DCC ಕೇಂದ್ರ ಬ್ಯಾಂಕ್, ಶಿವಮೊಗ್ಗ -2024-25 ನೇ ಸಾಲಿನಲ್ಲಿ ಒಟ್ಟು ರೂ.36.75 ಕೋಟಿ ಲಾಭಗಳಿಸಿದೆ:ಬ್ಯಾಂಕಿನ ಅಧ್ಯಕ್ಷ ಡಾ|| ಆರ್, ಎಂ. ಮಂಜುನಾಥಗೌಡ ಮಾಹಿತಿ

ಶಿವಮೊಗ್ಗ.:ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ನಿ, ಶಿವಮೊಗ್ಗ 2024-25 ನೇ ಸಾಲಿನಲ್ಲಿ ಒಟ್ಟು ರೂ.36.75 ಕೋಟಿ ಲಾಭಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷರಾದಡಾ|| ಆರ್, ಎಂ. ಮಂಜುನಾಥಗೌಡರು ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿಯನ್ನು ನೀಡಿದರು.
ಇದೇ ಸಂದರ್ಭದಲ್ಲಿ ಎಲ್ಲಾ ಮಾಧ್ಯಮ ಮಿತ್ರರಿಗೆ “ಕ್ರಿಸ್‌ಮಸ್ ಹಬ್ಬ, ಹೊಸ ವರ್ಷ 2026 ಹಾಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳನ್ನು ತಿಳಿಸಿದರು.
ಪತ್ರಿಕಾಗೋಷ್ಠಿಗೆ ಮುಂಚೆ ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ನಿ,ದ 2026 ನೇ ಸಾಲಿನ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿದರು.

ಇಂದು ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ನಿ, ಶಿವಮೊಗ್ಗದ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಷೇರು ಬಂಡವಾಳ ರೂ.155.34 ಕೋಟಿ ಹಾಗೂ ನಿಧಿಗಳು ರೂ.91.98 ಕೋಟಿ, ದುಡಿಯುವ ಬಂಡವಾಳ
ರೂ.2523.86 ಕೋಟಿ, ನೆಟ್‌ ವರ್ತ್ ರೂ.215.94 ಕೋಟಿ, ಸಿಆರ್‌ಎಆರ್ ಶೇ.12.38, ನಿವ್ವಳ ಎನ್.ಪಿ.ಎ
ಪ್ರಮಾಣ ಶೇ.0.88, ಒಟ್ಟಾರೆ ಬ್ಯಾಂಕಿನ ವ್ಯವಹಾರವು ವಾರ್ಷಿಕ ರೂ.3700.00 ಕೋಟಿ ತಲುಪಿದ್ದು, ನಬಾರ್ಡ್
ಪರಿವೀಕ್ಷಣಾ ವರದಿಯಲ್ಲ " ದರ್ಜೆ ಪಡೆದಿರುತ್ತದೆ ಎಂದರು.
ಪತ್ರಿಕಾಗೋಷ್ಠಿಗೆ ಮುಂಚೆ ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ನಿ,ದ 2026 ನೇ ಸಾಲಿನ ನೂತನ ವರ್ಷದ ಡೈರಿ ಬಿಡುಗಡೆ ಮಾಡಿದರು.
ಬ್ಯಾಂಕಿನಿಂದ ಬಾರಂದೂರು, ಚಿಕ್ಕಪೇಟೆ ನಗರ, ತ್ಯಾಗರ್ತಿ ಹಾಗೂ ಗಾಜನೂರು ಗ್ರಾಮಗಳಲ್ಲಿ ಒಟ್ಟು 4 ನೂತನ
ಶಾಖೆಗಳನ್ನು ತೆರೆಯಲಾಗಿದ್ದು, ಜನವರಿ-2026 ರ ಮಾಹೆಯಲ್ಲಿ ತೀರ್ಥಹಳ್ಳಿಯ ಎ.ಪಿ.ಎಂ.ಸಿ ಆವರಣದಲ್ಲಿ ನೂತನ
ಶಾಖೆಯನ್ನು ಆರಂಭಿಸಲಾಗುವುದು ಎಂದರು.

  2026 ನೇ ಸಾಲಿನಲ್ಲಿ ಇನ್ನು 14 ಶಾಖೆಗಳನ್ನು ಈ ಕೆಳಕಂಡ ಸ್ಥಳಗಳಲ್ಲಿ ಪ್ರಾರಂಭಿಸುವ ಬಗ್ಗೆ ಪ್ರಸ್ತಾವನೆ ಆರ್.ಬಿ.ಐ ಗೆ ಸಲ್ಲಿಸಲಾಗಿದೆ ಎಂದರು.

ಶಿವಮೊಗ್ಗ ತಾಲ್ಲೂಕು ನವಲೆ, ಆಯನೂರು, ಕಾಚಿನಕಟ್ಟೆ ಹಾಗೂ ಹೊಳಲೂರು ಗ್ರಾಮಗಳಲ್ಲಿ
ಭದ್ರಾವತಿ ತಾಲ್ಲೂಕು ಆನವೇರಿ ಗ್ರಾಮದಲ್ಲಿ.
ತೀರ್ಥಹಳ್ಳಿ ತಾಲ್ಲೂಕು ಬಿ.ಬಿ.ಮೇಗರವಳ್ಳಿ, ದೇವಂಗಿ, ಅರಗ, ಕಟ್ಟೆಹಕ್ಕಲು ಗ್ರಾಮಗಳಲ್ಲಿ.
ಸಾಗರ ತಾಲ್ಲೂಕು ಬ್ಯಾಕೋಡು ಗ್ರಾಮದಲ್ಲಿ
ಸೊರಬ ತಾಲ್ಲೂಕು ಕುಪ್ಪಗಡ್ಡೆ ಹಾಗೂ ಚಂದ್ರಗುತ್ತಿ ಗ್ರಾಮಗಳಲ್ಲ.
ಶಿಕಾರಿಮರ ತಾಲ್ಲೂಕು ಹಿತ್ತ ಗ್ರಾಮದಲ್ಲ
ಹೊಸನಗರ ತಾಲ್ಲೂಕು ನಿಟ್ಟೂರು ಗ್ರಾಮಗಳಲ್ಲಿ ತೆರಯಲಾಗುವುದು ಎಂದರು.

* ರೂ.1720.58 ಕೋಟಿ ಠೇವಣಿ ಸಂಗ್ರಹಣೆಯಾಗಿರುತ್ತದೆ.
ನಬಾರ್ಡ್ ಪುನರ್ಧನ ಸೌಲಭ್ಯ ಕಡಿತಗೊಂಡಿದಾಗ್ಯೂ ಬ್ಯಾಂಕಿನಿಂದ 2025-26 ನೇ ಸಾಲಿನಲ್ಲಿ ಶೂನ್ಯ ಬಡ್ಡಿ
ದರದಲ್ಲಿ ಅಲ್ಪಾವಧಿ ಕೃಷಿ ಬೆಳೆ ಸಾಲ 105990 ರೈತರಿಗೆ ರೂ.1250.30 ಕೋಟಿ ಸಾಲ ನೀಡಲಾಗಿದೆ ಎಂದರು.

 ಸಾಲವಸೂಲಾತಿ ಶೇ 99.02 ರಷ್ಟಿರುತ್ತದೆ.
* ಮಧ್ಯಮಾವಧಿ ಕೃಷಿ ಸಾಲ ಪ್ರಸಕ್ತ ದಿನಾಂಕದವರೆಗೆ 697 ರೈತರಿಗೆ ರೂ.15.21 ಕೋಟಿಒದಗಿಸಲಾಗಿದೆ ಎಂದರು.

ಸಾಲ ಸೌಲಭ್ಯ
> ಸ್ವ-ಸಹಾಯ ಸಂಘಗಳಗೆ 3488 ರೂ.157.22 ಕೋಟಿ ಸಾಲ ವಿತರಿಸಲಾಗಿದ್ದು, ಸಾಲ ವಸೂಲಾತಿ ಶೇ.98.00
ಇರುತ್ತದೆ ಎಂದರು.

ಬ್ಯಾಂಕಿನ ಶಾಖೆಗಳ ಮೂಲಕ 17937 ವ್ಯಕ್ತಿಗಳಿಗೆ ಕೃಷಿಯೇತರ ಸಾಲ ರೂ. 643.37 ಕೋಟಿ ಸಾಲ
ನೀಡಲಾಗಿದ್ದು, ಒಟ್ಟಾರೆ ಸಾಲ ನೀಡಿಕೆ ರೂ.1800,00 ಕೋಟಿ ಆಗಿರುತ್ತದೆ ಎಂದರು

* 2025-26 ನೇ ಸಾಲಿನಲ್ಲಿ ಬ್ಯಾಂಕಿನಿಂದ 15626 ರೈತರಿಂದ ರೂ.4,75 ಕೋಟಿ ಬೆಳೆ ವಿಮೆ ಪ್ರೀಮಿಯಂ
ಪಾವತಿಸಲಾಗಿದ್ದು, ನವೆಂಬರ್-2025 ರ ಮಾಹೆಯಲ್ಲಿ ಬ್ಯಾಂಕಿನಿಂದ ವಿಮೆ ಪಾಟಿಸಿದವರ ಪೈಕಿ 11921 ರವರಿಗೆ
ರೂ.11.53 ಕೋಟಿ ವಿಮಾ ಪರಿಹಾರ ಮೊತ್ತ ಬಿಡುಗಡೆಯಾಗಿರುತ್ತದೆ ಎಂದರು.

ಪ್ರಸಕ್ತ ಸಾಲಿನ ಗುರಿಗಳ ವಿವರ :-

2025-26 ನೇ ಸಾಲಿನಲ್ಲಿ ಶೂನ್ಯ ಬಡ್ಡಿ ದರದಲ್ಲಿ ಅಲ್ಪಾವಧಿ ಕೃಷಿ ಬೆಳೆ ಸಾಲ ಒಟ್ಟು 120000 ರೈತರಿಗೆ
ರೂ.1300.00 ಕೋಟಿ ಹಾಗೂ ಶೇ.3 ರ ಬಡ್ಡಿ ದರದಲ್ಲಿ 1500 ರೈತರಿಗೆ ರೂ.80.00 ಕೋಟಿ ಮಧ್ಯಮಾವಧಿ ಕೃಷಿ
ಸಾಲ ಹಂಚಿಕೆ ಮಾಡುವ ಯೋಜನೆಯನ್ನು ಹೊಂದಲಾಗಿದೆ ಎಂದರು

2025-26 ನೇ ಸಾಅನ. 2100 ಸ್ವ-ಸಹಾಯ ಸಂಘಗಳಿಗೆ ರೂ.100.00 ಕೋಟಿ ಸಾಲ ವಿತರಿಸುವ
ಯೋಜನೆಯನ್ನು ಹೊಂದಲಾಗಿದೆ.
ಎಂದರು.

* ಬೆಂಕಿನಿಂದ ಪೆಟ್ರೋಲ್ ಬಂಕ್, ಟ್ರಾನ್ಸ್‌ಮೋರ್ಟ್ ಕಂಪನಿ, ಹಾಸ್ಪಿಟಲ್ ಮುಂತಾದ ಉದ್ಯಮಗಳಗೆ ಸಾಲ ನೀಡುವಮೂಲಕ ಕೃಷಿಯೇತರ ಸಾಲ ನೀಡಿಕೆ ಹೆಚ್ಚಿಸಲು ಕ್ರಮವಿಡಲಾಗಿದೆ.
> 2025-26 ನೇ ಸಾಲಿನಲ್ಲಿ ರೂ.1900.00 ಕೋಟಿ ಠೇವಣಿ ಸಂಗ್ರಹಿಸುವ ಗುರಿಯನ್ನು ಹೊಂದಲಾಗಿದೆ ಎಂದರು.

> ಮಾರ್ಚ್-2026 ರ ಅಂತ್ಯಕ್ಕೆ ರೂ.45.00 ಕೋಟ ನಿವ್ವಳ ಲಾಭ ಗಳಸುವ ಯೋಜನೆಯನ್ನು ಹೊಂದಲಾಗಿದೆ ಎಂದರು.

ಬ್ಯಾಂಕಿನಿಂದ ಸದ್ಯದಲ್ಲಿಯೇ ಐ.ಎಂ.ಪಿ.ಎಸ್ ಹಾಗೂ ಯು.ಪಿ.ಐ ಸೌಲಭ್ಯಗಳನ್ನು ಗ್ರಾಹಕರಿಗೆ ಒದಗಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ಮರಿಯಪ್ಪ, ಅಪೆಕ್ಸ್ ಬ್ಯಾಂಕ್ ಪ್ರತಿನಿಧಿ ಎಂ.ಶ್ರೀಕಾಂತ್. ನಿರ್ದೇಶಕರಾದ ಕೆ.ಪಿ.ದುಗ್ಗಪ್ಪಗೌಡ,ಜಿ.ಎನ್ ಸುದೀರ್,ಮಹಾಲಿಂಗಯ್ಯ ಶಾಸ್ತ್ರಿ,,ಸಿ.ಹನುಮಂತಪ್ಪ, ಮತ್ತಿತರರು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.