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.
ಸದ್ಯ ಪ್ರಕರಣದ ಪ್ರಮುಖ ಆರೋಪಿ (A1) ಅನುಶ್‌ನನ್ನು ಪೊಲೀಸರು ಈಗಾಗಲೇ ಬಂಧಿಸಿ ಜೈಲಿಗಟ್ಟಿದ್ದಾರೆ. ಇನ್ನುಳಿದ ಇಬ್ಬರು ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Leave a Comment