ಫೆಬ್ರವರಿ 24 ರಿಂದ 28 ರವರೆಗೆ ಕೋಟೆ ಶ್ರೀ ಮಾರಿಕಾಂಬ ದೇವಿಯ ಜಾತ್ರೆ: ಸಮಿತಿಯ ಅಧ್ಯಕ್ಷ ಎಸ್.ಕೆ ಮರಿಯಪ್ಪ ಮಾಹಿತಿ

ಶಿವಮೊಗ್ಗ:ಫೆ.17, ಕೋಟೆ ಶ್ರೀ ಮಾರಿಕಾಂಬ ಜಾತ್ರೆಯು ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಉತ್ಸವವಾಗಿದ್ದು, ಪೌರಾಣಿಕ, ಐತಿಹಾಸಿಕ ಹಿನ್ನೆಲೆ ಇದೆ. ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುತ್ತದೆ.2026ನೇ ಸಾಲಿನಲ್ಲಿ ಫೆಬ್ರವರಿ 24 ರಿಂದ 28 ರವರೆಗೆ ಜಾತ್ರೆ ಅದ್ದೂರಿಯಾಗಿ ವಿಜೃಂಭಣೆಯಿಂದ 5 ದಿನಗಳ ಕಾಲ ನಡೆಯುತ್ತದೆ. ಈ ಜಾತ್ರೆಗೆ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ ಮತ್ತು ದೇವಿಯ ದರ್ಶನ ಪಡೆಯಲಿದ್ದಾರೆ ಎಂದು ಸಮಿತಿಯ ಅಧ್ಯಕ್ಷರಾದ ಎಸ್.ಕೆ.ಮರಿಯಪ್ಪ ಹೇಳಿದರು.
ಇಂದು ಬೆಳಿಗ್ಗೆ ದೇವಸ್ಥಾನದ ಆವರಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮೊದಲ ದಿನ ಗಾಂಧಿ ಬಜಾರ್‌ನಲ್ಲಿ ದೇವಿಗೆ ಪೂಜೆ ನೆರವೇರಿಸಿದ ನಂತರ, ಕೋಟೆಯ ಗದ್ದುಗೆಗೆ ಅದ್ದೂರಿ ಮೆರವಣಿಗೆಯೊಂದಿಗೆ ದೇವಿಯನ್ನು ತರಲಾಗುತ್ತದೆ.ವೈಭವದ ರಥ ಸವಾರಿ ನಡೆಯುತ್ತದೆ ಎಂದರು.ಜಾನಪದ ನೃತ್ಯ, ಮೆರುಗುಗಳೊಂದಿಗೆ ಆರಂಭವಾಗಿ ವನ ಪ್ರವೇಶದೊಂದಿಗೆ ಸಮಾಪನಗೊಳ್ಳುತ್ತದೆ ಎಂದರು.
ವಿವಿಧ ಜಾತಿ-ಧರ್ಮಗಳ ಜನರು ಹರಿಜನ, ಕುರುಬ, ವಾಲ್ಮೀಕಿ, ಮಡಿವಾಳ ಸಮುದಾಯಗಳು ಸರದಿಯಂತೆ ಪೂಜೆ ಸಲ್ಲಿಸುತ್ತಾರೆ.  ಶಿವಮೊಗ್ಗ ನಗರವು ಬಣ್ಣಬಣ್ಣದ ಬೆಳಕುಗಳಿಂದ,ಹೂವುಗಳಿಂದ ಅಲಂಕೃತವಾಗುತ್ತದೆ, ರಾಷ್ಟ್ರೀಯ ಮಟ್ಟದ ಕುಸ್ತಿ ಪಂದ್ಯಗಳು ಮತ್ತು ಜಾನಪದ ಕಾರ್ಯಕ್ರಮಗಳು ನಡೆಯುತ್ತವೆ ಎಂದರು.
ಇಂದು ಕೋಟೆ ಶ್ರೀ ಮಾರಿಕಾಂಬ ದೇವಿಯ ಸನ್ನಿದಾನದಲ್ಲಿ ಸಾರೋ ಹಾಕುವ ಕಾರ್ಯಕ್ರಮ ಕ್ಕೆ ಅಧ್ಯಕ್ಷರು ಚಾಲನೆ ನೀಡಿದರು.
ಶಿವಮೊಗ್ಗ ಕೋಟೆ ಮಾರಿಕಾಂಬ ಜಾತ್ರೆಯ ಕುಸ್ತಿ ಪಂದ್ಯಾವಳಿಯು ದಿನಾಂಕ 6-3-2026 ರಿಂದ 8-3-2026 ರವರೆಗೆ ನಡೆಯಲಿದ್ದು ಜಾತ್ರಾ ಮಹೋತ್ಸವದ ಪ್ರಮುಖ ಅಂಗವಾಗಿದ್ದು, ರಾಷ್ಟ್ರ ಮತ್ತು ರಾಜ್ಯ ಮಟ್ಟದ ಕುಸ್ತಿಪಟುಗಳು ಭಾಗವಹಿಸುತ್ತಾರೆ.ಪಂದ್ಯಾವಳಿ ಎರಡು ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಯಲ್ಲಿ ಕುಸ್ತಿ ಸಾಮಾನ್ಯವಾಗಿ ನೆಹರೂ ಕ್ರೀಡಾಂಗಣದಲ್ಲಿ 3ದಿನಗಳ ಕಾಲ ನಡೆಯುತ್ತದೆ. ಭಾರೀ ತೂಕ ವರ್ಗಗಳು ಸೇರಿದಂತೆ ವಿವಿಧ ವಿಭಾಗಗಳಿವೆ. ವಿಜೇತರಿಗೆ ನಗದು ಬಹುಮಾನಗಳು ಮತ್ತು ಟ್ರೋಫಿಗಳನ್ನು ನೀಡಲಾಗುತ್ತದೆ ಎಂದರು.
ಶಿವಮೊಗ್ಗದ ಕೋಟೆ ಶ್ರೀ ಮಾರಿಕಾಂಬ ಜಾತ್ರೆ ಸರ್ವ ಧರ್ಮಗಳ ಭಕ್ತರ ಆರಾಧನೆಗೆ ಪ್ರಸಿದ್ಧ:ಇದು ಹಲೋ ಶಿವಮೊಗ್ಗ ದಿನಪತ್ರಿಕೆಯ ವತಿಯಿಂದ ವಿಶೇಷ ವರಧಿ-ಲೇಖನ
ಈ ಜಾತ್ರೆಗೆ ಸುಮಾರು 600 ವರ್ಷಗಳ ಇತಿಹಾಸವಿದ್ದು, ನಗರದ ಗ್ರಾಮದೇವತೆಯಾಗಿ ಪೂಜ್ಯವಾಗಿರುವ ಮಾರಿಕಾಂಬಾ ದೇವಿಯನ್ನು ಕೇಂದ್ರೀಕರಿಸಿದೆ. ಶಿವಪ್ಪನಾಯಕ (ಕೆಂಚಮಾರಿ) ರಾಜನು ದೇವಿಗೆ ಪೂಜೆ ಸಲ್ಲಿಸಿ ಯುದ್ಧಕ್ಕೆ ಹೊರಟು ಗೆಲುವು ಸಾಧಿಸುತ್ತಿದ್ದ ಇತಿಹಾಸವಿದೆ.
ಉಗಮ ಮತ್ತು ವಿಕಾಸ:
ಈ ಜಾತ್ರೆಯು ಶಿವಮೊಗ್ಗ ನಗರದ ಗ್ರಾಮದೇವತೆಯಾದ ಮಾರಿಕಾಂಬಾ ದೇವಿಯನ್ನು ಕೇಂದ್ರೀಕರಿಸಿದ್ದು, ಹಿಂದೆ ಗಾಂಧಿ ಬಜಾರ್  ದೊಡ್ಡಪೇಟೆಯಲ್ಲಿ ತವರು ಮನೆಯಾಗಿ ನಡೆಯುತ್ತಿತ್ತು.

ವಿಶ್ವಕರ್ಮ ಸಮುದಾಯವು ದೇವಿಯ ವಿಗ್ರಹವನ್ನು ನಿರ್ಮಿಸಿ ಪೂಜಿಸುತ್ತಿದ್ದರು, ನಂತರ ನಾಡಿಗರ ಕುಟುಂಬವು ಪ್ರಾಣ ಪ್ರತಿಷ್ಠಾಪನೆ ಮಾಡುತ್ತಿತ್ತು.

1978ರಲ್ಲಿ ಮಾರಿಕಾಂಬಾ ಸೇವಾ ಸಮಿತಿ ರಚನೆಯಾದ ನಂತರ ಭವ್ಯ ದೇವಾಲಯ ನಿರ್ಮಾಣಗೊಂಡಿತು.

ಪರಂಪರೆಗಳ ಬದಲಾವಣೆ:
ಪ್ರಾರಂಭದಲ್ಲಿ ಪ್ರಾಣಿಬಲಿ ವಾಡಿಕೆ ಇತ್ತು, ಆದರೆ 1991ರಲ್ಲಿ ಶೃಂಗೇರಿ ಶರಣ ಭಾರತೀ ತೀರ್ಥರು ನಿಷೇಧಿಸಿದ್ದರಿಂದ ಅದು ನಿಲ್ಲಿಸಲ್ಪಟ್ಟಿತು.

 ಜಾತ್ರೆ ಐತಿಹಾಸಿಕವಾಗಿ ಶಿವಮೊಗ್ಗದ ರಕ್ಷಣೆಗೆ ದೇವಿಯ ಜವಾಬ್ದಾರಿಯ ಆಧಾರದ ಮೇಲೆ ನಡೆಯುತ್ತದೆ.

ಶಿವಮೊಗ್ಗ ಕೋಟೆ ಮಾರಿಕಾಂಬ ಜಾತ್ರೆಯಲ್ಲಿ ರಥದ ಮೆರವಣಿಗೆಯು ಜಾತ್ರೆಯ ಪ್ರಮುಖ ಆಕರ್ಷಣೆಯಾಗಿದ್ದು, ಮೂರನೇ ದಿನ ನಡೆಯುತ್ತದೆ. ಮೊದಲ ದಿನ ಗಾಂಧಿ ಬಜಾರ್‌ನಿಂದ ದೇವಿಯನ್ನು ಕೋಟೆ ಗದ್ದುಗೆಗೆ ತರಲಾಗುತ್ತದೆ. 

ಕೋಟೆ ಮಾರಿಕಾಂಬ ಜಾತ್ರೆಯ ರಥಗಳನ್ನು ವಿಶ್ವಕರ್ಮ ಸಮುದಾಯದ (ಶಿಲ್ಪಿಗಳು) ಕುಶಲಕರ್ಮಿಗಳು ನಿರ್ಮಿಸುತ್ತಾರೆ.

ರಥದ ನಿರ್ಮಾಣ ಪ್ರಕ್ರಿಯೆ:
ರಥ ನಿರ್ಮಾಣಕ್ಕೆ ತಾರೆ ಮರದಂತಹ ಸಾಂಪ್ರದಾಯಿಕ ಕಣ್ಣೀರು ಮರಗಳನ್ನು ಶಾಸ್ತ್ರೋಕ್ತ ಮುಹೂರ್ತದಲ್ಲಿ ಪೂಜಿಸಿ ಕಡಿಯಲಾಗುತ್ತದೆ. ವಿಶ್ವಕರ್ಮರೇ ದೇವಿಯ ಮೂರ್ತಿಯನ್ನು ನಿರ್ದಿಷ್ಟ ಮರದಲ್ಲಿ ಕೆತ್ತಿ, ರಥದ ಹಲಗೆಗಳು ಮತ್ತು ರಚನೆಯನ್ನು ತಯಾರಿಸುತ್ತಾರೆ.ಜಾತ್ರಾ ಸಮಿತಿ ಮತ್ತು ಸ್ಥಳೀಯ ಶಿಲ್ಪಿಗಳು ಸಹಕರಿಸಿ ಭವ್ಯ ಅಲಂಕಾರದೊಂದಿಗೆ ಪೂರ್ಣಗೊಳಿಸುತ್ತಾರೆ.

ಸಾಂಪ್ರದಾಯಿಕ ಮಹತ್ವ:
ಈ ರಥಗಳು ಐತಿಹಾಸಿಕವಾಗಿ ಶಿವಪ್ಪನಾಯಕರ ಕಾಲದಿಂದ ಬಂದಿವೆ, ಮೂರನೇ ದಿನ ಮೆರವಣಿಗೆಗೆ ಬಳಸಲಾಗುತ್ತದೆ. ಸಮೀಪದ ಸಿರ್ಸಿ ಅಥವಾ ಸಾಗರ ಜಾತ್ರೆಗಳಂತೆ ಬಾಬದಾರರು ಮರ ಕಡಿಯುವಂತೆ, ಇಲ್ಲಿ ವಿಶ್ವಕರ್ಮರು ಮುಖ್ಯ ಪಾತ್ರ ವಹಿಸುತ್ತಾರೆ.
ರಥದ ತೂಕ ಮತ್ತು ವಿಶೇಷತೆ:
ಶಿವಮೊಗ್ಗ ಕೋಟೆ ಮಾರಿಕಾಂಬ ಜಾತ್ರೆಯ ರಥವು ಮರದಿಂದ ನಿರ್ಮಿಸಿದ್ದು ಸುಮಾರು 35-40 ಅಡಿ ಎತ್ತರದ್ದು ಆಗಿದ್ದು, 10 ರಿಂದ 15 ಟನ್ ತೂಕ ಹೊಂದಿರುತ್ತದೆ. ರಥದ ಅಗಲ ಸುಮಾರು 20 ಅಡಿ ಮತ್ತು ಉದ್ದ 3೦ ಅಡಿಗಳು. ಇದರಲ್ಲಿ 12 ರಿಂದ 16 ಚಕ್ರಗಳಿರುತ್ತವೆ, ಪ್ರತಿಯೊಂದು 6 ಅಡಿ ವ್ಯಾಸದ್ದು ಆಗಿದೆ.

ಶಿವಮೊಗ್ಗ ಕೋಟೆ ಮಾರಿಕಾಂಬ ಜಾತ್ರೆಯ ರಥ ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ರಥವನ್ನು ಎಳೆಯುತ್ತಾರೆ.
ಮೂರನೇ ದಿನ ನಡೆಯುವ ಈ ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ಹಗ್ಗಗಳನ್ನು ಹಿಡಿದು ರಥವನ್ನು ಎಳೆಯುತ್ತಾರೆ. ಲಕ್ಷಾಂತರ ಜನರು ಸುತ್ತುಮುತ್ತಲು ನಿಂತುಕೊಂಡು ದೇವಿಯ ದರ್ಶನ ಪಡೆಯುತ್ತಾರೆ.

ನಗರದ ಮುಖ್ಯ ರಸ್ತೆಗಳಲ್ಲಿ 5 ಕಿ.ಮೀ. ಮಾರ್ಗದಲ್ಲಿ ರಾತ್ರಿಯಲ್ಲಿ ನಡೆಯುವ ಈ ರಥಯಾತ್ರೆಯಲ್ಲಿ ಭಕ್ತರ ಜನಸಾಗರವೇ ರಥವನ್ನು ಮುಂದಕ್ಕೆ ಚಲಿಸುವಂತೆ ಮಾಡುತ್ತದೆ. 

 ಶಿವಮೊಗ್ಗ ಕೋಟೆ ಮಾರಿಕಾಂಬ ಜಾತ್ರೆಯ ರಥ ಎಳೆಯುವಲ್ಲಿ ಸ್ಥಳೀಯ ಪೊಲೀಸ್ ಇಲಾಖೆ, ಜಾತ್ರಾ ಸಮಿತಿ ಮತ್ತು ಸ್ವಯಂಸೇವಕರಿಂದ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ.

ಪೊಲೀಸ್ ಮತ್ತು ಟ್ರಾಫಿಕ್ ನಿಯಂತ್ರಣ:
ಜಾತ್ರೆಯಲ್ಲಿ ಮತ್ತು ರಥ ಎಳೆಯುವ ಮಾರ್ಗದಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸಿ ರಸ್ತೆಯನ್ನು ಮುಚ್ಚಿ, ಟ್ರಾಫಿಕ್ ವ್ಯವಸ್ಥೆ ಮಾಡಲಾಗುತ್ತದೆ. ಸಿಸಿಸಿ ಟಿವಿ ಮತ್ತು ಡ್ರೋನ್‌ಗಳ ಮೂಲಕ ನಿಗಾ ಇರುತ್ತದೆ, ಜನಸಮೂಹದ ನಿಯಂತ್ರಣಕ್ಕೆ ಬ್ಯಾರಿಕೇಡ್‌ಗಳು ಹಾಕಲಾಗುತ್ತವೆ.

ಆರೋಗ್ಯ ಮತ್ತು ತುರ್ತು ಸೇವೆಗಳು:
ಆಂಬುಲೆನ್ಸ್‌ಗಳು, ಮೆಡಿಕಲ್ ತಂಡಗಳು ಮಾರ್ಗದಲ್ಲಿ ನಿಯೋಜಿಸಲಾಗುತ್ತದೆ. ಭಕ್ತರ ದಟ್ಟಣೆ ತಡೆಗೆ ಸ್ವಯಂಸೇವಕರು ಮಾರ್ಗದರ್ಶನ ನೀಡುತ್ತಾರೆ.ಅಗ್ನಿಶಾಮಕ ದಳ ನಿಯೋಜನೆ, ಈ ಸಂದರ್ಭದಲ್ಲಿ ಮಹಿಳೆಯರಿಗೆ ವಿಶೇಷವಾಗಿ ಪ್ರಾಧಾನ್ಯತೆ ನೀಡಲಾಗುತ್ತದೆ.

 ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ  ಸಮಿತಿಯ ಪದಾಧಿಕಾರಿಗಳಾದ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಎನ್.,ಉಮಾಪತಿ, ಎಂ.ಕೆ.ಸುರೇಶ್‌ಕುಮಾರ್, ಹೆಚ್.ವಿ. ತಿಮ್ಮಪ್ಪ, ಎಸ್. ಹನುಮಂತಪ್ಪ, ಡಿ.ಎಂ. ರಾಮಯ್ಯ, ಎಸ್.ಸಿ. ಲೋಕೇಶ್, ಸೀತಾರಾಮ್ ನಾಯಕ್, ಟಿ.ಎಸ್.ಚಂದ್ರಶೇಖರ್, ಎ.ಹೆಚ್. ಸುನೀಲ್, ಪೂಜಾ ಕನ್ವೀನಿಯರ್ ಸತ್ಯನಾರಾಯಣ್ , ವಿ. ರಾಜು, ಶ್ರೀಧರ್ ಮೂರ್ತಿ ನವುಲೆ, ಪ್ರಕಾಶ್, ಹರೀಶ್‌ಲಾಲು, ಸೋಮಶೇಖರ್ ನಾಡಿಗ್, ಮುಂತಾದವರು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.