ಶಿವಮೊಗ್ಗ ದೇವಸ್ಥಾನದ ಭೂ ಕಬಳಿಕೆ-ಕಟ್ಟಡ ಕಾಮಗಾರಿ ಪ್ರಕರಣ: ಎನ್.ಮಂಜುನಾಥ್ ಗೆ ಕಾಮಗಾರಿ ಸ್ಥಗಿತ ಗೊಳಿಸುವಂತೇ ಪಾಲಿಕೆಯಿಂದ ನೋಟಿಸ್ ಜಾರಿ-ಖಡಕ್ ಸೂಚನೆ; ಯಾರಿವನು?
ಶಿವಮೊಗ್ಗ ನ್ಯಾಯಾಲಯದ ತಾತ್ಕಾಲಿಕ ತಡೆಯಾಜ್ಞೆ ಆದೇಶ ಹಿನ್ನೆಲೆ ಕಟ್ಟಡದ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಶಿವಮೊಗ್ಗ ಮಹಾನಗರ ಪಾಲಿಕೆಯ ಸಹಾಯಕ ಕಾರ್ಯ ಪಾಲಕ ಅಭಿಯಂತರವರಿಂದ ಎನ್.ಮಂಜುನಾಥ್ ರವರಿಗೆ ತಿಳುವಳಿಕೆಯ ಪತ್ರ ಜಾರಿ
ಶಿವಮೊಗ್ಗ: ಶಿವಮೊಗ್ಗ ಮಹಾನಗರಪಾಲಿಕ ವ್ಯಾಪ್ತಿಯ ವಾರ್ಡ್ ನಂ. 20 ರ ಹೊಸಮನೆಯಲ್ಲಿರುವ ಶ್ರೀ ದೊಡ್ಡಮ್ಮ ಜಲದುರ್ಗಮ್ಮ ದೇವಾಲಯದ ಪಕ್ಕದಲ್ಲಿರುವ 50X60 ವಿಸ್ತೀರ್ಣದ ಜಾಗದಲ್ಲಿ ಕಾನೂನು ಬಾಹಿರವಾಗಿಕಟ್ಟಡ ಕಟ್ಟುತ್ತಿದ್ದು, ಸದರಿ ಜಾಗಕ್ಕೆ ಬಿ-ಖಾತೆ ಮಾಡಿರುವ ಬಗ್ಗೆ, ಅವ್ಯವಹಾರ ನಡೆದಿದೆ ಎಂದು ಆರೋಪಿಸಿರುವ ದೂರು ಅರ್ಜಿಗೆ ಸಂಬಂಧಿಸಿದಂತೆ ಮತ್ತು ಶಿವಮೊಗ್ಗ ನ್ಯಾಯಾಲಯವು ಕಟ್ಟಡದ ಕಾಮಗಾರಿಯನ್ನು ನಡೆಸದಂತೆ ತಾತ್ಕಾಲಿಕ ತಡೆಯಾಜ್ಞೆ ಆದೇಶ ನೀಡಿರುವುದರಿಂದ ಕೂಡಲೇ ಕಟ್ಟಡ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಶಿವಮೊಗ್ಗ ಮಹಾನಗರ ಪಾಲಿಕೆಯ ಸಹಾಯಕ ಕಾರ್ಯ ಪಾಲಕ ಅಭಿಯಂತರವರು ಇಂದು ಎನ್.ಮಂಜುನಾಥ್ ರವರಿಗೆ ತಿಳುವಳಿಕೆಯ ಪತ್ರ ನೀಡಲು ಬಂದಾಗ ಸಿಗದೇ ಇದ್ದ ಕಾರಣ ಸದರಿ ಕಟ್ಟಡ ಕಾಮಗಾರಿ ನಡೆಯುತ್ತಿರುವ ಜಾಗದ ಪಿಲ್ಲರ್ ಗೆ ತಿಳುವಳಿಕೆಯ ಪತ್ರದ ನೋಟಿಸ್ ಅಂಟಿಸಿ ಹೋದ ಪ್ರಕರಣ ಬೆಳಕಿಗೆ ಬಂದಿದೆ.
ಶಿವಮೊಗ್ಗದ ನ್ಯಾಯಾಲಯದ ತಡೆಯಾಜ್ಞೆ ಆದೇಶದ ಪ್ರತಿ
ಶಿವಮೊಗ್ಗ ಮಹಾನಗರ ಪಾಲಿಕೆಯ ಆಯುಕ್ತರಿಗೆ ಶ್ರೀ ಕಾಮಾಕ್ಷಿ ಪ್ರಸನ್ನ ಶ್ರೀ ದೊಡ್ಡಮ್ಮ-ಜಲದುರ್ಗಮ್ಮ ದೇವಾಲಯ ಸಮಿತಿಯ ಪ್ರಧಾನ ಕಾರ್ಯದರ್ಶಿ, (ರಿ), ಬನಶಂಕರಿ ಬಡಾವಣೆ,
ಹೂಸಮನೆ, ಶಿವಮೊಗ್ಗ ರವರು ಸಲ್ಲಿಸಿರುವ ದೂರು ಅರ್ಜಿ ದಿನಾಂಕ:30-04-2026.ಶಿವಮೊಗ್ಗ ಮಹಾನಗರ ಪಾಲಿಕೆ ಕಮೀಷನರ್ ರವರ ಕಛೇರಿಯ ಅಧಿಕೃತ ಜ್ಞಾಪನ ಸಂಖ್ಯೆ :ಕ್ರ.ಸಂ./ಶಿಮಪಾ/ಆ.ಆ.ಶಾಖ/20/14/2026-27 00:30-04-2026.
ಹಾಗೂ VACATION COURT, SHIVAMOGGA, CNR Number:KA14060000292026, Case Number: O.S./0000026/2026 desA05:14/05/2026 ರ ಕಾನೂನು ರೀತ್ಯಾ ಸೂಕ್ತವಾದ ಕ್ರಮಕೈಗೊಂಡು ಎನ್ .ಮಂಜುನಾಥ್ ರವರಿಗೆ ತಿಳುವಳಿಕೆಯ ಪತ್ರವನ್ನು ನೀಡಿ ಅಗತ್ಯವಾದ ಕ್ರಮ ಕೈಗೊಂಡಿರುವುದಾಗಿ ತಿಳಿದುಬಂದಿದೆ.
*ಏನಿದು ಪ್ತಕರಣ:* ಶಿವಮೊಗ್ಗ ನಗರದಹೊಸಮನೆಯಲ್ಲಿರುವ ಶ್ರೀ ದೊಡ್ಡಮ್ಮ ಜಲದುರ್ಗಮ್ಮ ದೇವಾಲಯದ ಪಕ್ಕದಲ್ಲಿರುವ 50X60 ವಿಸ್ತೀರ್ಣದ ಜಾಗದಲ್ಲಿ (PID 41532) ಈಗಾಗಲೇ ಸಮುದಾಯ ಭವನ ನಿರ್ಮಾಣ ಮಾಡಲು
ಪರವಾನಿಗೆಯನ್ನು ಶಿವಮೊಗ್ಗ ಮಹಾನಗರ ಪಾಲಿಕೆಯಿಂದ ನೀಡಲಾಗಿರುತ್ತದೆ. ಆದರೆ, ಎನ್. ಮಂಜುನಾಥ್, ಕ್ರಾಂತಿದೀಪ ಪತ್ರಿಕೆ ಸಂಪಾದಕರು ಹಾಗೂ ಅಂತರಘಟ್ಟಮ್ಮ ದೇವಾಲಯದ ಅಧ್ಯಕ್ಷರುಗಳು ಕಾನೂನು ಬಾಹಿರವಾಗಿ ಕಟ್ಟಡ ಕಟ್ಟುತ್ತಿದ್ದು, ಸದರಿ ಜಾಗಕ್ಕೆ ಪಾಲಿಕೆಯ ಅಧಿಕಾರಿಗಳು ಸರಿಯಾದ
ದಾಖಲೆಗಳನ್ನು ಪರಿಶೀಲಿಸದೆ ಬಿ-ಖಾತೆ ಮಾಡಿಕೊಟ್ಟಿದ್ದು, ಈ ಬಗ್ಗೆ ಅವ್ಯವಹಾರ ನಡೆದಿದ್ದು,ಸದರಿ ವಿಷಯದ ಕುರಿತು ಬಿ-ಖಾತೆ ಮತ್ತು ಕಟ್ಟಡ ನಿರ್ಮಾಣದ ಪರವಾನಿಗೆ ನೀಡಿರುವ ಕುರಿತು
ಪರಿಶೀಲಿಸಿ ಪ್ರಸ್ತುತ ನಡೆಯುತ್ತಿರುವ ಕಟ್ಟಡ ನಿರ್ಮಾಣದ ಕಾಮಗಾರಿಯನ್ನು ರದ್ದುಗೊಳಿಸಲು
ಪಾಲಿಕೆಯ ತಿಳುವಳಿಕೆಯ ನೋಟಿಸ್ ನಲ್ಲಿ ಏನಿದೆ? ಪಾಲಿಕೆಯ ಕಂದಾಯ ವಿಭಾಗ, ಕಟ್ಟಡ ಪರವಾನಿಗೆ ವಿಭಾಗ ಹಾಗೂ ಭೂ ಮಾಪಕರೊಂದಿಗೆ
ಸ್ಥಳ ಪರಿಶೀಲಿಸಲಾಗಿ, ಸದರಿ ಸ್ಥಳದಲ್ಲಿ ಕಟ್ಟಡ ನಿರ್ಮಾಣವು ಪುಗತಿಯಲ್ಲಿರುವುದು ಕಂಡುಬಂದಿರುತ್ತದೆ. ಸದರಿ ದೂರು ಅರ್ಜಿಗೆ ಸಂಬಂಧಿಸಿದಂತೆ ಅನುಮೋದಿತ ಕಟ್ಟಡ ವಿನ್ಯಾಸದ ನಕ್ಷೆಯಂತೆ ಕಟ್ಟಡ ನಿರ್ಮಿಸದಿರುವ ಬಗ್ಗೆ ಈ ತಿಳುವಳಿಕೆ ಪತ್ರವನ್ನು
ಜಾರಿಗೊಳಿಸುತ್ತಿದ್ದು, ಸದರಿ ಜಾಗಕ್ಕೆ ಸಂಬಂಧಿಸಿದ ತಮ್ಮ ಮಾಲೀಕತ್ವವನ್ನು ಸಾಬೀತುಪಡಿಸುವ ದಾಖಲೆಗಳು, ಕಟ್ಟಡ ಪರವಾನಿಗೆ ಪತ್ರವನ್ನು ಈ ತಿಳುವಳಿಕೆಯ ಪತ್ರ ತಲುಪಿದ
15 ದಿನಗಳ ಒಳಗಾಗಿ ಈ ಕಛೇರಿಗೆ ಹಾಜರಿಪಡಿಸುವುದು ಎಂದು ದಿನಾಂಕ 20-5-2026 ಪಾಲಿಕೆಯ ತಿಳುವಳಿಕೆಯ ಪತ್ರವನ್ನು ಕಟ್ಟಡ ಕಾಮಗಾರಿಯ ಪಿಲ್ಲರ್ ಗೆ ಅಂಟಿಸಲಾಗಿದೆ.
ಇದೀಗ ಶಿವಮೊಗ್ಗ ಮಹಾನಗರ ಪಾಲಿಕರಯ 6 ಜನ ಅಧಿಕಾರಿಗಳ ತನಿಖಾ ತಂಡ/ಪರಿಶೀಲನಾ ತಂಡ ಈ ವಿಷಯದ ಬಗ್ಗೆ ಸಮಗ್ರ ಪರಿಶೀಲನೆ
ಮುಂದುವರೆದಂತೆ ಶಿವಮೊಗ್ಗ ಮಾನ್ಯ ನ್ಯಾಯಾಲಯದ ತೀರ್ಪಿನ
ಆದೇಶಾನುಸಾರ ಸದರಿ ಜಾಗಕ್ಕೆ “ನಿರ್ಬಂಧಕಾಜ್ಞೆ
ಜಾರಿಯಲ್ಲಿರುವುದು ಕಂಡುಬಂದಿರುತ್ತದೆ. ಈ ಅಂಶಗಳ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಾಲಯದ ಮಧ್ಯಂತರ
ತೀರ್ಪಿನ ಅನುಸಾರ ಹಾಗೂ ಉಲ್ಲೇಖ(2) ರ ಅನುಸಾರ ತನಿಖಾ ತಂಡ ವರದಿನೀಡುವ ವರೆವಿಗೂ ಸದರಿ ಕಟ್ಟಡ ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸಲು ಕಟ್ಟು ನಿಟ್ಟಿನ ಸೂಚನೆ
ಮೂಲಕ ತಿಳುವಳಿಕೆಯ ಪತ್ರದ ನೋಟಿಸ್ ನ್ನು ಎನ್.ಮಂಜುನಾಥ್,ಅಧ್ಯಕ್ಷರು,
ಅಂತರಘಟ್ಟಮ್ಮ ದೇವಾಲಯ ಸೇವಾ ಸಮಿತಿ(ರಿ),
3ನೇ ಅಡ್ಕ ರಸ್ತೆ, ಹೊಸಮನೆ ಬಡಾವಣೆ,
ಶಿವಮೊಗ್ಗ. (ಫೋನ್ ನಂ.9448628499)ರವರಿಗೆ ಸಹಾಯಕ ಕಾರ್ಯಪಾಲಕ ಅಭಿಯಂತರರು(ವ.ಕ.01),
ಇದೀಗ ಸದರಿ ವಿವಾದದ ಜಾಗದಲ್ಲಿ ಯಾವುದೇ ಕಾಮಗಾರಿಯನ್ನು ನಡೆಯದಂತೆ ನೋಡಿಕೊಳ್ಳಬೇಕೆಂದು ದೊಡ್ಡಮ್ಮ ಜಲದುರ್ಗಮ್ಮ ದೇವಸ್ಥಾನದ ಸಾದುಶೆಟ್ಟಿ ಜನಾಂಗದ ಮುಖಂಡರು ಇಂದು ಸಭೆ ಮಾಡಿ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ದೇವಸ್ಥಾನದ ಜಾಗವನ್ನು ಕಬಳಿಕೆ ಮಾಡಲು ಯತ್ನಿಸುತ್ತಿರುವ ಎನ್.ಮಂಜುನಾಥ್ ನಡೆಯನ್ನು ಖಂಡಿಸಿದ್ದಾರೆ.ಕಾಮಗಾರಿಯನ್ನು ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ. ನ್ಯಾಯಾಲಯದ ತಡೆಯಾಜ್ಞೆಯನ್ನು ತಿರಸ್ಕರಿಸಿ ಮತ್ತೆ ಕಾಮಗಾರಿಯನ್ನು ಮಾಡಿದಲ್ಲಿ ನಾವು ಅದನ್ನು ವಿರೋಧಿಸಿ ಪ್ರತಿಭಟಿಸುತ್ತೆವೆ ಎಂದು ಆಕ್ರೋಶ ವನ್ನು ಹೊರಹಾಕಿದ್ದಾರೆ.
ಸದರಿ ವಿವಾದಿತ ಜಾಗದಲ್ಲಿಯಾವುದೇ ಗಲಾಟೆ ಆಗದಂತೆ ಪೋಲಿಸರನ್ನು ನಿಯೋಜನೆ ಗೊಳಿಸಲಾಗಿದೆ.ಮುಂದೇನಾಗುವುದು ಕಾದು ನೋಡಬೇಕಿದೆ.

Leave a Comment