ಶಿವಮೊಗ್ಗದ ದಿನಪತ್ರಿಕೆ ಸಂಪಾದಕರೋರ್ವರ ಕಾರು ಇನ್ನೋಂದು ಕಾರಿಗೆ ಡಿಕ್ಕಿಅಪಘಾತ :ಎರಡು ಕಾರು ಜಖಂ
ಶಿವಮೊಗ್ಗ.ಮೇ 07:ಶಿವಮೊಗ್ಗದ ಕ್ರಾಂತಿ ದೀಪ ದಿನಪತ್ರಿಕೆಯ ಸಂಪಾದಕ ಎನ್. ಮಂಜುನಾಥ್ ಚಲಿಸುತ್ತಿದ್ದ ಇನ್ನೋವಾ ಕಾರು,ರಸ್ತೆಯಲ್ಲಿ ಹೋಗುತ್ತಿದ್ದ ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮವಾಗಿ ಎರಡೂ ಕಾರುಗಳು ಜಖಂ ಆದ ಘಟನೆ ವರದಿಯಾಗಿದೆ.
ಮಂಜುನಾಥ್ ಕ್ರಾಂತಿ ದೀಪ ದಿನಪತ್ರಿಕೆ ಸಂಪಾದಕನೋರ್ವನ ಇನ್ನೋವಾ ಕಾರಿನ ಮುಂಭಾಗ ಪೂರ್ತಿಯಾಗಿ ಜಖಂ ಆಗಿದೆ.ಇನ್ನೋಂದು ಕಾರಿನ ಹಿಂಭಾಗದ ಡಿಕ್ಕಿ ಹತ್ತಿರ ಜಖಂ ಆಗಿ ಟೈರ್ ಕೂಡ ಪಂಚರ್ ಆದ ಘಟನೆ ನಡೆಯಿತು.
ಇಂದು ನಗರದ ಸ್ಟೇಡಿಯಂ ಎದುರು ರಸ್ತೆಯಲ್ಲಿ ಈ ಅಪಘಾತ ನಡೆದಿದೆ.ಸರಿಸುಮಾರು ಬೆಳಿಗ್ಗೆ 11-30 ಗಂಟೆ ಸಮಯದಲ್ಲಿ ಅಪಘಾತ ನಡೆದಿದೆ.ಅಪಘಾತದಲ್ಲಿ ಎರಡು ಕಾರಿನಲ್ಲಿ ಇದ್ದವರಿಗೆ ಏನು ಆಗಿಲ್ಲ.
ಸ್ವಲ್ಪ ಹೊತ್ತು ಅಪಘಾತದ ಸ್ಥಳದಲ್ಲಿ ಎರಡು ಕಾರಿನ ಮಾಲೀಕರ ನಡುವೆ ಮಾತಿನ ಚಕಮಕಿ ನಡೆಯಿತು.ನಂತರ ಶಿವಮೊಗ್ಗ ಮೀಡಿಯಾದ ಜೇಸುದಾಸ್ ರವರು ಗರಂ ಆಗಿ ಎನ್.ಮಂಜುನಾಥ್ ಪರ ವಾದ ಮಂಡಿಸಿದರು. ನಾವು ಮೀಡಿಯಾದವರು ಗೋತ್ತಾ ನಿಮಗೆ ನಾವು ಹೇಳಿದ್ದು ನೀವು ಕೇಳಲ್ಲ ಅಂದರೇ ಏನು? ಅಂತಾ ಪ್ರಶ್ನೆ ಮಾಡಿದರು.
ನಂತರ ಮತ್ತಿತರರ ಮಾಧ್ಯಮದವರು ಪ್ರವೇಶಿಸಿ ಇಬ್ಬರು ಕಾರಿನ ಮಾಲೀಕರು ಗಳೇ ತಮ್ಮ ತಮ್ಮ ಕಾರನ್ನು ರಿಪೇರಿ ಮಾಡಿಕೊಳ್ಳಿ ಪೊಲೀಸ್ ಕೇಸು ಏನು ಬೇಡ ಎಂದು ತೀರ್ಮಾನ ಮಾಡಿ ಇನ್ಸೂರೆನ್ಸ್ ಕ್ಲೈಮ್ ಮಾಡಿಕೊಂಡು ಕಾರುಗಳನ್ನು ರಿಪೇರಿ ಮಾಡಿಸಿ ಕೊಳ್ಳಿ ಎಂದು ಇಬ್ಬರಿಗೆ ತಿಳುವಳಿಕೆ ಹೇಳಿ ಕಳುಹಿಸಿದರು.
ಸ್ಥಳದಲ್ಲಿ ಟ್ರಾಫಿಕ್ ಪೊಲೀಸರು ಕೂಡ ಇದ್ದರು.ಅಲ್ಲಿಗೆ ಯಾವುದೇ ಅಪಘಾತದ ಕೇಸು ದಾಖಲು ಆಗದೇ ಪ್ರಕರಣ ಮುಕ್ತಾಯವಾಯಿತು.
ಇನ್ನೋಂದು ಕಾರು N.R.ಪುರದ ಸರ್ಕಾರದ ಶಾಲೆಯ ಅಜ್ಜಪ್ಪ ಎಂಬುವರಿಗೆ ಸೇರಿದ ಕಾರು ಎಂದು ತಿಳಿದು ಬಂದಿದೆ.

Leave a Comment