ನಾಪತ್ತೆಯಾಗಿದ್ದ ಶಿಕಾರಿಪುರದ ಶಾಲಾ ಬಾಲಕರು ಶಿವಮೊಗ್ಗದಲ್ಲಿ ಪತ್ತೆ

ಶಿವಮೊಗ್ಗ : ಶಿಕಾರಿಪುರದಲ್ಲಿ ಹೋರಿಹಬ್ಬವನ್ನು ನೋಡಲು ಶಾಲೆಗೆ ಹೋಗದೆ ತೆರಳಿದ್ದ ಮೂವರು ಬಾಲಕರು (ಲಿಖಿತ್, ಪ್ರಥಮ್ ಮತ್ತು ಸಂದೀಪ್), ಟೈಂ ಆಗಿದ್ದರಿಂದದ ಮನೆಗೆ ಹೋಗದೆ ನಾಪತ್ತೆಯಾಗಿದ್ದರು. 

 ಪೋಷಕರಿಗೆ ಹೆದರಿ ಮಕ್ಕಳು ಅಲ್ಲಿ ಇಲ್ಲಿ ಓಡಾಡುತ್ತಿದ್ದರು. ಈ ನಡುವೆ ಫೋಷಕರು ಗಾಬರಿಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದೇ ಹೊತ್ತಿಗೆ ಮಕ್ಕಳು ಶಿವಮೊಗ್ಗಕ್ಕೆ ಬಂದು ಮನೆಯವರಿಗೆ ಕರೆ ಮಾಡಿದ್ದಾರೆ. 

ಈ ನಿಟ್ಟಿನಲ್ಲಿ ಶಿವಮೊಗ್ಗ ದೊಡ್ಡಪೇಟೆ ಪೊಲೀಸರು ಖಾಸಗಿ ಬಸ್ ನಿಲ್ದಾಣದಲ್ಲಿ ಬಾಲಕರನ್ನು ಪತ್ತೆ ಹಚ್ಚಿ ಬಳಿಕ ಪೋಷಕರ ಸುಪರ್ಧಿಗೆ ಒಪ್ಪಿಸಿದ್ದಾರೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.