ಶಿವಮೊಗ್ಗ ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರ ಹುದ್ದೆಗೆ ಶ್ರೀ ಬಿ.ವಿ. ತುಕಾರಾಂ ಪ್ರಭಾರಿಯಾಗಿ ನೇಮಕ: ಸರ್ಕಾರದ ಆದೇಶ
ಬೆಂಗಳೂರು: ಶ್ರೀ ಬಿ.ವಿ. ತುಕಾರಾಂ ರಾವ್,ಸಹಾಯಕ ನಿರ್ದೇಶಕರುಕಚೇರಿ, ಬೆಂಗಳೂರು ಇವರನ್ನು ಶಿವಮೊಗ್ಗ ಜಿಲ್ಲಾ ಕಚೇರಿಯಲ್ಲಿ ಖಾಲಿ ಇರುವ ಹಿರಿಯ ಸಹಾಯಕ ನಿರ್ದೇಶಕರ ಹುದ್ದೆಗೆ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 68 ರಡಿ ಹೆಚ್ಚುವರಿ ಪ್ರಭಾರದಲ್ಲಿರಿಸಿದ ಆದೇಶ ಸರ್ಕಾರದ ಮತ್ತು ಕೇಂದ್ರವಾರ್ತಾ ಇಲಾಖೆಯಿಂದ ಆದೇಶ ಹೊರಬಿದ್ದಿದೆ. ದಿನಾಂಕ 11-5-2026 ರಂದು ಕೇಂದ್ರ ವಾರ್ತಾ ಇಲಾಖೆಯ ಆಯುಕ್ತರು ಹೇಮಂತ್ ಎಂ ನಿಂಬಾಳ್ವರ್, ಐ.ಪಿ.ಎಸ್ ಇವರು ಅಧಿಕೃತ ಜ್ಞಾನಪಪತ್ರವನ್ನು ಹೊರಡಿಸಿರುತ್ತಾರೆ.ಈ ಆದೇಶವು ತಕ್ಷಣದಿಂದ ಹಾಗೂ ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತದೆ.
ಸರ್ಕಾರದ ಅಧಿಸೂಚನೆಯಲ್ಲಿ ಆದೇಶಿಸಿರುವಂತೆ, ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕೆಳಕಂಡ ಅಧಿಕಾರಿಗಳನ್ನು ಅವರ ಹೆಸರಿನ ಮುಂದೆ ತೋರಿಸಿರುವ
ಕಚೇರಿ/ಸ್ಥಳಕ್ಕೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸ್ಥಳ ನಿಯುಕ್ತಿಗೊಳಿಸಿದೆ.
ವರ್ಗಾವಣೆ ಮಾಡಿ ನೇಮಿಸಿರುವ ಕಚೇರಿ
ಹೆಸರು ಮತ್ತು ಪದನಾಮ
ಶ್ರೀ ಬಿ.ವಿ. ತುಕಾರಾಂ ರಾವ್,
ಸಹಾಯಕ ನಿರ್ದೇಶಕರು
ಕಚೇರಿ, ಬೆಂಗಳೂರು
ಕೇಂದ್ರ ಕಚೇರಿಯ ಸುದ್ದಿ ಮತ್ತು ಪತ್ರಿಕಾ ಶಾಖೆ ಇಲ್ಲಿ ಖಾಲಿ ಇರುವ ಸಹಾಯಕ ನಿರ್ದೇಶಕ
ಹುದ್ದೆಯ ಜೊತೆಗೆ ಈಗಾಗಲೇ ಬಳ್ಳಾರಿ ಜಿಲ್ಲೆಯಲ್ಲಿ ನಿರ್ವಹಿಸುತ್ತಿರುವ ಹಿರಿಯ ಸಹಾಯಕ
(ಸ್ಥಳ ನಿರೀಕ್ಷಣೆಯಲ್ಲಿ), ಕೇಂದ್ರ | ನಿರ್ದೇಶಕರ ಪ್ರಭಾರದೊಂದಿಗೆ ಹಿರಿಯ ಸಹಾಯಕ ನಿರ್ದೇಶಕರ ಕಚೇರಿ,
ಶ್ರೀ ಬಿ.ವಿ. ತುಕಾರಾಂ ರಾವ್ ಇವರು ಕೇಂದ್ರ ಕಚೇರಿಯ ಸುದ್ದಿ ಮತ್ತು ಪತ್ರಿಕಾ ಶಾಖೆಯಲ್ಲಿ ಖಾಲಿ ಇರುವ ಸಹಾಯಕ
ನಿರ್ದೇಶಕರ ಹುದ್ದೆಯ ಪ್ರಭಾರವನ್ನು ವಹಿಸಿಕೊಂಡು ಈಗಾಗಲೇ ಬಳ್ಳಾರಿ ಜಿಲ್ಲೆಯಲ್ಲಿ ನಿರ್ವಹಿಸುತ್ತಿರುವ ಹಿರಿಯ ಸಹಾಯಕ
ನಿರ್ದೇಶಕರ ಪ್ರಭಾರವನ್ನು ಮುಂದುವರೆಯಲು ಸೂಚಿಸಿದೆ.
ಮುಂದುವರೆದು, ಶಿವಮೊಗ್ಗ ಜಿಲ್ಲಾ ಕಚೇರಿಯಲ್ಲಿ ಹಿರಿಯ ಸಹಾಯಕ ನಿರ್ದೇಶಕರ ಹುದ್ದೆಯ ಪ್ರಭಾರವನ್ನು ಹೆಚ್ಚುವರಿ
ಪ್ರಭಾರದಲ್ಲಿ ನಿರ್ವಹಿಸುತ್ತಿರುವ ಶ್ರೀ ಬಿ. ಧನಂಜಯಪ್ಪ ಇವರಿಂದ ವಹಿಸಿಕೊಂಡು ಮೇಲೆ ತಿಳಿಸಿರುವ ಕರ್ತವ್ಯದೊಂದಿಗೆ
ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 68 ರಡಿ ಹೆಚ್ಚುವರಿಯಾಗಿ ನಿರ್ವಹಿಸಲು ಸೂಚಿಸಿದೆ.
ಶ್ರೀ ಬಿ. ಧನಂಜಯಪ್ಪ, ಸಹಾಯಕ ನಿರ್ದೇಶಕರು ಇವರು ಶಿವಮೊಗ್ಗ ಜಿಲ್ಲಾ ಕಚೇರಿಯ ಹಿರಿಯ ಸಹಾಯಕ
ನಿರ್ದೇಶಕರ ಹುದ್ದೆಯ ಪ್ರಭಾರವನ್ನು ಶ್ರೀ ಬಿ. ವಿ. ತುಕಾರಾಂ ರಾವ್ ಇವರಿಗೆ ವಹಿಸಿಕೊಟ್ಟು ದಾವಣೆಗೆರೆ ಜಿಲ್ಲಾ ಕಚೇರಿಯ
ಸಹಾಯಕ ನಿರ್ದೇಶಕರ ಮೂಲ ಹುದ್ದೆಯೊಂದಿಗೆ ಇದೇ ಕಚೇರಿಯ ಹಿರಿಯ ಸಹಾಯಕ ನಿರ್ದೇಶಕರ ಹುದ್ದೆಯ ಪ್ರಭಾರವನ್ನು
ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 68 ರಡಿ ಹೆಚ್ಚುವರಿಯಾಗಿ ನಿರ್ವಹಿಸಲು ಹಾಗೂ ಹೊಸಪೇಟೆ ಜಿಲ್ಲಾ
ಕಚೇರಿಯ ಹಿರಿಯ ಸಹಾಯಕ ನಿರ್ದೇಶಕರ ಪ್ರಭಾರವನ್ನು ತಮ್ಮ ಹುದ್ದೆಯ ಕರ್ತವ್ಯದೊಂದಿಗೆ ಹೆಚ್ಚುವರಿಯಾಗಿ ನಿರ್ವಹಿಸಲು
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಈ ಕೆಳಕಂಡ ಅಧಿಕಾರಿಗಳನ್ನು ಅಡಳಿತಾತ್ಮಕ ಹಿತದೃಷ್ಟಿಯಿಂದ
ತಕ್ಷಣದಿಂದ ಜಾರಿಗೆ ಬರುವಂತೆ ದಿನಾಂಕ : 22-08-2025 ರ ಅಧಿಸೂಚನೆ ಸಂ : ಕೆಸಿಐ-ವಿಪಿಎಸ್‌ಐ/46/2025 ರ
ಆದೇಶವನ್ನು ಹಿಂಪಡೆದು ತಕ್ಷಣದಿಂದ ಜಾರಿಗೆ ಬರುವಂತೆ ಅವರ ಹೆಸರಿನ ಮುಂದೆ ಸೂಚಿಸಿರುವ ಹೆಸರಿಗೆ ಉಲ್ಲೇಖಿತ
ಅಧಿಸೂಚನೆಯನ್ವಯ ವರ್ಗಾವಣೆ ಮಾಡಿ ಆದೇಶಿಸಿದೆ.
ಶಿವಮೊಗ್ಗ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಆರ್. ಮಾರುತಿ ನೇಮಕ:
ಆರ್. ಮಾರುತಿ ಇವರು ದಾವಣಗೆರೆ ಕಚೇರಿಯ
ಸಹಾಯಕ ನಿರ್ದೇಶಕರ ಕಚೇರಿ, ವಾ.ಸಾ.ಸಂ.ಇ,
ಶಿವಮೊಗ್ಗ ಇವರ ವರ್ಗಾವಣೆಯಿಂದ ತೆರವಾಗುವ ಹುದ್ದೆಗೆ
ಶ್ರೀ ಆರ್. ಮಾರುತಿ, ಸಹಾಯಕ ನಿರ್ದೇಶಕರು, ಹಿರಿಯ
ಸಹಾಯಕ ನಿರ್ದೇಶಕರ ಕಚೇರಿ, ವಾ.ಸಾ.ಸಂ.ಇ,
ದಾವಣಗೆರೆ ಇವರ ವರ್ಗಾವಣೆಯಿಂದ ತೆರವಾದ ಹುದ್ದೆಗೆ
ಸಹಾಯಕ ನಿರ್ದೇಶಕರ ಹುದ್ದೆಯ ಪ್ರಭಾರವನ್ನು
ಬಿ. ಧನಂಜಯಪ್ಪ ಇವರಿಗೆ ವಹಿಸಿಕೊಟ್ಟು ಶಿವಮೊಗ್ಗ ಕಚೇರಿಯ ಸಹಾಯಕ ನಿರ್ದೇಶಕರ ಹುದ್ದೆಯ ಪ್ರಭಾರವನ್ನು
ಸದರಿಯವರಿಂದ ವಹಿಸಿಕೊಂಡು ಕರ್ತವ್ಯ ನಿರ್ವಹಿಸಲು ಸೂಚಿಸಿದೆ.
ದಾವಣಗೆರೆ ವಾರ್ತಾಇಲಾಖೆಯ ಸಹಾಯಕ ನಿರ್ದೇಶಕರಾಗಿ ಧನಂಜಯಪ್ಪ ನೇಮಕ:
ಧನಂಜಯಪ್ಪ ಇವರು ಶಿವಮೊಗ್ಗ ಕಚೇರಿಯ ಸಹಾಯಕ ನಿರ್ದೇಶಕರ ಹುದ್ದೆಯ ಪ್ರಭಾರವನ್ನು
ಶ್ರೀ ಆರ್. ಮಾರುತಿ ಇವರಿಗೆ ವಹಿಸಿಕೊಟ್ಟು ದಾವಣಗೆರೆ ಕಚೇರಿಯ ಸಹಾಯಕ ನಿರ್ದೇಶಕರ ಹುದ್ದೆಯ ಪ್ರಭಾರವನ್ನು ಹಾಗೂ
ಹಿರಿಯ ಸಹಾಯಕ ನಿರ್ದೇಶಕರ ಹುದ್ದೆಯ ಪ್ರಭಾರವನ್ನು ಸದರಿಯವರಿಂದ ವಹಿಸಿಕೊಂಡು ಕರ್ನಾಟಕ ನಾಗರಿಕ ಸೇವಾ
ನಿಯಮಾವಳಿಗಳ ನಿಯಮ 68 ರನ್ವಯ ಹೆಚ್ಚುವರಿಯಾಗಿ ನಿರ್ವಹಿಸಲು ಸೂಚಿಸಿದೆ.
ಈ ಆದೇಶವು ತಕ್ಷಣದಿಂದ ಹಾಗೂ ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತದೆ.
ಹಿಂದಿನ ವಾರ್ತಾಧಿಕಾರಿ ಮಾರುತಿ.ಆರ್. ಇವರು 16 ವರ್ಷ ಒಂದೇ ಕಡೆ ಶಿವಮೊಗ್ಗದಲ್ಲಿ ಸೇವೆಯನ್ನು ಸಲ್ಲಿಸಿದ್ದರು. ಆದರೂ ಕೂಡ ಶಿವಮೊಗ್ಗದಿಂದ ದಾವಣಗೆರೆಗೆ ವರ್ಗಾವಣೆಯಾದ ಬಗ್ಗೆ KAT ಮೊರೆ ಹೋಗಿದ್ದರು. ಅಲ್ಲಿ ಸಾಧ್ತವಾಗದಿದ್ದಾಗ,ನಾನು ರಾಜ್ಯ. ಸರ್ಕಾರಿ ನೌಕರ ಸಂಘದ ಉಪಾಧ್ಯಕ್ಷ ಎಂದು ಹೈಕೊರ್ಟ್ ಮೋರೆ ಹೋದ ಹಿನ್ನೆಲೆಯಲ್ಲಿ ಇವರು ವರ್ಗಾವಣೆಯಾಗಿ ಮತ್ತೆ ಶಿವಮೊಗ್ಗ ವಾರ್ತಾ ಇಲಾಖೆಗೆ ವಾರ್ತಾ ಸಹಾಯಕ ನಿರ್ದೇಶಕರಾಗಿ ಮರು ನೇಮಕವಾಗಿದ್ದಾರೆ.ಇದೀಗ ಬಂದು ವರದಿಕೂಡ ಮಾಡಿ ಕೊಂಡಿದ್ದಾರೆ.
ಮಾರುತಿ.ಆರ್. ಇವರು ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಎಂದು ಹೈಕೋರ್ಟ್ ಗೆ ಸುಳ್ಳು ಪ್ತಮಾಣಪತ್ರ ನೀಡಿದ್ದಾರೆ. ಸ್ವಂತ ಮನೆಯಲ್ಲಿದ್ದರೂ ಶಿವಮೊಗ್ಗದ PWD ಕ್ವಾಟ್ರಸ ಸುಳ್ಳು ಅಡ್ರೆಸ್ ನೀಡಿರುವುದರ ಬಗ್ಗೆ ಹಾಗೂ ಅನೇಕ ಗುರುತರ ಆರೋಪಗಳು ಇದ್ದರೂ ಇದುವರೆಗೂ ವಾರ್ತಾ ಇಲಾಖೆ ತನಿಖೆ ಮಾಡದೇ ನಿರ್ಲಕ್ಷ್ಯ ವನ್ನು ವಹಿಸಿರುವುದರ ಬಗ್ಗೆ ಲೋಕಾಯುಕ್ತಕ್ಕೆ ಮತ್ತು ಸರ್ಕಾರದ ಸಿಬ್ಬಂದಿ ಆಡಳಿತ ಸುಧಾರಣಾ ಇಲಾಖೆಗೆ, ಸರ್ಕಾರದ ಮುಖ್ಯ ಕಾರ್ಯದರ್ಶಿ ಗಳಿಗೆ ದೂರು ಅರ್ಜಿಯನ್ನು ನೀಡಲು ದಿನಪತ್ರಿಕೆಯ ಸಂಪಾದಕರೋಬ್ಬರು ಎಲ್ಲಾ ಸಿದ್ದತೆ ಮಾಡಿ ಕೊಂಡಿದ್ದಾರೆ ಎಂದು ತಿಳಿದು ಬಂದಿದೆ.ಅದೇ ರೀತಿ ಹೈ ಕೋರ್ಟ್ ನಲ್ಲಿ ಸಹ ರಿಟ್ ಪೆಟಿಷನ್ ಹಾಕಲು ವಕೀಲರ ಸಂಪರ್ಕವನ್ನು ಮಾಡಿರುವುದಾಗಿ ತಿಳಿದು ಬಂದಿದೆ.

Leave a Comment