ಸಂಕೇತ್ ಕುಟುಂಬಕ್ಕೆ 15 ಲಕ್ಷ ಚೆಕ್ ವಿತರಿಸಿದ ಸಿಎಂ ಸಿದ್ದರಾಮಯ್ಯ

ಶಿವಮೊಗ್ಗ : ಶಿವಮೊಗ್ಗ ನಗರದ ಊರಗಡೂರಿನಲ್ಲಿ ಅಪ್ರಾಪ್ತ ಬಾಲಕ ಸಂಕೇತ್ ಕೊಲೆಯಾಗಿದ್ದ. ಕೊಲೆಯಾದ ಬಾಲಕನ ಕುಟುಂಬಕ್ಕೆ ಸಿಎಂ ಸಿದ್ದರಾಮಯ್ಯ 15 ಲಕ್ಷದ  ಪರಿಹಾರದ ಚೆಕ್ ನ್ನು ಶಿವಮೊಗ್ಗದ ವಿಮಾನ ನಿಲ್ದಾಣ ದಲ್ಲಿ ವಿತರಣೆ ಮಾಡಿದರು.
ಬಾಲಕ ಸಂಕೇತ್ ನ ತಂದೆ ಕುಮಾರ್ ಮತ್ತು ತಾಯಿ ಮಂಜುಳಾ ಗೆ ಸಿಎಂ ಚೆಕ್ ನೀಡಿದರು.

ಸಿಎಂ ಪರಿಹಾರ ನಿಧಿಯಿಂದ 10 ಲಕ್ಷ ರೂ. ಹಾಗೂ ಶಿಕ್ಷಣ ಇಲಾಖೆಯಿಂದ 5 ಲಕ್ಷ ರೂ. ಪರಿಹಾರ ನೀಡಲಾಯ್ತು. ಪರಿಹಾರ ಚೆಕ್ ನೀಡಿ ನಂತರ ಸಿಎಂ ಸಂಕೇತ್ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಸಿಎಂ ಗೆ ಸಚಿವ ಮಧು ಬಂಗಾರಪ್ಪ, ಶಿವಮೊಗ್ಗ ನಗರದ ಬಿಜೆಪಿ ಶಾಸಕ ಎಸ್.ಎನ್.ಚನ್ನಬಸಪ್ಪ ಸಾಥ್ ನೀಡಿದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.