ನಾಲ್ಕು ವರ್ಷದಿಂದ ಲೆಕ್ಕಪತ್ರ ಕೊಡದ.ಶಿವಮೊಗ್ಗ ಕೋಟೆ ಶ್ರೀ ಮಾರಿಕಾಂಬ ಸೇವಾ ಸಮಿತಿಯ ಅಧ್ಯಕ್ಷರಿಗೆ ಮತ್ತು ಪ್ರಧಾನ ಕಾರ್ಯದರ್ಶಿಗೆ ಸಹಕಾರ ಇಲಾಖೆಯಿಂದ ನೋಟಿಸ್!!
ಶಿವಮೊಗ್ಗ:ಕಳೆದ 2021- 2022 ನೇ ಸಾಲಿನಿಂದ ನಾಲ್ಕು ವರ್ಷಗಳಿಂದ ನಗರದ ಪ್ರತಿಷ್ಠಿತ ಕೋಟೇ ಶ್ರೀ ಮಾರಿಕಾಂಬ ಸಮಿತಿಯ ವಾರ್ಷಿಕ ಸಭೆ ನಡೆಸಿಲ್ಲ. ಲೆಕ್ಕಪತ್ರ ಮಂಡನೆ ಆಗಿಲ್ಲ.2026 ನೇ ಸಾಲಿನಲ್ಲಿ ಬರುವ ತಿಂಗಳು (ಫೆಬ್ರವರಿ) ಮಾರಿಕಾಂಬಜಾತ್ರೆಗೆ ಸಿದ್ದತೆ ನಡೆಯುತ್ತಿದ್ದು, ಈವರೆಗೂ ಸರ್ವಸದಸ್ಯರ ಸಭೆ ನಡೆಸಿಲ್ಲ. ಕಳೆದ ಜಾತ್ರೆಯ ಲೆಕ್ಕಪತ್ರವನ್ನು ಸಮಿತಿಯ ಪ್ರಧಾನಕಾರ್ಯದರ್ಶಿ, ಮಂಡಿಸಿಲ್ಲ ಎಂದು ಶಿವಮೊಗ್ಗದ ಸಹಕಾರ ಸಂಘಗಳ ನೋಂದಾಣಾಧಿಕಾರಿಗಳಿಗೆ ಮತ್ತು ಮಹಾ ನಿಬಂಧಕರು ಬೆಂಗಳೂರು ಇವರುಗಳಿಗೆ ಲಿಖಿತವಾಗಿ ಹಲೋ ಶಿವಮೊಗ್ಗ ದಿನಪತ್ರಿಕೆಯ ಸಂಪಾದಕರಾದ ಡಿ.ಜಿ.ನಾಗರಾಜ್ ಇವರು ಸಹಕಾರ ಇಲಾಖೆಗೆ ನೀಡಿದ್ದರು.
ಶಿವಮೊಗ್ಗದ ಸಹಕಾರ ಸಂಘಗಳ ನೋಂದಾಣಾಧಿಕಾರಿಗಳು, ಮತ್ತು ಉಪ ನೊಂದಾಣಿಕಾರಿಗಳು,ಮಹಾ ನಿಬಂಧಕರು ಬೆಂಗಳೂರು ಇವರಿಂದ ಕೋಟೆ ಮಾರಿಕಾಂಬ ಸಮಿತಿಯ ಅಧ್ಯಕ್ಷರು ಮತ್ತು ಪ್ತಧಾನ ಕಾರ್ಯದರ್ಶಿ ಗರ ನೋಟಿಸ್ ಜಾರಿಯಾಗಿದೆ.
ಕೋಟೆ ಮಾರಿಕಾಂಬ ಸಮಿತಿಯಲ್ಲಿ , ಕಾಲ ಕಾಲಕ್ಕೆ ಸಭೆ , ಲೆಕ್ಕಪತ್ರಗಳು ನಡೆಯದೆ ಇರುವುದರಿಂದ ಸಮಿತಿಯ ಪ್ರಧಾನಕಾರ್ಯದರ್ಶಿ ವಿರುದ್ದ ಸಮಿತಿ ಅಧ್ಯಕ್ಷರಾದ ಎಸ್ ಕೆ ಮರಿಯಪ್ಪ ಅವರು ಗರಂ ಆಗಿದ್ದಾರೆ ಎನ್ನಲಾಗಿದೆ.
ಕಳೆದ ಬಾರಿ ಜಾತ್ರೆ ಮುಗಿದು ಈಗ ಮತ್ತೊಂದುಜಾತ್ರೆ ಬರುತ್ತಿರುವಾಗ ನಾಲ್ಕು ವರ್ಷಗಳ ಲೆಕ್ಕಪತ್ರವನ್ನು ಪ್ರಧಾನಕಾರ್ಯದರ್ಶಿ ಮತ್ತು ಖಜಾಂಚಿ ಅವರುಗಳು ಲೆಕ್ಕಪತ್ರವನ್ನು ಸಭೆಗೆ ಮಂಡಿಸಿಲ್ಲ.
ಇದುವರೆಗೂ ಸರ್ವಸದಸ್ಯರ ಸಭೆ ಕರೆದಿಲ್ಲ. ಸಭೆ ಕರೆಯುವಂತೆ ಅಧ್ಯಕ್ಷರು, ಪದಾಧಿಕಾರಿಗಳು ಸೂಚನೆ ನೀಡಿದ್ದರೂ ಪ್ರಧಾನ ಕಾರ್ಯದರ್ಶಿ ಮಂಜುನಾಥ ಇದುವರೆಗೂ ಸಭೆ ಕರೆಯದೆ ಇದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಫೆಬ್ರವರಿ ಕೊನೆಯಲ್ಲಿ ಜಾತ್ರೆ ನಡೆಸಲು ಸಿದ್ದತೆ ನಡೆದಿದ್ದು ಜಾತ್ರೆ ಮುಂಚೆಯೇ ಕಳೆದ ನಾಲ್ಕುವರ್ಷಗಳ ಮತ್ತು ಕಳೆದ ಜಾತ್ರೆಯ ಲೆಕ್ಕಪತ್ರವನ್ನು ಸರ್ವಸದಸ್ಯರ ಸಭೆಗೆ ಮಂಡಿಸದೆ ಇರುವುದು ಸರಿಯಲ್ಲ ಎಂಬ ಮಾತುಗಳು ಸಮಿತಿಯವರಿಂದಲೆ ಕೇಳಿ ಬರುತ್ತಿದೆ. ಸಮಿತಿಯಲ್ಲಿ ಪ್ರಧಾನಕಾರ್ಯದರ್ಶಿ ಸರ್ವಾಧಿಕಾರಿಯಂತೆ ವರ್ತಿಸುತ್ತಿರುವುದು ಅಧ್ಯಕ್ಷರಾದ ಮರಿಯಪ್ಪ ಅವರು ಸೇರಿದಂತೆ ಹಿರಿಯ ಪದಾಧಿಕಾರಿಗಳಿಗೆ ತೀವ್ರ ಬೇಸರ ತರಿಸಿದೆ ಎನ್ನಲಾಗುತ್ತಿದೆ.
ಸರ್ವಸದಸ್ಯರ ಸಭೆ ನಡೆಸದೆ, ಕಳೆದ ಬಾರಿ ಜಾತ್ರೆಯ ಲೆಕ್ಕಪತ್ರ ಮಂಡಿಸದೆ 2026 ನೇ ಸಾಲಿನಲ್ಲಿ ಫೆಬ್ರವರಿಯಲ್ಲಿ ಪ್ರತಿಷ್ಠಿತ ಶಿವಮೊಗ್ಗ ಕೋಟೇ ಶ್ರೀ ಮಾರಿಕಾಂಬ ದೇವಿ ಜಾತ್ರೆ ನಡೆಸುವುದು ಸೂಕ್ತವಲ್ಲ.ಮುಂದೇನಾಗುವುದು ಕಾನೂನು ಕ್ರಮ ಎಂಬುದು ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚಿತವಾಗುತ್ತಿರುವ ವಿಷಯವಾಗಿದೆ.

Leave a Comment