ಶಿವಮೊಗ್ಗ :ಸೈಜುಕಲ್ಲು ಎತ್ತಿಹಾಕಿ ಅಜ್ಜಿಯನ್ನು ಕೊಲೆ ಮಾಡಿದ ಆರೋಪಿ ಕಾಲಿಗೆ ಗುಂಡು!!:ಆರೋಪಿ ಬಂಧನ- ಆಸ್ಪತ್ರೆಗೆ ದಾಖಲು
ಶಿವಮೊಗ್ಗ: ಗಾಂಜಾ ವಿರುದ್ಧ ದೂರು ಕೊಡಲು ಹೊರಟ ಅಜ್ಜಿ ಮೇಲೆ ಸೈಜುಕಲ್ಲು ಎತ್ತಿಹಾಕಿ ಕೊಲೆ ಮಾಡಿದ ಆರೋಪಿಯನ್ನು ಪೋಲೀಸರು ಬಂಧಿಸಲು ಹೋದಾಗ ಚಾಕುವಿನಿಂದ ಪೋಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪಿ ಕಿಶೋರ್ ಮೇಲೆ ಕಾಲಿಗೆ ಗುಂಡೇಟು ಹೊಡೆದು ದೋಡ್ಡಪೇಟೆ ಪೋಲೀಸರು ಬಂಧಿಸಿದ ಘಟನೆ ಇಂದು ನಡೆದಿದೆ.
ಇದೀಗ ಬಂಧಿತ ಆರೋಪಿ ಗಾಯಾಳು ಕಿಶೋರ್ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಶಿವಮೊಗ್ಗ ಜಿಲ್ಲೆ ದೊಡ್ಡಪೇಟೆ ಪೊಲೀಸ್ ಠಾಣೆ *ಗುನ್ನೆ ನಂ : 236/2026 u/s 103(1) BNS ರಲ್ಲಿ ಆರೋಪಿ ಪತ್ತೆಗಾಗಿ ಪಿ.ಐ. ದೊಡ್ಡಪೇಟೆ* ಹಾಗೂ ಸಿಬ್ಬಂದಿರವರು ತೆರಳಿದಾಗ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ವಾಜಪೇಯಿ ಬಡಾವಣೆಯಲ್ಲಿ *ಆರೋಪಿ ಕಿಶೋರ್ 26 ವರ್ಷ ದಸ್ತಗಿರಿ ಮಾಡಲು ಹೋದಾಗ* ಆರೋಪಿ ಕಿಶೋರನಿಗೆ ಪಿ ಐ ದೊಡ್ಡಪೇಟೆ ರವರು *ಶರಣಾಗುವಂತೆ ಎಚ್ಚರಿಕೆ ನೀಡಿದರು ತನ್ನ ಬಳಿ ಇದ್ದ ಚಾಕುವಿನಿಂದ ಸಿಬ್ಬಂದಿ ಗಣೇಶ್ CPC-1070 ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು* ಪ್ರಯತ್ನಿಸಿರುತ್ತಾನೆ.
ಪಿ ಐ ದೊಡ್ಡಪೇಟೆ ರವರು *ಸಿಬ್ಬಂದಿರವರ ರಕ್ಷಣೆಗಾಗಿ ಒಂದು ಸುತ್ತು ಗುಂಡನ್ನು ಗಾಳಿಯಲ್ಲಿ ಹಾರಿಸಿ ಎಚ್ಚರಿಕೆ ನೀಡಿದರು ಶರಣಾಗದೆ ಇದ್ದಾಗ ಮತ್ತೊಂದು ಸುತ್ತು ಗುಂಡನ್ನು ಆರೋಪಿ ಕಿಶೋರನ ಎಡಗಾಲಿಗೆ ಹಾರಿಸಿದ್ದು* ತಕ್ಷಣ ಕಂಟ್ರೋಲ್ ರೂಮ್ ಗೆ ಕರೆ ಮಾಡಿ ತಿಳಿಸಿದ್ದು, ಇಲಾಖಾ ವಾಹನದಲ್ಲಿಯೇ ಸಿಬ್ಬಂದಿ ಗಣೇಶ್ ಹಾಗೂ ಆರೋಪಿ ಕಿಶೋರನನ್ನು ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತಾರೆ.
ತನ್ನ ಮೊಮ್ಮಗ ಗಾಂಜಾ ವಿರುದ್ದ ದೂರು ಕೊಡಲು ದೊಡ್ಡಪೇಟೆ ಪೊಲೀಸ್ ಠಾಣೆಗೆ ಹೊರಟಿದ್ದ ಅಜ್ಜಿಯ ಮೇಲೆ ಹಲ್ಲೆ ಮಾಡಿದ ಗಾಂಜಾ ಗಿರಾಕಿ ಯುವಕ ಆಕೆ ಕೆಳಕ್ಕೆ ಬೀಳುತ್ತಿದ್ದಂತೆಯೇ ತಲೆಯ ಮೇಲೆ ಸೈಜುಕಲ್ಲು ಹಾಕಿ ಭೀಕರವಾಗಿ ಕೊಂದಿರುವ ಘಟನೆ ಶಿವಮೊಗ್ಗದ ಮಿಳಘಟ್ಟ ವಾರ್ಡಿನ ಆನಂದರಾವ್ ಬಡಾವಣೆಯಲ್ಲಿ ಬುಧವಾರ ಸಂಜೆ ನಡೆದಿದೆ.
ಆನಂದರಾವ್ ಬಡಾವಣೆಯ ತಖ್ವಾ ಮಸೀದಿ ಬಳಿಯ ರಸ್ತೆಯಲ್ಲಿಯೇ ಈ ಭೀಕರ ಘಟನೆ ನಡೆದಿದೆ.
ತನ್ನ ಅಜ್ಜಿಯನ್ನು ಹೀಗೆ ಕೊಂದಾತ ಯುವಕ ಕಿಶೋರ್ ಎಂದು ಹೇಳಲಾಗಿದ್ದು, ಅಜ್ಜಿ ತನ್ನ ಮೊಮ್ಮಗನ ಗಾಂಜಾ ಚಾಳಿಯ ವಿರುದ್ಧ ಪದೇ ಪದೇ ಪೊಲೀಸರಿಗೆ ದೂರು ನೀಡುತ್ತಿದ್ದಳು. ಇವತ್ತು ಸಂಜೆ ಕೂಡ ದೂರು ನೀಡಲು ಹೊರಟಾಗ ಆಕೆಯ ಮೊಮ್ಮಗನೇ ಕೆಳಕ್ಕೆ ಬೀಳಿಸಿ ಸೈಜ್ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ.

Leave a Comment