ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ವಿಸ್ತರಣೆ ಸಧ್ಯಕ್ಕೆ ಇಲ್ಲ: ವಾರ್ಡ್ ವಾರು ಮೀಸಲಾತಿ ನಿಗದಿಪಡಿಸುವ ಪ್ರಕ್ರಿಯೆಗೆ ಚಾಲನೆ
ಶಿವಮೊಗ್ಗ:ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ವಿಸ್ತರಣೆ ಸಧ್ಯಕ್ಕೆ ಇಲ್ಲ.ವಾರ್ಡ್ ವಿಸ್ತರಣೆ ಊಹಾಪೋಹಗಳು ಸುಳ್ಳು.ವಾರ್ಡ್ ವಾರು ಮೀಸಲಾತಿ ನಿಗದಿಪಡಿಸುವ ಪ್ರಕ್ರಿಯೆಗೆ ಸರ್ಕಾರ ಚಾಲನೆ ನೀಡಿದೆ, ಬರುವ 3-4 ತಿಂಗಳಲ್ಲಿ ವಾರ್ಡ್ ಮೀಸಲಾತಿಯ ಪ್ರಕಟಣೆ ಹೊರಬಿಳಲಿದೆ. ನಂತರ ಪಾಲಿಕೆ ಚುನಾವಣೆಗೆ ದಿನಾಂಕವನ್ನು ನಿಗಧಿ ಮಾಡಲಾಗುತ್ತದೆ ಎಂದು ಶಿವಮೊಗ್ಗ ಮಹಾನಗರ ಪಾಲಿಕೆ ಅಧಿಕಾರಿಗಳ ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸದ್ಯಕ್ಕೆ 35 ವಾರ್ಡ್ಗೆ ಚುನಾವಣೆ: ವಿಸ್ತರಣೆ ಊಹಾಪೋಹಗಳು ಸುಳ್ಳು
ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸದ್ಯಕ್ಕೆ 35 ವಾರ್ಡ್ ಗಳು ಹೊಂದಿದೆ.2011 ರ ಜನಗಣತಿಯ ಪ್ರಕಾರ 3.22 ಲಕ್ಷ ಜನಸಂಖ್ಯೆ ಹೊಂದಿದೆ.
ಶಿವಮೊಗ್ಗ ಪಾಲಿಕೆ ವ್ಯಾಪ್ತಿಯಲ್ಲಿ 19 ಹಳ್ಳಿಗಳ ಸೇರ್ಪಡೆ ಯೊಂಧಿಗೆ ವಾರ್ಡ್ ವಿಸ್ತರಣೆಗೆ ಪ್ರಸ್ತಾಪವನ್ನು ಈ ಹಿಂದೆ ಮಾಡಲಾಗಿತ್ತು.
ಆದರೆ ವಾರ್ಡ್ ವಿಸ್ತರಣೆಗೆ ಕರ್ನಾಟಕ ಮಹಾನಗರಗಳ ಸಂಸ್ಥೆಗಳು ಕಾಯ್ದೆ 1976 ಮಾನದಂಡಗಳು ಸಾಕಷ್ಟು ಇದ್ದು, ಇದರಲ್ಲಿನ 18 ರಿಂದ 20 ಅಂಶಗಳ ಮಾನದಂಡಗಳು ಅದನ್ನು ಕಾರ್ಯಗತ ಮಾಡಲು ಸಾಧ್ಯವಾಗುತ್ತಿಲ್ಲ.ಆಗಾಗಿ ವಾರ್ಡ್ ವಿಸ್ತರಣೆ ಅಸಾಧ್ಯ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.
ಶಿವಮೊಗ್ಗದಲ್ಲಿ ಜನರು ಹೇಗೆ ಹೆಚ್ಚಿಗೆ ಇದ್ದಾರೆ. ಜಿಗಿಜಗಿ ಅಂತಾ ಕಾಣುತ್ತದೆ ಅದೇ ರೀತಿಯಲ್ಲಿ 19 ಹಳ್ಳಿಗಳಲ್ಲಿ ಜನಸಂಖ್ಯೆ ಜಿಗಿಜಿಗಿ ಅಂತ ಇರಬೇಕು.ಆ ರೀತಿಯಲ್ಲಿ ಜನಸಂಖ್ಯೆ ಸಹ ಇಲ್ಲ. ಅದೇ ರೀತಿ ಕೃಷಿ ಭೂಮಿ ಹೆಚ್ಚಿರಬಾರದು, ಕಮರ್ಷಿಯಲ್ ಕಾಂಪ್ಲೆಕ್ಸ್, ವ್ಯಾಪಾರ ವಹಿವಾಟು ಇರಬೇಕು ಪ್ರಮುಖವಾಗಿ ಜನಸಂಖ್ಯೆ ಪ್ರಮಾಣ ಇಲ್ಲದ ಕಾರಣ ಮತ್ತು ಜನಸಂಖ್ಯೆ ಗಣತಿ ಕಾರ್ಯಕೂಡ ನಡೆಯುತ್ತಿರುವುದರಿಂದ ಹಾಗೂ ಸದ್ಯದಲ್ಲಿಯೇ ತಾಲ್ಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆ ನಡೆಸಲು ಹೈಕೋರ್ಟ್ ಸೂಚಿಸಿದ್ದರ ಹಿನ್ನೆಲೆಯಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ವಾರ್ಡ್ ವಿಸ್ತರಣೆ ಸದ್ಯಕ್ಕೆ ಇಲ್ಲವೆಂದು ತಿಳಿದುಬಂದಿದೆ.
ಶಿವಮೊಗ್ಗ ಮಹಾನಗರ ಪಾಲಿಕೆಯ ಚುನಾಯಿತ ಸದಸ್ಯರುಗಳ ಅವಧಿಯು 27/11/2023 ರಂದು ಮುಕ್ತಾಯಗೊಂಡಿದೆ.
ಈ ಕುರಿತಂತೆ ಚುನಾವಣೆ ನಡೆಸುವ ಬಗ್ಗೆ 7-2-2024 ರಂದು ಸರ್ಕಾರಕ್ಕೆ ಅದಿಕೃತ ಪ್ರಸ್ತಾವನೆ ಸಲ್ಲಿಸಲಾಗಿದೆ.
ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಗೆ ಹೊಸ ಪ್ರದೇಶಗಳ ಸೇರ್ಪಡೆ ಹಾಗೂ ವಾರ್ಡ್ ಗಳ ಮೀಸಲಾತಿ ಪ್ರಕ್ರಿಯೆಗಳು ಇನ್ನೂ ಅಂತಿಮ ಹಂತ ತಲುಪದಿರುವುದು ಚುನಾವಣೆ ವಿಳಂಬಕ್ಕೆ ಕಾರಣವಾಗಿದೆ ಅಂತಾ ಹೇಳಲಾಗುತ್ತಿತ್ತು. ಇದು ಸುಳ್ಳು..ಸತ್ಯವೇ ಬೇರೆಯಾಗಿದೆ.
ನಗರಾಭಿವೃದ್ದಿ ಮತ್ತು ನಗರ ಯೋಜನೆ ಸಚಿವರು ಕಾನೂನಾತ್ಮಕ ಅಡೆತಡೆಗಳನ್ನು ನಿವಾರಿಸಿ, ಶಿವಮೊಗ್ಗ ಪಾಲಿಕೆ ಚುನಾವಣೆಯನ್ನು ಕೂಡಲೇ ನಡೆಸಬೇಕು. ಪ್ರಜಾಪ್ರಭುತ್ವದ ಆಶಯದಂತೆ ಸ್ಥಳೀಯ ಆಡಳಿತಕ್ಕೆ ಚಾಲನೆ ನೀಡಬೇಕೆಂದು’ ಸ್ಥಳಿಯ ಶಿವಮೊಗ್ಗ ಶಾಸಕರು ಚೆನ್ನ ಬಸಪ್ಪ ಇತ್ತೀಚೆಗೆ ಸದನದಲ್ಲಿ ಆಗ್ರಹಿಸಿದ್ದರು.
ಸದರಿ ಪಾಲಿಕೆಯಲ್ಲಿ ಸುಗಮ ಆಡಳಿತ ನಿರ್ವಹಣೆಗಾಗಿ 28/11/2023 ರಿಂದಲೇ ಅನ್ವಯವಾಗುವಂತೆ ಬೆಂಗಳೂರಿನ ಪ್ರಾದೇಶಿಕ ಆಯುಕ್ತರನ್ನು ಆಡಳಿತಾಧಿಕಾರಿಯಾಗಿ ನಿಯೋಜಿಸಲಾಗಿದೆ’ ಎಂದು ನಗರಾಭಿವೃದ್ದಿ ಸಚಿವರು ಸದನದಲ್ಲಿ ಉತ್ತರಿಸಿದ್ದಾರೆ.
ಕರ್ನಾಟಕ ಮಹಾನಗರ ಸಂಸ್ಥೆಗಳ ಕಾಯ್ದೆ, 1976 (ಕರ್ನಾಟಕ ಅಧಿನಿಯಮ ಸಂಖ್ಯೆ 14, 1977) ಪ್ರಕಾರ, ವಾರ್ಡ್ ವಿಸ್ತರಣೆಗೆ ಮುಖ್ಯ ಮಾನದಂಡಗಳು:
ಜನಸಂಖ್ಯೆ, ಭೌಗೋಳಿಕ ಪ್ರದೇಶ ಮತ್ತು ಚುನಾವಣಾ ನ್ಯಾಯಪೂರ್ಣತೆಯನ್ನು ಆಧರಿಸಿವೆ.
ಈ ಕಾಯ್ದೆಯ ಸೆಕ್ಷನ್ 5 ಮತ್ತು ಸಂಬಂಧಿತ ನಿಬಂಧನೆಗಳು larger urban area ಗಳನ್ನು ವಿಸ್ತರಿಸುವುದರೊಂದಿಗೆ ವಾರ್ಡ್‌ಗಳ ವಿಭಜನೆಯನ್ನು ನಿಯಂತ್ರಿಸುತ್ತವೆ.
ವಾರ್ಡ್ ವಿಸ್ತರಣೆ ಮಾನದಂಡಗಳುಕಾಯ್ದೆಯ 16ನೇ ಅಧ್ಯಾಯದಡಿ, ವಾರ್ಡ್‌ಗಳ ಸಂಖ್ಯೆಯನ್ನು ನಿಗದಿಪಡಿಸಲು ಜನಸಂಖ್ಯೆ ಆಧಾರವಾಗಿದೆ:
3 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆಗೆ ಕನಿಷ್ಠ 30 ವಾರ್ಡ್‌ಗಳು; ಪ್ರತಿ ಹೆಚ್ಚುವರಿ 1 ಲಕ್ಷಕ್ಕೆ 5 ವಾರ್ಡ್‌ಗಳು ಸೇರ್ಪಡೆ ಇದು ನಿಯಮ.
ಭೌಗೋಳಿಕ ಸಮತೋಲನಕ್ಕಾಗಿ ಒಂದು ವಾರ್ಡ್‌ಗೆ 0.5 ರಿಂದ 1 ಚದರ ಕಿ.ಮೀ. ಪ್ರದೇಶವನ್ನು ಗಮ್ಯವಹಿಸಲಾಗುತ್ತದೆ, ಆದರೆ ಜನಸಂಖ್ಯೆಯ ಅಸಮಾನತೆ 10%ಗಿಂತ ಹೆಚ್ಚು ಇರಬಾರದು.
ಸುಧಾರಣೆಗಳ ಪ್ರಭಾವ:2021ರ ಕರ್ನಾಟಕ ಮಹಾನಗರ ಸಂಸ್ಥೆಗಳ (ತಿದ್ದುಪಡಿ) ಕಾಯ್ದೆಯು ವಾರ್ಡ್ ರಚನೆಗೆ 74ನೇ ಸಂವಿಧಾನ ತಿದ್ದುಪಡಿಯನ್ನು ಸಮನ್ವಯಗೊಳಿಸಿದ್ದು, ಆರ್‌ಬಿಆರ್ (Reservation) ಮತ್ತು ಡೆಲಿಮಿಟೇಷನ್ ಸಮಿತಿಗಳ ಮೂಲಕ ಪುನರ್ ವಿಭಜನೆಯನ್ನು ಶಿಫಾರಸು ಮಾಡುತ್ತದೆ.
ಸದ್ಯಕ್ಕೆ ಪಾಲಿಕೆ ವಾರ್ಡ್ ವಿಸ್ತರಣೆ ಇಲ್ಲ: ಪಾಲಿಕೆ ಆಯುಕ್ತ ಮಾಯಣ್ಣಗೌಡ
ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ವಿಸ್ತರಣೆ ಬಗ್ಗೆ ಊಹಾಪೋಹಗಳ ಬಗ್ಗೆ ನಮ್ಮ ಹಲೋ ಶಿವಮೊಗ್ಗ ದಿನಪತ್ರಿಕೆ ವತಿಯಿಂದ ಸಂಪರ್ಕಿಸಿದಾಗ ವಾರ್ಡ್ ವಿಸ್ತರಣೆ ಸದ್ಯಕ್ಕೆ ಇಲ್ಲ.ಈ ಹಿಂದೆ ಇದ್ದ 35 ವಾರ್ಡ್ ಗಳಿಗೆ ಮೀಸಲಾತಿಯನ್ನು ಸರ್ಕಾರ ಸದ್ಯದಲ್ಲಿಯೇ ಪ್ರಕಟ ಮಾಡಲಿದೆ ಎಂದು ಸ್ಪಷ್ಟಪಡಿಸಿದರು.
ಸದ್ಯದಲ್ಲಿಯೇ ಸ್ಥಳೀಯ ಸಂಸ್ಥೆಗಳ ತಾಲ್ಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಯನ್ನು ಸರ್ಕಾರ ಘೋಷಣೆ ಮಾಡಲಿದ್ದು. ಈ ಚುನಾವಣೆಗಳು ನಡೆದ ನಂತರ ಶಿವಮೊಗ್ಗ ಮಹಾನಗರ ಪಾಲಿಕೆಯ ಚುನಾವಣೆ ಕಡೆಗೆ ಗಮನಹರಿಸಲಿದೆ. ಸದ್ಯದಲ್ಲಿಯೇ ಈ ಹಿಂದೆ ಇದ್ದ ಶಿವಮೊಗ್ಗ ಮಹಾನಗರ ಪಾಲಿಕೆಯ 35 ವಾರ್ಡ್ ಗಳಿಗೆ ಮೀಸಲಾತಿ ಪ್ರಕಟವಾಗಲಿದೆ ಎಂದು ಪಾಲಿಕೆ ಆಯುಕ್ತರು ಶ್ರೀಯುತ ಮಾಯಣ್ಣಗೌಡರು ತಿಳಿಸಿದರು.
ಇದು ಮುಂದಿನ ಪಾಲಿಕೆ ಚುನಾವಣೆಗೆ ಸ್ಪರ್ಧಿಸಲು ತಯಾರಿರುವ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ ಅಂತಲೇ ಹೇಳಬಹುದು.ಶಿವಮೊಗ್ಗ ಮಹಾನಗರ ಪಾಲಿಕೆಯ ಚುನಾಯಿತ ಸದಸ್ಯರುಗಳ ಅವಧಿಯು 27/11/2023 ರಂದು ಮುಕ್ತಾಯಗೊಂಡಿತ್ತು.ಇದೀಗ ಮಾಜಿ ಕಾರ್ಪೋರೇಟ್ ರ್ ಗಳು ಚುನಾವಣೆ ಕನಸು ಕಾಣುತ್ತಿದ್ದವರಿಗೆ ಸಿಹಿ ಸುದ್ದಿ ಅಂತಲೇ ಹೇಳಬಹುದು. ವಾರ್ಡ್ ಮೀಸಲಾತಿಯ ಪ್ರಕಟಣೆಯ ನಂತರ ಪಾಲಿಕೆ ಚುನಾವಣೆ ಬಿಸಿ ತಟ್ಟಲಿದೆ.
ರಾಜ್ಯ ಸರ್ಕಾರವು ಚುನಾವಣಾ ಆಯೋಗದ ಸಲಹೆಯ ಮೇರೆಗೆ ವಾರ್ಡ್‌ಗಳನ್ನು ವಿಸ್ತರಿಸಬಹುದು.

Leave a Comment