ಬಂಗಾರ ಲೇಪಿತ ನಕಲಿ ಬಂಗಾರ ಗಿರವಿ ಇಟ್ಟು ವಿವಿಧ ಬ್ಯಾಂಕುಗಳಲ್ಲಿ ಗೋಲ್ಡ್ ಲೋನ್ : 5 ಜನ ಆರೋಪಿಗಳ ಬಂಧನ

ಶಿವಮೊಗ್ಗ:   ದಿನಾಂಕ 03/07/2026  ರಂದು ಸಂಜೆ 07.30 ಗಂಟೆಗೆ ಪಿರ್ಯಾದಿ *ದಾರವತೋ ಕ್ರಾಂತಿಕುಮಾರ್ ಶಾಖಾ ವ್ಯವಸ್ಥಾಪಕರು, ಪಂಜಾಬ್ ನ್ಯಾಷನಲ್ ಬ್ಯಾಂಕ್, ಸಾವರ್ ಲೇನ್ ಶಾಖೆ, ಶಿವಮೊಗ್ಗ ರವರು* ಆರೋಪಿತರು ಬಂಗಾರ ಲೇಪಿತ ನಕಲಿ ಬಂಗಾರಗಳನ್ನು ಗಿರವಿ ಇಟ್ಟು  ಗೋಲ್ಡ್ ಲೋನ್ ಪಡೆದಿರುವ ಬಗ್ಗೆ ದೂರು ನೀಡಿದ ಮೇರೆಗೆ ದೊಡ್ಡಪೇಟೆ ಠಾಣೆಯಲ್ಲಿ ‌FIR ದಾಖಲು ಆಗಿರುತ್ತದೆ.
ದೊಡ್ಡಪೇಟೆ ಠಾಣೆಯ ಇನ್ಸ್ಪೆಕ್ಟರ್ ಸತ್ಯನಾರಾಯಣ ರವತು  ಗುನ್ನೆ ನಂ. 239/2026 ಕಲಂ: 61(1), 318(4) ಸಹಿತ 3(5) ಬಿಎನ್ಎಸ್ 2023 ರೀತ್ಯಾ ಪ್ರಕರಣದ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

  ನಂತರ ತನಿಖೆ ಮುಂದುವರಿದು ಎ1 ಆರೋಪಿ ಲೋಕೇಶ ಬಿನ್ ಜಯಚಂದ್ರ 39 ವರ್ಷ ವಾಸ ಬಿಳ್ಮನೆ ಅರೆಕಲ್ಲು ಗ್ರಾಮ ಮೇಗರವಳ್ಳಿ ತಿರ್ಥಹಳ್ಳಿ ತಾ; ರವರನ್ನು ದಸ್ತಗಿರಿ ಮಾಡಿರುತ್ತಾರೆ.  

ಆರೋಪಿ ಸ್ವ ಇಚ್ಛಾ ಹೇಳಿಕೆ ಮೇರೆಗೆ ಈ ಕೆಳಕಂಡ *ವಿವಿಧ ಬ್ಯಾಂಕುಗಳಲ್ಲಿ ಮತ್ತು ಜ್ಯೂವೆಲರಿ ಶಾಪ್ ನಲ್ಲಿ ಬಂಗಾರ ಲೇಪಿತ ನಕಲಿ ಆಭರಣಗಳನ್ನು ಇಟ್ಟು ಗೋಲ್ಡ್ ಲೋನ್* ಪಡೆದಿರುವುದಾಗಿ ತಿಳಿಸಿರುತ್ತಾನೆ.  

*ವಿವರ ಕೆಳಕಂಡಂತಿರುತ್ತದೆ.*
ಪಂಜಾಬ್ ನ್ಯಾಶನಲ್ ಬ್ಯಾಂಕ್ ಸವಾರ್ ಲೈನ್ ರಸ್ತೆ ಶಿವಮೊಗ್ಗ ದಲ್ಲಿ 163.300 ಗ್ರಾಂ ಅಡ ಇಟ್ಟು  7,62,557/-  ರೂ ಸಾಲ 
ವರ್ತಕರ ಸೌಹಾರ್ಧ ಸಂಘ  ನಿಯಮಿತ ತೀರ್ಥಹಳ್ಳಿ ದಲ್ಲಿ 75.844 ಗ್ರಾಂ ಅಡ ಇಟ್ಟು  9,33,000/- ರೂ ಸಾಲ
ಸಿರಿ ಸೌಹಾರ್ಧ ಕ್ರೆಡಿಟ್ ಆಪರೇಟಿವ್ ಸಂಘ, ಆಲ್ಕೋಳ  ಶಿವಮೊಗ್ಗ ದಲ್ಲಿ 75.01 ಗ್ರಾಂ  ಅಡ ಇಟ್ಟು   7,43,000/- ರೂ ಸಾಲಡಿ.ಸಿ.ಸಿ ಬ್ಯಾಂಕ್ ಗೋಪಾಳ ಶಿವಮೊಗ್ಗ ದಲ್ಲಿ  48.28 ಗ್ರಾಂ ಅಡ ಇಟ್ಟು  1,79,000/- ರೂ ಸಾಲ
ಇಂಡಿಯನ್ ಓವರ್ಸಿಸ್ ಬ್ಯಾಂಕ್ ಸವಾರ್ ಲೈನ್ ರಸ್ತೆ  ಶಿವಮೊಗ್ಗ ದಲ್ಲಿ 26.490 ಗ್ರಾಂ ಅಡ ಇಟ್ಟು    1,10,000/- ರೂ ಸಾಲ
ಗುಲಾಬಿ ಜ್ಯೂವೆಲರಿ ವರ್ಕ್ಸ  ನೇತಾಜಿ ಸರ್ಕಲ್ ಶಿವಮೊಗ್ಗ ದಲ್ಲಿ  30.90 ಗ್ರಾಂ  ಅಡ ಇಟ್ಟು  1,90,000/- ರೂ ಸಾಲ 
*ಒಟ್ಟು  419.824 ಗ್ರಾಂ ಅಡ ಇಟ್ಟು  28,87,237/- ರೂ ಸಾಲ ಪಡೆದಿರುತ್ತಾನೆ.* 

*ಆರೋಪಿಗಳ ವಿವರ:* 
1) ಲೋಕೇಶ ಬಿ.ಜೆ ತಂದೆ ಜಯಚಂದ್ರ, 39 ವರ್ಷ, ವಾಸ: ಬಿಳ್ಮನೆ ಅರೆಕಲ್ಲು ಗ್ರಾಮ, ತೀರ್ಥಹಳ್ಳಿ ತಾಲ್ಲೂಕು, 
 2) ಶ್ರೀಮತಿ ಸುಧಾ ಹೆಚ್ ಕೋಂ ಪ್ರತಾಪ ನಾಯಕ್ ಮಲವಗೊಪ್ಪ ಶಿವಮೊಗ್ಗ. 
3) ಎಸ್.ವೈ ರವಿಶಂಕರ್ ಬಿನ್ ಯಲ್ಲಪ್ಪ ಗೋಲ್ಡ್ ಅಪ್ರೈಸರ್ ಪಂಜಾಬ್ ನ್ಯಾಶನಲ್ ಬ್ಯಾಂಕ್ ಶಿವಮೊಗ್ಗ 
 4) ರಾಹುಲ್ ಬಿನ್ ಬಾಸ್ಕರ್, 26 ವರ್ಷ, ಬಗ್ಗೋಡಿಗೆ ಗ್ರಾಮ, ಶಿರೂರು  ಪೊಸ್ಟ್, ತೀರ್ಥಹಳ್ಳಿ ತಾಲ್ಲೂಕು. 
5) ಶರತ್ ಬಿನ್ ನಾಗರಾಜ್ ವೈಟ್ ಗೋಲ್ಡ್ & ಬ್ರೈಟ್ ಗೋಲ್ಡ್ ಬಿವರ್ಸ್ ನಲ್ಲಿ ಮ್ಯಾನೇಜರ್ ಕೆಲಸ, ವಾಸ 
 ಮೃಗವಧೆ,  ತೀರ್ಥಹಳ್ಳಿ ತಾಲ್ಲೂಕ್ ಶಿವಮೊಗ್ಗ ಜಿಲ್ಲೆ 
 
*1ನೇ ಆರೋಪಿಯು ಗಿರವಿ ಇಟ್ಟಿದ್ದ 419.824  ಗ್ರಾಂ ನಕಲಿ ಬಂಗಾರ, ಒಟ್ಟು  28,87,237/-ರೂ. ಬೆಲೆಯ ಆಭರಣಗಳನ್ನು ಮಹಜರ್ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತದೆ.* 
• * ಆರೋಪಿ ಸಂಖ್ಯೆ 2, 4 ಮತ್ತು 5 ರವರು ಇದೇ ರೀತಿ ನಕಲಿ ಬಂಗಾರವನ್ನು ಬೇರೆ ಬೇರೆ ಬ್ಯಾಂಕುಗಳಲ್ಲಿ ಗಿರವಿ ಇಟ್ಟು ಸಾಲ ಪಡೆದಿರುವ ಶಂಕೆ ಇದ್ದು, ಅವರುಗಳನ್ನು ದಸ್ತಗಿರಿ ಮಾಡಿ ಅಡವಿಟ್ಟಿರುವ ಆಭರಣಗಳನ್ನು ವಶಪಡಿಸಿಕೊಳ್ಳಲು ಬಾಕಿ ಇರುತ್ತದೆ.* 
           ಸತ್ಯನಾರಾಯಣ ಪಿಐ, ಪಿಎಸ್ಐ ನಾರಾಯಣ ಮಧುಗಿರಿ,  ಸಿಬ್ಬಂದಿಯವರಾದ ಶ್ರೀ ಚೂಡಾಮಣಿ ಎಎಸ್ಐ, ಪುನೀತ್ , , ಸಂದೀಪ್,   ಗುರುನಾಯ್ಕ,  ರಾಜೇಶ್ ಗೌಡ ಪಾಟೀಲ್, ಪುಟ್ಟಮ್ಮ ಎನ್.ರವರು ಪತ್ತೆ ಕಾರ್ಯದಲ್ಲಿ* ಬಾಗಿಯಾಗಿರುತ್ತಾರೆ.

ಶಿವಮೊಗ್ಗ ನಗರದಲ್ಲಿ ಸಹ ಅನೇಕ ಬ್ಯಾಂಕ್ ನಲ್ಲಿ ಬಂಗಾರ ಲೇಪಿತ ನಕಲಿ ಬಂಗಾರಗಳನ್ನು ಗಿರವಿ ಇಟ್ಟು  ಗೋಲ್ಡ್ ಲೋನ್ ಪಡೆದಿರುವ ಬಗ್ಗೆ ಹುಡುಕಿದರೇ ಇನ್ನಷ್ಟು ಪ್ರಕರಣಗಳು ಪತ್ತೆಯಾಗುತ್ತವೆ. ಒಂದು ತಂಡವೇ ಇದೆ ಇದತಲ್ಲಿ ಬ್ಯಾಂಕ್ ಸಿಬ್ಬಂದಿ ಗಳು ಮತ್ತು ಗೋಲ್ಡ್ ಅಪ್ರೆಸರ್ ಗಳು ಸಹ ಶಾಮೀಲು ಆಗಿರುವುದರಿಂದ ಈ ರೀತಿಯಲ್ಲಿ ಪ್ರಕರಣಗಳು ವರಧಿಯಾಗುತ್ತಿವೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ದೊಡ್ಡ ಪೇಟೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮತ್ತು ಅವರ ಪೊಲೀಸ್‌ ತಂಡದ ಕಾರ್ಯಾಚರಣೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.