ಶಿವಮೊಗ್ಗ ಮಹಾನಗರ ಪಾಲಿಕೆ ನೇರ ಪೌರ ಕಾರ್ಮಿಕರ ಮೇಸ್ತ್ರಿ ರಂಗನಾಥ್ ಅಪಘಾತದಲ್ಲಿ ಸಾವು

ಶಿವಮೊಗ್ಗ: ಶಿವಮೊಗ್ಗ ನಗರದ ಅಲ್ಕೋಳ ಸರ್ಕಲ್ ಬಳಿ ನಿನ್ನೆ ಸಂಜೆ ಸುಮಾರು 6 ಗಂಟೆಯ ಸಮಯದಲ್ಲಿ ವೇಗವಾಗಿ ಬಂದ ಬೈಕ್ ವೊಂದು ಪಾದಚಾರಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಪಾದಚಾರಿ ಮೃತಪಟ್ಟ ಘಟನೆ ನಡೆದಿದೆ.

ಸಾವುಕಂಡ ವ್ಯಕ್ತಿಯನ್ನ ಶಿವಮೊಗ್ಗ ಮಹಾನಗರ ಪಾಲಿಕೆ ಪೌರಕಾರ್ಮಿಕರ 35 ನೇ ವಾರ್ಡ್ ಮೇಸ್ತ್ರಿ ರಂಗನಾಥ್ ಎಂದು ಗುರುತಿಸಲಾಗಿದೆ.  

ಘಟನೆ ಶಿವಮೊಗ್ಗ ನಗರದ ಅಲ್ಕೋಳ ಸರ್ಕಲ್ ಸಮೀಪ ಇರುವ ಶ್ರೀನಿಧಿ ವೈನ್ಸ್ ಬಳಿ ನಡೆದಿದ್ದು, ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ವೇಗವಾಗಿ ಬಂದ ದ್ವಿಚಕ್ರ ವಾಹನ ಸವಾರ ಡಿಕ್ಕಿ ಹೊಡೆಸಿದ್ದಾನೆ. ನಂತರ ಸ್ಥಳಿಯರು ಗಾಯಗೊಂಡಿದ್ದ ವ್ಯಕ್ತಿ ರಂಗನಾಥ್(32) ರನ್ನ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸಾಗಿಸುವ... ಮಾರ್ಗ ಮಧ್ಯೆಯಲ್ಲಿ ಕೊನೆ ಉಸಿರು ಎಳೆದಿದ್ದಾರೆ ಎಂದು ತಿಳಿದುಬಂದಿದೆ.

ಶಿವಮೊಗ್ಗ ಮಹಾನಗರ ಪಾಲಿಕೆಯ  ನೇರ ಪಾವತಿ ಪೌರಕಾರ್ಮಿಕರ ಮೇಸ್ತ್ರಿ ರಂಗನಾಥ್ ಅಪಘಾತದಲ್ಲಿ ನಿಧನರಾಗಿರುವುದಕ್ಕೆ ಪಾಲಿಕೆಯ ಪೌರ ಕಾರ್ಮಿಕರ ಅಧ್ಯಕ್ಷರಾದ ಪೆಂಚಾಲಯ್ಯ ಮತ್ತು ಹೆಲ್ತ್ ಇನ್ಸ್ಪೆಕ್ಟರ್ ಕೃಷ್ಣಮೂರ್ತಿ ಹಾಗೂ ಪಾಲಿಕೆಯ ಕಮೀಷನರ್ ಮಾಯಣ್ಣಗೌಡ ಕಂಬನಿ ಮಿಡಿದಿದ್ದಾರೆ.ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು, ಮತ್ತು ಮೃತರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

 

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.