ಶಿವಮೊಗ್ಗಕ್ಕೆ ನೂತನ ವಾರ್ತಾಧಿಕಾರಿ ಬಿ.ಧನಂಜಯ್ ಆಗಮನ : ಮಾರುತಿ ಗೈರು -ನಾಪತ್ತೆ


ಶಿವಮೊಗ್ಗ.: ಶಿವಮೊಗ್ಗಕ್ಕೆ ನೂತನ  ವಾರ್ತಾಧಿಕಾರಿ ಬಿ.ಧನಂಜಯ್ ರವರು ದಿನಾಂಕ 13-3-2036 ರಂದು ಇಂದು ಬೆಳಿಗ್ಗೆ  KAT ಆದೇಶ ಮತ್ತು ಸರ್ಕಾರದ ವರ್ಗಾವಣೆ ಆದೇಶದ ಹಿನ್ನೆಲೆಯಲ್ಲಿ ಶಿವಮೊಗ್ಗ ವಾರ್ತಾ ಇಲಾಖೆಯ ಕಚೇರಿಗೆ ಬಂದು ಇಂದು ಅಧಿಕಾರ ಸ್ವೀಕರಿಸಿದರು.
  ಶಿವಮೊಗ್ಗಕ್ಕೆ ಆಗಮಿಸಿದ ನೂತನ ವಾರ್ತಾಧಿಕಾರಿ ಧನಂಜಯ ಇವರಿಗೆ ಇಂದು KWJV ಶಿವಮೊಗ್ಗ ಘಟಕದ  ಸಂಘದ ವತಿಯಿಂದ ಆತ್ಮೀಯವಾಗಿ ಸ್ವಾಗತಿಸಿ ಶುಭ ಕೋರಲಾಯಿತು.
ಈ ಸಂದರ್ಭದಲ್ಲಿ KWJV ಶಿವಮೊಗ್ಗದ ಸಂಘದ ಅಧ್ಯಕ್ಷರಾದ ಡಿ.ಜಿ. ನಾಗರಾಜ್, ಪ್ರಧಾನ ಕಾರ್ಯದರ್ಶಿ ಕೆ.ಎಂ.ಸತೀಶ್ ಗೌಡ, ಸಹ ಕಾರ್ಯದರ್ಶಿ ಶಿವರಾಜ್ ಹಾಗೂ ಖಜಾಂಚಿ ಗಿರೀಶ್ ಉಪಸ್ಥಿತರಿದ್ದರು.

ಅಯೋಗ್ಯ,ಅವಿವೇಕಿ,ವಾರ್ತಾಧಿಕಾರಿ ಮಾರುತಿ ನೂತನ ವಾರ್ತಾಧಿಕಾರಿ ಗೆ ಚಾರ್ಜ್ ನೀಡದೇ ದಾವಣಗೆರೆಗೆ ಸಹ ಹೋಗದೇ  ಗೈರು ನಾಪತ್ತೆ:

ಶಿವಮೊಗ್ಗ ವಾರ್ತಾಧಿಕಾರಿ ಮಾರುತಿ.ಆರ್.ಇವರನ್ನು ಶಿವಮೊಗ್ಗ ದಿಂದ ದಾವಣಗೆರೆ ಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು.ಈತನ ಮೇಲೆ ಅನೇಕ ಗುರುತರ ಆರೋಪಗಳು ಕಂಡು ಬಂದ ಹಿನ್ನೆಲೆಯಲ್ಲಿ ಆಗಸ್ಟ್ 2025 ರಲ್ಲಿ ವರ್ಗಾವಣೆ ಮಾಡಲಾಗಿತ್ತು.

ಆದರೇ ಸರ್ಕಾರದ ಆದೇಶವನ್ನು ವಾರ್ತಾಧಿಕಾರಿ ಮಾರುತಿ ಪಾಲನೆ ಮಾಡದೇ ತಿರಸ್ಕರಿಸಿ KAT ಮೊರೆ ಹೋಗಿದ್ದರೂ ಇದೀಗ 6-7 ತಿಂಗಳ ನಂತರ KAT ಯು ವಿಚಾರಣೆ ನಡೆಸಿ ನ್ಯಾಯಯುತ ತೀರ್ಪು ನೀಡಿದೆ. ಸರ್ಕಾರದ ವರ್ಗಾವಣೆ ಆದೇಶವನ್ನು ಎತ್ತಿ ಹಿಡಿದು...ಮಾರುತಿಯವರ ಅಹವಾಲನ್ನು ತಿರಸ್ಕರಿಸಿ ಅರ್ಜಿಯನ್ನು ವಜಾ ಮಾಡಿದೆ. ಇದೀಗ ಗೈರು ಹಾಜರಾಗಿ ಓಡಿ ಹೋಗುವ ಪರಿಸ್ಥಿತಿ ಬಂದಿದೆ.

ಸರ್ಕಾರದ ವರ್ಗಾವಣೆ ಆದೇಶ ಮತ್ತು KAT ಆದೇಶವನ್ನು ಪಾಲನೆ ಮಾಡದೇ ಇರುವುದು ಅಶಿಸ್ತು ಆಗಿದೆ.ಇದೀಗ ಗೈರು ಹಾಜರಾದ ಹಿನ್ನೆಲೆಯಲ್ಲಿ ಅಮಾನತ್ತು ಆಗುವ ಸಂದರ್ಭ ಸಹ ಇದೆ. ನೂತನ ವಾರ್ತಾಧಿಕಾರಿ ಗೆ ಚಾರ್ಜ್ ನೀಡದೇ ಸರ್ಕಾರದ ಆದೇಶ ಮತ್ತು KAT ಆದೇಶವನ್ನು ಉಲ್ಲಂಘನೆ ಮಾಡಿ ಉದ್ಗಟತನಾ ತೋರಿರುವುದು ಮೇಲಾಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ  ಇದೆ.

16 ವರ್ಷದಿಂದ ಒಂದೇ ಕಡೆ ಕರ್ತವ್ಯ;

ಶಿವಮೊಗ್ಗ ವಾರ್ತಾಧಿಕಾರಿ ಮಾರುತಿ ಶಿವಮೊಗ್ಗ ವಾರ್ತಾಇಲಾಖೆಯಲ್ಲಿ 16 ವರ್ಷದಿಂದ ಒಂದೇ ಕಡೆ ಕೆಲಸ ಮಾಡುತ್ತಿದ್ದರು. ಇದುವರೆಗೂ ವರ್ಗಾವಣೆ ಗೊಂಡಿರಲಿಲ್ಲ.ಈತ ನಾನು ನಿವೃತ್ತಿ ಆಗುವವರೆಗೂ ಶಿವಮೊಗ್ಗದಲ್ಲಿ ಇರುತ್ತೆನೆ ಎಂಬ ಹಗಲು ಕನಸು ಕಂಡಿದ್ದ.ಹಲವು ಪತ್ರಕರ್ತರ ಬಳಿ  ನನಗೆ ಟ್ರಾನ್ಸಫರ್ ಮಾಡಿಸಲು ಯಾರಿಂದಲೂ ಆಗಲ್ಲ ಎಂದು ಬೆಂಚ್ ಕುಟ್ಟಿ ಬಡಿದು ಹೇಳುತ್ತಿದ್ದ. ತನ್ನ ಪ್ರಭಾವ ಬಳಸಿ ಪದೇ ಪದೇ ವರ್ಗಾವಣೆ ಕ್ಯಾನ್ಸಲ್ ಮಾಡಿಸಿ ಕೊಂಡು ಬರುತ್ತಿದ್ದ.ಇದೀಗ ಏನು ಮಾಡದ ಸ್ಥಿತಿಗೆ ಅವಮಾನ ಆಗಿ ಗೈರು ಹಾಜರಾಗಿ ಹೋಗಿದ್ದಾನೆ ಎಂದು ತಿಳಿದು ಬಂದಿದೆ.

ವಾರ್ತಾಧಿಕಾರಿ ಮಾರುತಿ ಇವರ ಮೇಲೆ ಅನೇಕ ದೂರುಗಳು ವಾರ್ತಾ ಇಲಾಖೆಯ ವರಿಷ್ಟ ಮೇಲಾಧಿಕಾರಿಗಳಿಗೆ ನೀಡಲಾಗಿತ್ತು. ಈತ 4-5 ಜನ ಪತ್ರಕರ್ತರ ಜೊತೆಯಲ್ಲಿ ಶಾಮೀಲಾಗಿ ತನಗೆ ಇಷ್ಟಬಂದಂತೆ ಕಾರ್ಯನಿರ್ವಹಿಸುತ್ತಾ. ನೈಜ ಪತ್ರಕರ್ತರಿಗೆ ತಾರತಮ್ಯ ಬೇದಭಾವ ಎಸಗುತ್ತಿದ್ದನು. ವಾರ್ತಾ ಇಲಾಖೆಯನ್ನು ಕುಲಗೆಡಿಸಿದ್ದನು. ಇದೀಗ ವರ್ಗಾವಣೆ ಗೊಂಡಿರುವುದು ಹಲವು ಸಮಾನ ಮನಸ್ಕ ನೈಜ ಪತ್ರಕರ್ತರಿಗೆ ಸಂತೋಷ ತಂದಿದೆ. ಇದು ಮಹಾನ್ ಪತ್ರಕರ್ತನಿಗೆ ಆಘಾತ ತಂದಿದೆ ಅಂತಲೇ ಹೇಳಬಹುದು.ಇನ್ನು ಮಹಾನ್ ಪತ್ರಕರ್ತನ ಆಟಕ್ಕೆ ಸಹ ಪೂರ್ತಿ ಬ್ರೇಕ್ ಬಿಳಲಿದೆ.

ಶಿವಮೊಗ್ಗ ವಾರ್ತಾ ಇಲಾಖೆಯಿಂದ ಔಟ್ ಆಗಿರುವ  ಮಾರುತಿ ಆರ್. ವಾರ್ತಾಧಿಕಾರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ಮಹಾನ್ ಪತ್ರಕರ್ತನ ಪರ ಬ್ಯಾಟಿಂಗ್ ಮಾಡಿಕೊಂಡು ಆರಾಮಿಯಾಗಿದ್ದ,  ವಾರ್ತಾ ಇಲಾಖೆಗೆ ಮತ್ತು ಹಲವು ಪತ್ರಕರ್ತರಿಗೆ ದ್ರೋಹ ಬಗೆದಿದ್ದ ಇದೀಗ ಈತನ ಆಟ ಎಲ್ಲಾ ಬಂದ್ ಆಗಿದೆ.

ಅಯೋಗ್ಯ ಅವಿವೇಕಿ, ಭ್ರಷ್ಟ ಅಧಿಕಾರಿ,ಮಾರುತಿ ಮಹಾನ್ ಪತ್ರಕರ್ತನ ಕೈಗೊಂಬೆಯಾಗಿದ್ದ, ಈತನನ್ನು ಕೂಡಲೇ ಎತ್ತಂಗಡಿ ಮಾಡಿರುವುದು ಸಂತಸ ತಂದಿದೆ.ಈತನ  ವರ್ಗಾವಣೆಗೆ ಹಲೋ ಶಿವಮೊಗ್ಗ ದಿನಪತ್ರಿಕೆ ವತಿಯಿಂದ ಅನೇಕ ಪತ್ರಗಳನ್ನು ಬರೆದು ಈತನ ನಡವಳಿಕೆ ಕಾರ್ಯವೈಖರಿ ಬಗ್ಗೆ ಕೇಂದ್ರ ವಾರ್ತಾ ಇಲಾಖೆಯ ಮೇಲಾಧಿಕಾರಿಗಳಿಗೆ ತಿಳಿಸಲಾಗಿತ್ತು.

ಆದರೇ ಈ ಬಾರಿ ಈತನ ಬಕೇಟ್ ಚೇಲಾಗಳು  ಮಾರುತಿ ವರ್ಗಾವಣೆ ಆಗದಂತೆ ತಡೆಯಲು ಏನೇನು ಸರ್ಕಸ್ ಮಾಡಿದರೂ  ಈ ಬಾರಿ ಅದು ಫಲಿಸಲಿಲ್ಲ.ವಾರ್ತಾ ಇಲಾಖೆಗೆ ಹಿಡಿದಿದ್ದ ಗ್ರಹಣ ಬಿಟ್ಟಿದೆ ಅಂತಲೇ ಹೇಳಬಹುದು.

 ಅಯೋಗ್ಯ ವಾರ್ತಾಧಿಕಾರಿ ಮಾರುತಿ 16 ವರ್ಷದಿಂದ ಒಂದೇ ಕಡೆ ರಾಜಕೀಯ ವ್ಯಕ್ತಿ ತರ ಕೆಲಸ ಮಾಡಿಕೊಂಡಿದ್ದ, ತನ್ನ ಕೆಲಸವನ್ನು ಪ್ರಾಮಾಣಿಕವಾಗಿ ಮಾಡದೇ ಕುಳಿತಿದ್ದ , ವಾರ್ತಾ ಇಲಾಖೆಯ ಅಧಿಕಾರಿಯಾಗಿದ್ದರೂ ಕೆಲವೇ ಪತ್ರಕರ್ತರಿಗಷ್ಟೇ ವಾರ್ತಾ ಇಲಾಖೆ ಮೀಸಲು‌ ಎಂಬಂತೆ ವರ್ತಿಸುತ್ತಿದ್ದ. 

ಈತ ವಾರ್ತಾ ಇಲಾಖೆಯ ಶಿವಮೊಗ್ಗ ಕಚೇರಿಗೆ ಕಳೆದ 15 ವರ್ಷಗಳ ಹಿಂದೆ ವಾರ್ತಾ ಸಹಾಯಕನಾಗಿ ಬಂದಾಗಿನಿಂದಲೂ ಶಿವಮೊಗ್ಗದಲ್ಲಿ ಪತ್ರಕರ್ತರ ನಡುವೆ ಒಳಜಗಳ ತಂದಿಕ್ಕುವುದನ್ನೇ ಕಸುಬಾಗಿಸಿಕೊಂಡಿದ್ದ. ಆ ಮೂಲಕ ತನ್ನ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಂಡಿದ್ದ.ಇದೀಗ ಮಾರುತಿ ವಾರ್ತಾಧಿಕಾರಿ ಯನ್ನು ಯಾವುದೇ ಒತ್ತಡಕ್ಕೆ ಮಣಿಯದೇ  ಎತ್ತಂಗಡಿ ಮಾಡಿರುವುದು ಶ್ಲಾಘನೀಯ.

ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪರವರಿಗೆ ಮತ್ತು ಅವರ P.A,ಮತ್ತು ಸ್ಪೆಷಲ್ ಆಫೀಸರ್ ಗಳಿಗೆ ಹಾಗೂ ಕೇಂದ್ರ ವಾರ್ತಾ ಇಲಾಖೆಯ ಕಮೀಷನರ್ ಮತ್ತು ಇತರ ಅಧಿಕಾರಿಗಳಿಗೆ ,ಹಾಗೂ ಸರ್ಕಾರದ ಚೀಪ್ ಸೆಕ್ರೆಟರಿ ಮತ್ತು ಸರ್ಕಾರದ ಅಧೀನ ಕಾರ್ಯದರ್ಶಿ ಮತ್ತು ಸಿ.ಎಂ ರವರಿಗೆ ಧನ್ಯವಾದಗಳು ಮತ್ತು ಅಭಿನಂದನೆಗಳು.

ನೂತನ ವಾರ್ತಾಧಿಕಾರಿ ಧನಂಜಯ್ ರವರು ಜಿಲ್ಲೆಯ ಪತ್ರಕರ್ತರಿಗೆ ಮೀಡಿಯಾ ಮತ್ತು ನಾನ್ ಮೀಡಿಯಾ ಅಂತಾ ತಾರತಮ್ಯ ತೋರದೇ ಬೇದಭಾವ ತೋರದೇ ಕರ್ತವ್ಯವನ್ನು ನಿರ್ವಹಣೆ ಮಾಡಿ ಶಿವಮೊಗ್ಗ ವಾರ್ತಾ ಇಲಾಖೆಯನ್ನು ಶುದ್ದಿಗೊಳಿಸಬೇಕಿದೆ.  ಎಲ್ಲಾ ಪತ್ರಕರ್ತರಿಗೆ ಸ್ಪಂದಿಸಿ ಜನಸ್ನೇಹಿಯಾಗಿ ಕೆಲಸ ಮಾಡಲಿ ಎಂಬುದು ನಮ್ಮ ಆಶಯವಾಗಿದೆ.

ಅಂತೂ ಇಂತೂ ಶಿವಮೊಗ್ಗದ ವಾರ್ತಾ ಇಲಾಖೆಗೆ ಹಿಡಿದಿದ್ದ ಗ್ರಹಣ ಇದೀಗ ಬಿಟ್ಟಂತಾಗಿದೆ ಅಂತಲೇ ಹೇಳಬಹುದು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.